1. ಅಬಕಾರಿ ನೀತಿ ಹಗರಣ, ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಬಂಧನ
ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣಕ್ಕೆ (Delhi Liquor Policy Case) ಸಂಬಂದಿಸಿದಂತೆ ಕೇಂದ್ರ ತನಿಖಾ ದಳ(CBI)ದ ಅಧಿಕಾರಿಗಳು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ (Manish Sisodia Arrested) ಅವರನ್ನು ಭಾನುವಾರ ಬಂಧಿಸಿದ್ದಾರೆ. ಇನ್ನು ಬಂಧನ ಖಂಡಿಸಿ ಆಪ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ನಾಳೆ ಶಿವಮೊಗ್ಗದಲ್ಲಿ ರಾಜ್ಯದ 2ನೇ ಅತಿದೊಡ್ಡ ಏರ್‌ಪೋರ್ಟ್ ಲೋಕಾರ್ಪಣೆ; ಮೋದಿ ಕಾರ್ಯಕ್ರಮದ ವಿವರ ಏನು?
ತಾಲೂಕಿನ ಸೋಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣವನ್ನು (Shivamogga Airport) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಫೆ.27) ರಂದು ಲೋಕಾರ್ಪಣೆಗೊಳಿಸಲಿದ್ದು, ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿದೆ. ಬೆಳಗ್ಗೆ 11.35ಕ್ಕೆ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಮೋದಿ ಆಗಮಿಸಲಿದ್ದು, ಈ ವಿಮಾನವೇ ಅಧಿಕೃತವಾಗಿ ಲ್ಯಾಂಡ್ ಆಗಲಿರುವ ಪ್ರಥಮ ವಿಮಾನವಾಗಲಿದೆ. 11.45 ರಿಂದ 11.55ರ ವರೆಗೆ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಮೋದಿ ವೀಕ್ಷಣೆ ನಡೆಸಲಿದ್ದು, ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಏರ್ಪೋರ್ಟ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲದೆ, ಇದು ರಾಜ್ಯದಲ್ಲೇ ೨ನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಖ್ಯಾತಿಯನ್ನೂ ಹೊಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ನಾಳೆ ಕುಂದಾನಗರಿಯಲ್ಲಿ ಮೋದಿ ಮೇನಿಯಾ; ಪೌರ ಕಾರ್ಮಿಕ ಮಹಿಳೆ ಸೇರಿ ಐವರು ಸಾಮಾನ್ಯ ಕಾರ್ಮಿಕರಿಂದ ಪ್ರಧಾನಿಗೆ ಸ್ವಾಗತ
3. ಅರುಣಾಚಲ ಪ್ರದೇಶದಿಂದ ಗುಜರಾತ್‌ವರೆಗೆ ಕಾಂಗ್ರೆಸ್‌ನಿಂದ ಮತ್ತೊಂದು ಪಾದಯಾತ್ರೆ
ಭಾರತ್ ಜೋಡೋ ಯಾತ್ರೆ(Bharat Jodo Yatra)ಯ ಯಶಸ್ಸಿನಿಂದ ಮೈಕೊಡವಿ ಎದ್ದುನಿಂತಿರುವ ಕಾಂಗ್ರೆಸ್ ಪಕ್ಷವು(Congress), ಮತ್ತೊಂದು ಅದೇ ರೀತಿಯ ಪಾದಯಾತ್ರೆಯನ್ನು ಕೈಗೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಕಾಂಗ್ರೆಸ್ ಪಕ್ಷದ 85ನೇ ಮಹಾಧಿವೇಶನದಲ್ಲಿ (Congress plenary Session) ಈ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: 1. ಅದಾನಿಯ ಸತ್ಯ ಗೊತ್ತಾಗುವ ತನಕ ಪ್ರಶ್ನೆ ಕೇಳುತ್ತೇವೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
2. ಸೋನಿಯಾ ನಿವೃತ್ತಿ ಹೊಂದಲ್ಲ, ಇನಿಂಗ್ಸ್ ಅಂತ್ಯ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ವಕ್ತಾರೆ ಸ್ಪಷ್ಟನೆ
4. ಹಾಸನ ಟಿಕೆಟ್ ವಿಚಾರದಿಂದ ಕೈಚೆಲ್ಲಿದ ಎಚ್.ಡಿ. ಕುಮಾರಸ್ವಾಮಿ: ಓವರ್ ಟು ರಾಷ್ಟ್ರೀಯ ಅಧ್ಯಕ್ಷರು
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಿಕೆ ಗೊಂದಲವನ್ನು ಬಗೆಹರಿಸಲು ಬಗೆಬಗೆಯಾಗಿ ಪ್ರಯತ್ನಿಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೊನೆಗೂ ಕೈಚೆಲ್ಲಿದ್ದಾರೆ. ಇನ್ನು ಹಾಸನದ ವಿಚಾರದಲ್ಲಿ ಎಲ್ಲ ನಿರ್ಧಾರವನ್ನೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5 .ಮನೆಯನ್ನೇ ನಿರ್ವಹಿಸಲಾಗದವರು ದೇಶ, ರಾಜ್ಯವನ್ನು ಹೇಗೆ ನಿರ್ವಹಿಸ್ತೀರಾ?; ದೇವೇಗೌಡ ಕುಟುಂಬಕ್ಕೆ ಪ್ರಲ್ಹಾದ್ ಜೋಶಿ ಪ್ರಶ್ನೆ
ಮನೆಯನ್ನೇ ನಿರ್ವಹಿಸಲಾಗದವರು ಇನ್ನು ದೇಶ, ರಾಜ್ಯವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ? ಮನೆಯಲ್ಲಿ 10-12 ಜನವಿದ್ದು, ಎಲ್ಲರೂ ಎಲೆಕ್ಷನ್‌ಗೆ ನಿಂತರೂ ನಿಮಗೆ ಸಮಾಧಾನ ಇಲ್ಲವೇ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ (HD Devegowda) ಕುಟುಂಬಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: 1. ಮೊದಲು ನಿಮ್ಮ ಕುಟುಂಬವನ್ನು ನೆಟ್ಟಗೆ ಇಟ್ಟುಕೊಳ್ಳಿ; ಜೋಶಿಗೆ ಎಚ್.ಡಿ. ಕುಮಾರಸ್ವಾಮಿ ತಿರುಗೇಟು
6. ಇ ಸಂಜೀವಿನಿ ಆ್ಯಪ್, ಯುಪಿಐ ಕುರಿತು ಮನ್ ಕಿ ಬಾತ್‌ನಲ್ಲಿ ಮೋದಿ ಮೆಚ್ಚುಗೆ
“ಇ ಸಂಜೀವಿನಿ ಆ್ಯಪ್ ಹಾಗೂ ಏಕೀಕೃತ ಪಾವತಿ ವ್ಯವಸ್ಥೆಯು (UPI) ದೇಶದ ಡಿಜಿಟಲ್ ಶಕ್ತಿಯ ದ್ಯೋತಕ” ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ (Mann Ki Baat) ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ಕೊರೊನಾ ಸಂದರ್ಭದಲ್ಲಿ ಇ ಸಂಜೀವಿನಿ ಆ್ಯಪ್ ಪ್ರಮುಖ ಪಾತ್ರ ನಿರ್ವಹಿಸಿದೆ. ಹಾಗೆಯೇ, ದೇಶದ ಯುಪಿಐ ಈಗ ಸಾಗರದಾಚೆ ತಲುಪುತ್ತಿದೆ” ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಶಿಕಾರಿಪುರದಿಂದಲೇ ಸ್ಪರ್ಧೆ: ಗೊಂದಲಗಳಿಗೆ ತೆರೆ ಎಳೆದ ಬಿ.ವೈ. ವಿಜಯೇಂದ್ರ
ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜಕೀಯ ಜೀವನ ಕಲ್ಪಿಸಿದ ಶಿಕಾರಿಪುರದಿಂದಲೇ ತಮ್ಮ ಸ್ಪರ್ಧೆಯನ್ನು ರಾಜ್ಯ ಬಿಜೆಪಿ ( BJP Politics) ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಚಿತಪಡಿಸಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯ ಮುನ್ನಾದಿನ ಶಿವಮೊಗ್ಗದ ಗೃಹದಲ್ಲಿ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಫೆ.27ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಕೇಂದ್ರಗಳ ಕಾರ್ಯಾರಂಭ; ಶುಲ್ಕ ಹೀಗಿದೆ
ಸುಮಾರು 8000 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bangalore–Mysore Expressway) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಫೆ.27ರಿಂದ ಮೊದಲ ಹಂತದ ಟೋಲ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳಿಗೆ ನಿಗದಿತ ಸುಂಕ ನೀಡಬೇಕಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ರಾಜ್ಯ ಸರ್ಕಾರಿ ನೌಕರರ ಹೋರಾಟದ ನಡುವೆಯೇ ಕೇಂದ್ರ ಉದ್ಯೋಗಿಗಳಿಗೆ ಭರ್ಜರಿ ವೇತನ ಏರಿಕೆ ಶೀಘ್ರ
ವೇತನ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರಿ ನೌಕರರ ಹೋರಾಟ, ಮುಷ್ಕರದ ನಡುವೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ವೇತನ ಏರಿಕೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯವಾಗಿ ಅವರ ಕನಿಷ್ಠ ಮಾಸಿಕ ವೇತನ 26,000 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಹೋಳಿ ಹಬ್ಬಕ್ಕೆ ಮುನ್ನ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿಯಿದು. ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರ ಉದ್ಯೋಗಿಗಳ ತುಟ್ಟಿಭತ್ಯೆ ( Dearness Allowance) ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ (fitment factor) ಅಡಿಯಲ್ಲಿ ಕನಿಷ್ಠ ವೇತನವನ್ನು ಏರಿಸುವ ಸಾಧ್ಯತೆ ಇದೆ. ( 7th Pay commission) ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿಯ ‘ನಾಟು ನಾಟು’ ಡ್ಯಾನ್ಸ್ಗೆ ಪ್ರಧಾನಿ ಮೋದಿ ಶ್ಲಾಘನೆ
ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾದ ‘ನಾಟು..ನಾಟು’ ಹಾಡು ಸಿಕ್ಕಾಪಟೆ ಫೇಮಸ್ ಆಗಿದೆ. ಈಗಾಗಲೇ ಆಸ್ಕರ್ ಪ್ರಶಸ್ತಿಗೂ ನಾಮ ನಿರ್ದೇಶನಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಖತ್ ಫೇಮಸ್ ಹಾಗಿರುವ ನಾಟು..ನಾಟು ಹಾಡಿಗೆ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ಸಿಬ್ಬಂದಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೊವನ್ನು Korea Embassy India ಟ್ವಿಟರ್ ಅಕೌಂಟ್ನಲ್ಲಿ ಶೇರ್ ಕೂಡ ಮಾಡಿಕೊಂಡಿದ್ದರು. ಈ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ರೀಶೇರ್ ಮಾಡಿಕೊಂಡಿದ್ದಾರೆ. ಕೊರಿಯನ್ ರಾಯಭಾರಿ ಕಚೇರಿ ಸಿಬ್ಬಂದಿಯ ಉತ್ಸಾಹ ಮತ್ತು ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ಮಾಡಿ.
ಇನ್ನಷ್ಟು ಪ್ರಮುಖ ಸುದ್ದಿಗಳಿವು
- ಬಿಜೆಪಿ ಎಂಎಲ್‌ಸಿ ಮಗಳ ನೇಮಕಕ್ಕೇ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ: ಎಚ್.ಡಿ. ಕುಮಾರಸ್ವಾಮಿ ಆರೋಪ
- ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ಗುಂಡಿಗೆ ಪಂಡಿತ ಬಲಿ
- ಕೊನೇ ಗ್ರಾಮ ವಾಸ್ತವ್ಯ ಯಶಸ್ವಿ; ಗ್ರಾಮಕ್ಕೆ 1 ಕೋಟಿ ರೂ. ಘೋಷಿಸಿದ ಆರ್. ಅಶೋಕ್
- ಅಧಿಕಾರಕ್ಕೆ ಬಂದರೆ ಪಾಕಿಸ್ತಾನ, ಚೀನಾಗೆ ಅನುದಾನ ಕಡಿತ: ಅಮೆರಿಕನ್ನರಿಗೆ ನಿಕ್ಕಿ ಭರವಸೆ
- ಪಿಚ್ಗೆ ನೀವು ಮರ್ಯಾದೆ ಕೊಟ್ಟರೆ ಅದು ನಿಮಗೆ ಗೌರವ ಕೊಡುತ್ತದೆ; ಅಶ್ವಿನ್ ಕಿವಿಮಾತು ಹೇಳಿದ್ದು ಯಾರಿಗೆ?
- ಷೇರು ಹೂಡಿಕೆದಾರರಿಗೆ 6 ದಿನಗಳಲ್ಲಿ 8.30 ಲಕ್ಷ ಕೋಟಿ ರೂ. ನಷ್ಟ
- ಪ್ರೀತಿಸಿದ ಹುಡುಗಿಗೆ ಮೆಸೇಜ್ ಮಾಡುತ್ತಿದ್ದ ಸ್ನೇಹಿತನನ್ನು ಕೊಂದು, ಖಾಸಗಿ ಅಂಗ ಕತ್ತರಿಸಿದ ಯುವಕ; ಗರ್ಲ್ಫ್ರೆಂಡ್ಗೆ ಫೋಟೋ ಕಳಿಸಿದ!
- ಬಾಲಾಕೋಟ್ ಏರ್‌ಸ್ಟ್ರೈಕ್‌ಗೆ 4 ವರ್ಷ, ಪಾಕ್‌ನ ಉಗ್ರರ ಶಿಬಿರಗಳು ಧ್ವಂಸ! ಅಂದು ಏನೆಲ್ಲ ನಡೆಯಿತು?
- Sunday Read: ಹೊಸ ಪುಸ್ತಕ: ಕಾಣೆಯಾಗಿದ್ದಾರೆ ಹುಡುಕಿ ಕೊಡಬೇಡಿ
- ಮಕ್ಕಳ ಕಥೆ: ಸೂರ್ಯನ ಕಳೆದುಹೋದ ಸೈಕಲ್ ಎಲ್ಲಿ ಹೋಗಿತ್ತು?