ನವದೆಹಲಿ: ಜಿ20 ಶೃಂಗ ಸಭೆಯ (G20 Summit 2023) ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Britain PM Rishi Sunak) ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಚಿತ ವ್ಯಾಪಾರ ಒಪ್ಪಂದ(Free Trade Agreement – FTA) ಜಾರಿಗೆ ಉಭಯ ರಾಷ್ಟ್ರಗಳು ವೇಗದಿಂದ ಕೆಲಸ ಮಾಡಲು ಬದ್ಧವಿರುವುದಾಗಿ ಈ ವೇಳೆ ಒಪ್ಪಿಕೊಂಡರು.
ಉಭಯ ನಾಯಕರ ಮಾತುಕತೆಯು ಮುಖ್ಯವಾಗಿ ಉಚಿತ ವ್ಯಾಪಾ ಒಪ್ಪಂದ ಕೇಂದ್ರಿತವಾಗಿತ್ತು. ಬ್ರಿಟಿಷ್ ಸ್ಪಿರಿಟ್ಸ್ ಮತ್ತು ಆಟೋಮೊಬೈಲ್‌ಗೆ ಮಾರುಕಟ್ಟೆ ಪ್ರವೇಶ ಹಾಗೂ ಭಾರತೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ನಿರ್ದಿಷ್ಟ ಸಮಯಕ್ಕಿಂತಲೂ ಬ್ರಿಟನ್ ಎಂದಿಗೂ ವಿಶಾಲವಾದ ವ್ಯಾಪಾರ ಒಪ್ಪಂದವನ್ನು ಬೆಂಬಲಿಸುತ್ತದೆ ಎಂದು ಈ ವೇಳೆ ತಿಳಿಸಲಾಯಿತು. ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನ, ವ್ಯಾಪಾರ ಮತ್ತು ಆವಿಷ್ಕಾರ ಕುರಿತು ಉಭಯ ನಾಯಕರು ಚರ್ಚಿಸಿದರು.
ಗೇಮ್ ಚೇಂಜರ್ ಮಧ್ಯ ಪ್ರಾಚ್ಯ ವ್ಯಾಪಾರ-ತಾಂತ್ರಿಕ ಕಾರಿಡಾರ್
ಸೌದಿ ಅರೆಬಿಯಾದ ಮೂಲಕ ಭಾರತ ಮತ್ತು ಯರೋಪ್ ರಾಷ್ಟ್ರಗಳನ್ನು ಮಧ್ಯ ಪ್ರಾಚ್ಯ ತಾಂತ್ರಿಕ ಕಾರಿಡಾರ್ ಹತ್ತಿರಕ್ಕೆ ತರಲಿದೆ. ಈ ಸಂಬಂಧ, ಸಂಬಂಧಿಸಿದ ನಾಯಕರು ಜಿ20 ಶೃಂಗಸಭೆ ವೇಳೆ ಮಾತುಕತೆ ನಡೆಸಿದರು. ಈ ಪ್ರಯತ್ನಕ್ಕೆ ಅಮೆರಿಕ ಮೂಲದ ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಇನ್ವೆಸ್ಟ್‌ಮೆಂಟ್ (PGIT) ಬೆಂಬಲ ನೀಡಲಿದೆ.
ಎರಡೂವರೆ ವರ್ಷಗಳ ಹಿಂದೆ ಭಾರತ ಮತ್ತು ಅದರ ನಿಕಟ ಮಿತ್ರ ಯುಎಇನಿಂದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ರೂಪಿಸಲ್ಪಟ್ಟ ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಅನ್ನು US ನೇತೃತ್ವದ ಸಹಭಾಗಿತ್ವದ ಬೆಂಬಲದೊಂದಿಗೆ G-20 ಶೃಂಗಸಭೆ ಸಂದರ್ಭದಲ್ಲಿ ಘೋಷಣೆ ಮಾಡಲಾಯಿತು.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು (NSA), ಯುಎಇ, ಅಮೆರಿಕ ಮತ್ತು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಂಪೂರ್ಣ ಬೆಂಬಲದೊಂದಿಗೆ ಹಲವಾರು ಸಭೆಗಳ ನಂತರ, ಮಧ್ಯಪ್ರಾಚ್ಯ ಕಾರಿಡಾರ್ ಯೋಜನೆಯು ಭಾರತದಿಂದ ಫುಜೈರಾ ಬಂದರಿಗೆ ಪ್ರಮಾಣಿತ ಕಂಟೈನರ್‌ಗಳ ಮೂಲಕ ಸರಕುಗಳ ಸಾಗಣೆಯನ್ನು ಕಲ್ಪಿಸಲು ಸಾಧ್ಯವಾಗಲಿದೆ. ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಮೂಲಕ 2650 ಕಿಲೋಮೀಟರ್ ರೈಲುಮಾರ್ಗದ ಮೂಲಕ ಯುಎಇಯ ಪೂರ್ವ ಸಮುದ್ರತೀರಕ್ಕೆ ಮತ್ತು ನಂತರ ಇಸ್ರೇಲ್‌ನ ಹೈಫಾ ಬಂದರಿಗೂ ಸಾಗಣೆ ಸಾಧ್ಯವಾಗಲಿದೆ.
ಈ ಸುದ್ದಿಯನ್ನೂ ಓದಿ: G20 Summit 2023: ವಿಶ್ವ ನಾಯಕರಿಗೆ ರಾಷ್ಟ್ರಪತಿ ಔತಣಕೂಟ, ಸೀರೆಯುಟ್ಟು ಬಂದ ಜಪಾನ್ ಪಿಎಂ ಪತ್ನಿ!
ಈ ಕಾರಿಡಾರ್ ಅನ್ನು ಭಾರತ, ಅಮೆರಿಕ, ಯುಎಇ ಮತ್ತು ಸೌದಿ ಅರೆಬಿಯಾ ಪ್ರಸ್ತಾಪಿಸಿದರೆ, ಇಟಲಿ, ಜರ್ಮನಿ, ಫ್ರಾನ್ಸ್ ಕೂಡ ತಮ್ಮ ಬೆಂಬಲ ವ್ಯಕ್ತಪಡಿಸಿವೆ. ಮಧ್ಯ-ಪ್ರಾಚ್ಯ ಕಾರಿಡಾರ್ ಹಂತಗಳಲ್ಲಿ ಪೂರ್ಣಗೊಳ್ಳಲಿದ್ದು, ಅಂತಿಮ ಹಂತದಲ್ಲಿ ಸೌರಶಕ್ತಿಯಿಂದ ಚಾಲಿತವಾಗಿರುವ ರೈಲು ಎಂಜಿನ್‌ಗಳು ಬಳಕೆಯಾಗಲಿವೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.