ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ (G20 Summit 2023) ಎರಡನೇ ದಿನದ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಭಾರತ ಮಂಟಪದಲ್ಲಿ ಸಭೆ ಆರಂಭಿಸುವುದಕ್ಕೂ ಮೊದಲು ಜಿ 20 ನಾಯಕರು ರಾಜ್‌ಘಾಟ್‌ಗೆ (Rajghat) ತೆರಳಿ ಮಹಾತ್ಮ ಗಾಂಧೀಜಿಯವರ ಸಮಾಧಿಗೆ ಗೌರವ ಸಲ್ಲಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಜಿ 20 ನಾಯಕರು ಗೌರವ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್‌ಘಾಟ್‌ಗೆ ಜಿ 20 ನಾಯಕರನ್ನು ಸ್ವಾಗತಿಸಿದರು. ಮಹಾತ್ಮ ಗಾಂಧೀಜಿಯವರು ತಂಗುತ್ತಿದ್ದ ಸಬರಮತಿ ಆಶ್ರಮದ ಬೃಹತ್ ಫೋಟೊದ ಎದುರು ನಿಂತಿದ್ದ ನರೇಂದ್ರ ಮೋದಿ ಅವರು ಒಬ್ಬೊಬ್ಬರೇ ನಾಯಕರನ್ನು ರಾಜ್‌ಘಾಟ್‌ಗೆ ಸ್ವಾಗತಿಸಿದರು. ಇದೇ ವೇಳೆ ಅವರು ರಿಷಿ ಸುನಕ್ ಹಾಗೂ ಜೋ ಬೈಡೆನ್ ಅವರಿಗೆ ಸಬರಮತಿ ಆಶ್ರಮದ ಫೋಟೊ ತೋರಿಸಿ, ಅದರ ಮಹತ್ವ ತಿಳಿಸಿದರು.
ಹಾಗೆಯೇ, ನರೇಂದ್ರ ಮೋದಿ ಅವರು ಜಿ 20 ನಾಯಕರನ್ನು ಕರೆದುಕೊಂಡು ರಾಜ್‌ಘಾಟ್‌ನಲ್ಲಿ ಒಂದು ಸುತ್ತು ಹಾಕಿದರು. ರಾಜ್‌ಘಾಟ್ ಮಹತ್ವ, ಮಹಾತ್ಮ ಗಾಂಧೀಜಿಯವರ ಜೀವನ, ಸಂದೇಶ, ವಿಚಾರಧಾರೆಗಳನ್ನು ಜಿ 20 ನಾಯಕರಿಗೆ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: Rishi Sunak: ಜಿ20 ಸಭೆ ಮಧ್ಯೆಯೇ ಅಕ್ಷರಧಾಮ ದೇಗುಲಕ್ಕೆ ರಿಷಿ ಸುನಕ್, ಅಕ್ಷತಾ ಮೂರ್ತಿ ಭೇಟಿ, ಪ್ರಾರ್ಥನೆ
ರಾಜ್‌ಘಾಟ್ ಭೇಟಿ ನಂತರದ ಕಾರ್ಯಕ್ರಮಗಳು
- 9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನ.
- 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಸಸಿ ನೆಡುವ ಕಾರ್ಯಕ್ರಮ.
- 10.30-12.30ರವರೆಗೆ ಸೆಷನ್ III: ಶೃಂಗಸಭೆ ಸಭಾಂಗಣದಲ್ಲಿ ಭಾರತ ಮಂಟಪ ಹಂತ 2ರಲ್ಲಿ ಒಂದು ಭವಿಷ್ಯ (one future) ಕುರಿತು ಸಮಾವೇಶ