ಹೆಣ್ಣು ಗಂಡಿಗೆ ಎಲ್ಲ ವಿಚಾರಗಳಲ್ಲೂ ಸರಿಸಮಾನ ಎಂಬುದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಹಲವು ಸರ್ಕಾರೀ ಉಪಕ್ರಮಗಳಿಂದಲೂ ರುಜುವಾತುಪಡಿಸಲಾಗಿದೆ. ಹಾಗಾಗಿ ಈಗ ಪಿತೃ ಪ್ರಧಾನ ಎಂಬುದೇ ಅಪ್ರಸ್ತುತ.
ಸುಖದುಃಖಗಳು ಚಕ್ರದಂತೆ ತಿರುಗುತ್ತಲೇ ಇರುತ್ತವಂತೆ. ಹೀಗಾಗಿ ಇಂದು ಕಷ್ಟಗಳು ಎದುರಾದರೆ ನಾಳೆ ಸುಖ ಬರಬಹುದು. ಹೀಗಾಗಿ ಗತಿಸಿದ ಕಾಲದ ಬಗ್ಗೆ ಹೆಚ್ಚು ಕೊರಗದೆ ಮುಂಬರುವ ಹಿತವನ್ನು ಎದುರು ನೋಡುತ್ತಾ ಭರವಸೆಯಿಂದ ಬದುಕಬೇಕೆಂಬುದನ್ನೇ ನಮಗೆ ಯುಗಾದಿಯು ಸಂದೇಶ...
5 ಮತ್ತು 8ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಬಗ್ಗೆ ಅತಂತ್ರ ಸ್ಥಿತಿ ಉದ್ಭವವಾಗಿದೆ. ಹಾಗಾಗಿ ಮಕ್ಕಳು ಮತ್ತು ಪೋಷಕರು ಮತ್ತೆ ಮಾನಸಿಕ ಒತ್ತಡ ಅನುಭವಿಸುವಂತಾಗಿದೆ. ಈ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕಿದೆ.
ರಾಜ್ಯದಲ್ಲಿ ಮತದಾರರಿಗೆ ಗಿಫ್ಟ್ ಹಂಚುವ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವಕ್ಕೆ ಇದು ಭೂಷಣವಲ್ಲ. ಇಂತಹ ಆಮಿಷಗಳನ್ನು ಜನರೇ ತಿರಸ್ಕರಿಸಬೇಕು. ಚುನಾವಣೆ ಆಯೋಗ ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.
ಭಿಂದ್ರನ್ವಾಲೆ ಎಂಬ ಖಲಿಸ್ತಾನಿ ಭಯೋತ್ಪಾದಕನನ್ನು ಆರಂಭದಲ್ಲಿ ಬೆಳೆಯಲು ಬಿಟ್ಟದ್ದು ನಮ್ಮ ಕೆಲವು ರಾಜಕಾರಣಿಗಳೇ. ಹೀಗಾಗಿ ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ಆರಂಭದಲ್ಲೇ ಸಿಖ್ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು.
ಉಗ್ರವಾದದ ಹಾದಿ ಹಿಡಿಯಲು ಮೂಲ ಕಾರಣವಾಗುವುದು ಮತಾಂಧತೆ ಹಾಗೂ ಶಿಕ್ಷಣದ ಕೊರತೆ. ಭಾರತದಲ್ಲೂ ಇಸ್ಲಾಮಿಕ್ ಪ್ರಭುತ್ವ ಬರಬೇಕೆಂದು ಹಾರೈಸುವವರಲ್ಲಿ ಇವು ಹೇರಳವಾಗಿದೆ. ಪಾಕಿಸ್ತಾನದ ದುಃಸ್ಥಿತಿಯಿಂದ ಅವರು ಪಾಠ ಕಲಿಯಬೇಕಿದೆ.
ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಇಲಾಖೆಗಳ ಮಧ್ಯೆ ಸಮನ್ವಯವೇ ಇಲ್ಲವಾಗಿದೆ. ಬೆಂಗಳೂರೆಂಬುದು ಇಂದು ಯೋಜನೆಯೇ ಇಲ್ಲದ ನಗರವಾಗಿ ಬೆಳೆದಿದೆ. ನಮ್ಮಲ್ಲಿ ನಗರಾಭಿವೃದ್ಧಿ ಇಲಾಖೆ ಎಂಬುದೊಂದಿದೆ. ಅದು ಏನು ಮಾಡುತ್ತಿದೆಯೋ ಗೊತ್ತಿಲ್ಲ.