ನವದೆಹಲಿ: ಈ ವಾರಾಂತ್ಯದಲ್ಲಿ ದಿಲ್ಲಿಯಲ್ಲಿ ನಡೆಯಲಿರುವ ಜಿ20 ಶೃಂಗ ಸಭೆಗೆ (G20 Summit 2023) ಭಾರತವು (India) ಎಲ್ಲ ರೀತಿಯಿಂದಲೂ ಸರ್ವ ಸನ್ನದ್ಧವಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಹಾಗೂ ಇತರ ನಾಯಕರಿಗೆ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಂಕೀರ್ಣ ಕೆತ್ತನೆಯ ವಿನ್ಯಾಸಗಳನ್ನು ಹೊಂದಿರುವ ಬೆಳ್ಳಿ (Silverware) ಹಾಗೂ ಚಿನ್ನಲೇಪಿತ ಪಾತ್ರೆಗಳನ್ನು (Gold Utensils) ಭೋಜನದ ವೇಳೆ ಬಳಸಲಾಗುತ್ತದೆ. ಈ ಕುರಿತಾದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#WATCH | Delhi: Delegates of the G20 Summit to be served in silverware and gold utensils pic.twitter.com/1f2Zm0wGTL
— ANI (@ANI) September 6, 2023
ಐರಿಸ್ ಜೈಪುರ ಮಂಗಳವಾರ ದಿಲ್ಲಿಯಲ್ಲಿ ತನ್ನ ಕೆಲವು ಬೆಳ್ಳಿಯ ವಸ್ತುಗಳ ಪೂರ್ವವೀಕ್ಷಣೆಯನ್ನು ಆಯೋಜಿಸಿತ್ತು. ವಿವಿಧ ಐಷಾರಾಮಿ ಹೋಟೆಲ್‌ಗಳು ತಯಾರಿಸಿದ ಟೇಬಲ್‌ವೇರ್ ಮತ್ತು ಬೆಳ್ಳಿಯ ಸಾಮಾನುಗಳನ್ನು ಪ್ರದರ್ಶಿಸಲಾಯಿತು. ಈ ಐಷಾರಾಮಿ ವಸ್ತುಗಳನ್ನು ವಿದೇಶಿ ಅತಿಥಿಗಳು ಹೋಟೆಲ್‌ಗಳಲ್ಲಿ ತಂಗುವಾಗ ಮತ್ತು ಅದ್ದೂರಿ ಭೋಜನಕ್ಕೆ ಬಳಸಲಾಗುತ್ತದೆ.
ಬಹುತೇಕ ಟೇಬಲ್‌ವೇರ್‌ಗಳು ಟೇಬಲ್‌ವೇರ್‌ಗಳು ಸ್ಟೀಲ್ ಅಥವಾ ಹಿತ್ತಾಳೆ ಮೂಲ ಅಥವಾ ಬೆಳ್ಳಿಯ ಸೊಗಸಾದ ಲೇಪನವನ್ನು ಹೊಂದಿವೆ. ಸ್ವಾಗತ ಪಾನೀಯಗಳನ್ನು ನೀಡಲು ಬಳಸುವ ಗ್ಲಾಸ್‌ಗಳನ್ನು ಹೊಂದಿರುವ ಕೆಲವು ಪ್ಲೇಟ್‌ಗಳು ಚಿನ್ನದ ಲೇಪನವನ್ನು ಹೊಂದಿರುತ್ತವೆ ಎಂದು ಸಂಸ್ಥೆಯ ಲಕ್ಷ್ ಪಬುವಾಲ್ ತಿಳಿಸಿದ್ದಾರೆ. ಸುಮಾರು 15000 ಸಿಲ್ವೇರ್‌ಗಳನ್ನು ಸುಮಾರು 200 ಕುಶಲಕರ್ಮಿಗಳು ಕೆತ್ತನೆ ಮಾಡಿದ್ದಾರೆ. ಜಿ20 ಶೃಂಗಕ್ಕಾಗಿಯೇ ಈ ಟೇಬಲ್ ವೇರ್‌ಗಳನ್ನು ತಯಾರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: G20 Summit: ಜೋ ಬೈಡೆನ್ ಕೋವಿಡ್ ಮುಕ್ತ, ಗುರುವಾರ ಭಾರತಕ್ಕೆ ಬಂದಿಳಿಯಲಿರುವ ಅಮೆರಿಕ ಅಧ್ಯಕ್ಷ
ಜೈಪುರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕರ್ನಾಟಕ ಮತ್ತು ದೇಶದ ಇತರ ಭಾಗಗಳ ಕುಶಲಕರ್ಮಿಗಳು ಕೆಲಸ ಮಾಡಿದ ಇವುಗಳನ್ನು ತಯಾರಿಸಲು 50,000 ಮಾನವ ಗಂಟೆಗಳನ್ನು ವ್ಯಯಿಸಲಾಗಿದೆ ಎಂದು ಐರಿಸ್ ಜೈಪುರ್ ಸಂಸ್ಥೆ ಹೇಳಿದೆ. ಜಿ 20 ಶೃಂಗಸಭೆಗೆ ತಯಾರಿಸಲಾದ ಈ ಟೇಬಲ್ ವೇರ್‌ಗಳು ಸಂಪ್ರದಾಯ ಮತ್ತು ಆಧುನಿಕ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.