ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9-10ರಂದು G 20 ಶೃಂಗಸಭೆ (G 20 Summit 2023)ಯಶಸ್ವಿಯಾಗಿ ನಡೆದಿದೆ. ಅದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವಾರು ದೇಶಗಳ ನಾಯಕರು ಭಾಗವಹಿಸಿದ್ದರು. ಅವರಿಗೆಂದು ದೆಹಲಿಯ ಐಷಾರಾಮಿ ಹೋಟೆಲ್‌ಗಳನ್ನು ಬುಕ್ ಮಾಡಲಾಗಿತ್ತು. ಹಾಗೆಯೇ ಪ್ರಸಿದ್ಧ ಅಶೋಕ್ ಹೋಟೆಲ್ ಮುಖ್ಯ ಬಾಣಸಿಗರಾದ ಸಂಜಯ್ ಅವರಿಂದ ವಿವಿಧ ಖಾದ್ಯಗಳನ್ನು ಮಾಡಿಸಿ ಗಣ್ಯರಿಗೆ ಆಹಾರ ಸಿದ್ಧಪಡಿಸಿ ನೀಡಲಾಗಿದೆ. ಅದರಲ್ಲಿ ನಾಲ್ಕು ಮುಖ್ಯ ಖಾದ್ಯಗಳ ರೆಸಿಪಿಯನ್ನು ಷೆಫ್ ಸಂಜಯ್ ಅವರು ಜನಸಾಮಾನ್ಯರೊಂದಿಗೆ ಹಂಚಿಕೊಂಡಿದ್ದಾರೆ. ಅವು ಈ ಕೆಳಗಿನಂತಿವೆ. ನೀವು ಮಾಡಿ ನೋಡಬಹುದು!
ಸಜ್ಜೆ ಬಟಾಣಿ ಸೂಪ್ (Pearl Millet Peas Soup)
ಬೇಕಾಗಿರುವ ಪದಾರ್ಥಗಳು
ಸಜ್ಜೆ – 1/2 ಕಪ್
ನೀರು – ಒಂದೂವರೆ ಕಪ್
ಹಸಿರು ಬಟಾಣಿ – 1/2 ಕಪ್
ಬೆಳ್ಳುಳ್ಳಿ – 2 ಎಸಳು
ಕಾಳುಮೆಣಸಿನ ಪುಡಿ – 1 ಚಮಚ
ಎಣ್ಣೆ – 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
- ಸಜ್ಜೆಯನ್ನು ಚೆನ್ನಾಗಿ ತೊಳೆದು, ನೀರನ್ನು ಸೋಸಿ ಇಟ್ಟುಕೊಳ್ಳಿ. ಕುಕ್ಕರ್ನಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಸೇರಿಸಿ. ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
- ಅದಕ್ಕೆ ಬಟಾಣಿ ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷಗಳ ಕಾಲ ಬೇಯಿಸಿ.
- ಅದಕ್ಕೆ ಸಜ್ಜೆಯನ್ನು ಸೇರಿಸಿ. ಹಾಗೆಯೇ ಒಂದೂವರೆ ಕಪ್ ನೀರು ಸೇರಿಸಿ.
- ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಐದು ಸೀಟಿ ಕೂಗಿಸಿ.
- ಪ್ರೆಶರ್ ಕುಕ್ಕರ್ನಲ್ಲಿ ಬೆಂದ ಸೂಪ್ ಅನ್ನು ಬೌಲ್ ಒಳಗೆ ಹಾಕಿ ಅದರ ಮೇಲೆ ಬಾದಾಮಿ ಹಾಕಿ.
ಕರಿ ಲೀಫ್ ಫ್ಲೇವರ್ಡ್ ಗ್ರಿಲ್ಡ್ ಸಾಲ್ಮನ್ (Curry Leaf Flavoured Grilled Salmon)
ಬೇಕಾಗುವ ಪದಾರ್ಥಗಳು
ಸಾಲ್ಮನ್ – 200 ಗ್ರಾಂ
ಕರಿಬೇವಿನ ಎಲೆಗಳು – 15 ಗ್ರಾಂ
ಎಣ್ಣೆ – 40 ಮಿಲಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 15 ಗ್ರಾಂ
ಮೆಣಸಿನ ಪುಡಿ – 4 ಗ್ರಾಂ
ಅರಿಶಿಣ – 4 ಗ್ರಾಂ
ರುಚಿಗೆ ತಕ್ಕಷ್ಟು ಉಪ್ಪು
ಕಾಳು ಮೆಣಸು – 5 ಗ್ರಾಂ
ನಿಂಬೆ ರಸ – 15 ಮಿಲಿ
ಕಡಲೆ ಹಿಟ್ಟು – 15 ಗ್ರಾಂ
ಮಾಡುವ ವಿಧಾನ
- ಸಾಲ್ಮನ್ ಫಿಲೆಟ್ ಅನ್ನು ಬೇಕಾದ ಆಕಾರದಲ್ಲಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
- ಮಿಕ್ಸರ್ನಲ್ಲಿ ಕರಿಬೇವಿನ ಎಲೆಗಳು, ಕೆಂಪು ಮೆಣಸಿನ ಪುಡಿ, ಅರಿಶಿಣ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸು ಹಾಕಿ ಮಿಶ್ರಣ ಮಾಡಿ.
- ಮಿಶ್ರಿತ ಮಸಾಲೆಗಳು ಮತ್ತು ಎಣ್ಣೆ, ಉಪ್ಪು, ನಿಂಬೆ ರಸವನ್ನು ಕಡಲೆ ಹಿಟ್ಟಿನೊಂದಿಗೆ ಮ್ಯಾರಿನೇಟ್ ತಯಾರಿಸಿ.
* ಕನಿಷ್ಠ 30 ನಿಮಿಷಗಳ ಕಾಲ ಈ ಮಿಶ್ರಣದಲ್ಲಿ ಸಾಲ್ಮನ್ ಅನ್ನು ಮ್ಯಾರಿನೇಟ್ ಮಾಡಿ. - ಕಡಿಮೆ ಎಣ್ಣೆಯನ್ನು ಬಳಸಿ ಬಿಸಿ ತಟ್ಟೆಯಲ್ಲಿ ಅವುಗಳನ್ನು ಗ್ರಿಲ್ ಮಾಡಿ.
ಫಲಾಫಲ್ ಪೀಟಾ ಬ್ರೆಡ್ (Falafel in Pita Pockets)
ಬೇಕಾಗುವ ಪದಾರ್ಥಗಳು
ಕಡಲೆ – ಒಂದೂವರೆ ಕಪ್
ಈರುಳ್ಳಿ – 1
ಬೆಳ್ಳುಳ್ಳಿ – 2 ಎಸಳು
ಪಾರ್ಸ್ಲಿ – 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಜೀರಿಗೆ – 1 ಚಮಚ
ಕೊತ್ತಂಬರಿ – 1 ಚಮಚ
ಕಾಳು ಮೆಣಸು – 1/4 ಚಮಚ
ಬೇಕಿಂಗ್ ಪೌಡರ್ – 1 ಚಮಚ
ಸಂಸ್ಕರಿಸಿದ ಹಿಟ್ಟು – 4 ಚಮಚ
ಹುರಿಯಲು ಎಣ್ಣೆ
ಪಿಟಾ ಬ್ರೆಡ್ – 2
ತಾಹಿನಾ ಪೇಸ್ಟ್ – 2 ಚಮಚ
ಮಾಡುವ ವಿಧಾನ
- ಕಡಲೆಯನ್ನು ಕೆಲ ಗಂಟೆಗಳ ಕಾಲ ನೆನೆಸಿ ಆಮೇಲಿ ಬೇಯಿಸಿ.
- ಈರುಳ್ಳಿ, ಬೆಳ್ಳುಳ್ಳಿ, ಪಾರ್ಸ್ಲಿ, ಕೊತ್ತಂಬರಿ, ತಾಹಿನಾದೊಂದಿಗೆ ಬೇಯಿಸಿದ ಕಡಲೆಯನ್ನು ಮಿಶ್ರಣ ಮಾಡಿ.
- ಅದಕ್ಕೆ ಬೇಕಿಂಗ್ ಪೌಡರ್ ಮತ್ತು ಹಿಟ್ಟು ಹಾಕಿ ಮಿಶ್ರಣ ಮಾಡಿ.
- ಮಿಶ್ರಣವನ್ನು ಒಡೆ ರೀತಿಯಲ್ಲಿ ತಟ್ಟಿ ಅದನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ.
ಥಂಡೈ ರಬ್ಡಿ ಜತೆ ಅಮರಾಂತ್ ಜಲೇಬಿ (Amaranth Jalebi with Thandai Rabdi)
ಬೇಕಾಗುವ ಪದಾರ್ಥಗಳು
ಅಮರಾಂತ್ ಹಿಟ್ಟು – 1/3 ಕಪ್
ಹಿಟ್ಟು – 1 ಕಪ್
ಅಡಿಗೆ ಸೋಡಾ – 1/2 ಚಮಚ
ಸಕ್ಕರೆ – 1 ಕಪ್
ಕೇಸರಿ – ಕೆಲವು ಎಳೆಗಳು
ನಿಂಬೆ ರಸ – 1/2 ಚಮಚ
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – ಹುರಿಯಲು ಬೇಕಾಗುವಷ್ಟು
ಹಾಲು – 1 ಲೀಟರ್
ಸಕ್ಕರೆ – 1/2 ಕಪ್
ಥಂಡೈ ಮಿಶ್ರಣ – 100 ಗ್ರಾಂ
ಮಾಡುವ ವಿಧಾನ
- ಒಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರನ್ನು ಹಾಕಿ, ಸಕ್ಕರೆ ಕರಗುವ ತನಕ ಕುದಿಸಿ.
- ಸಕ್ಕರೆ ಪಾಕಕ್ಕೆ ಏಲಕ್ಕಿ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿ. ಅದು ಸರಿಯಾದ ಪಾಕ ಆಗುವ ತನಕ ಕುದಿಸಿ.
- ಇನ್ನೊಂದು ಬಟ್ಟಲಿನಲ್ಲಿ ಅಮರಾಂತ್ ಹಿಟ್ಟು ಹಾಗು ಅಡುಗೆ ಸೋಡಾ ಸೇರಿಸಿ. ಅದನ್ನು ಚೆನ್ನಾಗಿ ಕಲಸಿ ಅದನ್ನು ಸ್ವಲ್ಪ ಹೊತ್ತು ಹಾಗೇ ಎತ್ತಿಡಿ.
- ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಹಿಟ್ಟನ್ನು ಜಿಲೇಬಿ ಅಚ್ಚಿಗೆ ಹಾಕಿ ಅದನ್ನು ಎಣ್ಣೆಗೆ ವೃತ್ತಾಕಾರದಲ್ಲಿ ಸುರುಳಿ ಸುತ್ತಿಸಿ.
- ಜಿಲೇಬಿ ಬೆಂದ ನಂತರ ಅದನ್ನು ಬೆಚ್ಚಗಿನ ಸಕ್ಕರೆ ಪಾಕಕ್ಕೆ ಹಾಕಿ. ಅದನ್ನು ಕೆಲವು ಸೆಕೆಂಡುಗಳ ಕಾಲ ನೆನೆಸಿ ನಂತರ ಅದನ್ನು ಹೊರಗೆ ತೆಗೆಯಿರಿ ಮತ್ತು ಥಂಡೈ ರಬ್ಡಿಯಿಂದ ಅಲಂಕರಿಸಿ.
- ಇನ್ನೊಂದು ಬಾಣಲಿಯಲ್ಲಿ ಹಾಲನ್ನು ಕುದಿಸಿ.
- ಹಾಲು ಅರ್ಧದಷ್ಟು ಇಂಗುವ ತನಕ ಕುದಿಸಿ ಅದಕ್ಕೆ ಸಕ್ಕರೆ ಮತ್ತು ಥಂಡೈ ಮಿಶ್ರಣ ಸೇರಿಸಿ.
- ನಂತರ ಅದನ್ನು ತಣ್ಣಗಾಗಲು ಬಿಟ್ಟು, ಜಿಲೇಬಿಯೊಂದಿಗೆ ಬಡಿಸಿ.
ಇದನ್ನೂ ಈದಿ: G 20 Summit 2023: ಭಾರತದ ಪ್ರತಿಷ್ಠೆ ಹೆಚ್ಚಿಸಲಿದೆಯೆ ಜಿ 20 ಶೃಂಗಸಭೆ? ನೀವು ತಿಳಿದಿರಬೇಕಾದ ಸಂಗತಿಗಳಿವು