ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಜೃಂಭಣೆಯಿಂದ ಎರಡು ದಿನ ನಡೆದ ಜಿ 20 ಶೃಂಗಸಭೆಯು (G20 Summit 2023) ಮುಕ್ತಾಯಗೊಂಡಿದೆ. ಎರಡು ದಿನ ನಡೆದ ಸಾಲು ಸಾಲು ಸಭೆ, ಒಪ್ಪಂದ, ಚರ್ಚೆಗಳು ಶೃಂಗಸಭೆಗೆ ಮೆರುಗು ನೀಡಿದವು. ಮೋದಿ ಅವರು ಜಿ 20 ರಾಷ್ಟ್ರಗಳ ನಾಯಕರಿಗೆ ಧನ್ಯವಾದ ತಿಳಿಸಿ ಸಭೆಯನ್ನು ಮುಗಿಸಿದರು. ಸಮಾರೋಪಕ್ಕೂ ಮುನ್ನ ಬ್ರೆಜಿಲ್ಗೆ ಜಿ 20 ಅಧ್ಯಕ್ಷತೆಯನ್ನು ಹಸ್ತಾಂತರಿಸಿದರು. ಆದಾಗ್ಯೂ, ನವೆಂಬರ್ವರೆಗೆ ಭಾರತವೇ ಅಧ್ಯಕ್ಷತೆಯನ್ನು ಹೊಂದಿರಲಿದೆ.
ಜಿ ಶೃಂಗಸಭೆ ಸಮಾರೋಪ; ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆ ಮೋದಿ ಊಟ
ಜಿ 20 ಶೃಂಗಸಭೆ ಮುಕ್ತಾಯಗೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಜತೆ ಸಭೆ ನಡೆಸಲಿದ್ದಾರೆ. ಇಬ್ಬರೂ ಜತೆಯಾಗಿ ಊಟ ಮಾಡಲಿದ್ದು, ಸಭೆಯಲ್ಲಿ ಎರಡೂ ದೇಶಗಳ ಸಂಬಂಧ ವೃದ್ಧಿ, ವ್ಯಾಪಾರ, ದೆಹಲಿ-ಪ್ಯಾರಿಸ್ ಸಹಕಾರ ಸೇರಿ ಹಲವು ವಿಷಯಗಳ ಕುರಿತು ಇಬ್ಬರೂ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜತೆಗೂ ಮೋದಿ ಮಾತುಕತೆ ನಡೆಸಲಿದ್ದಾರೆ.
ಜಿ 20 ಶೃಂಗಸಭೆ ಮುಕ್ತಾಯ, ಭಾರತಕ್ಕೆ ಜಗತ್ತು ಮೆಚ್ಚುಗೆ
ದೆಹಲಿಯಲ್ಲಿ ಎರಡು ದಿನ ವಿಜೃಂಭಣೆಯಿಂದ ನಡೆದ ಜಿ 20 ಶೃಂಗಸಭೆಯು ಮುಕ್ತಾಯಗೊಂಡಿದೆ. ಭಾರತದ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಭೆ ನಡೆದಿರುವುದಕ್ಕೆ ಜಾಗತಿಕ ನಾಯಕರು ಮೋದಿ ಅವರಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಾಗೆಯೇ, ಸಮಾರೋಪ ಭಾಷಣ ಮಾಡಿದ ಮೋದಿ, “ನವೆಂಬರ್ವರೆಗೆ ಭಾರತವು ಜಿ20 ಗ್ರೂಪ್ನ ಅಧ್ಯಕ್ಷತೆ ವಹಿಸಿಕೊಂಡಿರುತ್ತದೆ. ನವೆಂಬರ್ನಲ್ಲಿ ವರ್ಚುವಲ್ ಆಗಿ ಸಭೆ ನಡೆಸಲಾಗುತ್ತದೆ. ಭಾರತದಲ್ಲಿ ಯಶಸ್ವಿಯಾಗಿ ಸಭೆ ಆಯೋಜಿಸಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ” ಎಂದು ಹೇಳಿ ಮೋದಿ ಅವರು ಜಿ 20 ಶೃಂಗಸಭೆಗೆ ತೆರೆ ಎಳೆದರು.
#WATCH | G 20 in India | Prime Minister Narendra Modi says, "…As you all know India has the responsibility of G20 presidency till November 2023. In these two days, all of you gave a lot of suggestions and placed proposals. It is our duty that the suggestions we have received be… pic.twitter.com/qvdoCyKnXq
— ANI (@ANI) September 10, 2023
ಯಶಸ್ವಿ ಸಭೆ ಆಯೋಜನೆಗೆ ಬ್ರೆಜಿಲ್ ಮೆಚ್ಚುಗೆ
ದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯು ಕೊನೆಯ ಹಂತಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿ 20 ಶೃಂಗಸಭೆಯ ಅಧ್ಯಕ್ಷತೆಯನ್ನು ಬ್ರೆಜಿಲ್ಗೆ ಹಸ್ತಾಂತರಿಸಿದ್ದಾರೆ. ಮುಂದಿನ ವರ್ಷದ ಸಭೆಯು ಬ್ರೆಜಿಲ್ನಲ್ಲಿ ನಡೆಯುವ ಕಾರಣ ಮೋದಿ ಅವರು ಅಧ್ಯಕ್ಷತೆಯನ್ನು ಹಸ್ತಾಂತರಿಸಿದ್ದಾರೆ. ಅಧ್ಯಕ್ಷತೆ ಸ್ವೀಕರಿಸಿದ ಬಳಿಕ ಮಾತನಾಡಿದ ಬ್ರೆಜಿಲ್ ಅಧ್ಯಕ್ಷ ಲುಯಿಜ್ ಇನಾಸಿಯೋ ಲುಲಾ ಡ ಸಿಲ್ವಾ ಅವರು ಭಾರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿ, ಎಲ್ಲರೂ ಒಪ್ಪುವ ನಿರ್ಣಯ ಮಂಡಿಸಿರುವ ಹಿನ್ನೆಲೆಯಲ್ಲಿ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ20 ಸಭೆ ನಡೆದ ಭಾರತ ಮಂಟಪದಲ್ಲಿ ಚಂದ್ರಯಾನ 3 ಯಶಸ್ಸು ಸಾರುವ ಪೇಂಟಿಂಗ್
#WATCH | G 20 in India | Delhi: Shanti Devi, a National Award-winning Madhubani painting artisan, showcased 'Chandrayaan-3' Madhubani painting in the G 20 art and craft exhibition pavilion at the Bharat Mandapam.
— ANI (@ANI) September 9, 2023
She says, "The Indian Government invited us for G 20. I first saw… pic.twitter.com/JMB5Cz4zno
ʼಒಂದು ಭವಿಷ್ಯʼ ಕುರಿತು ಚರ್ಚೆ
ಜಿ20 ಶೃಂಗಸಭೆಯ ಮೂರನೇ ಅಧಿವೇಶನದಲ್ಲಿ ʼಒಂದು ಭವಿಷ್ಯʼದ ಕುರಿತು ಚರ್ಚೆ ನಡೆಯುತ್ತಿದ್ದು, ಜಾಗತಿಕ ನಾಯಕರು ಹತ್ತಾರು ವಿಷಯಗಳ ಕುರಿತು ಮಾತನಾಡಿದರು. ಅದರಲ್ಲೂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಅಪಾಯಗಳ ನಿವಾರಣೆ, ತಡೆಗೆ ಕಾರ್ಯತಂತ್ರ ರೂಪಿಸಬೇಕು ಎಂದು ಐರೋಪ್ಯ ಒಕ್ಕೂಟ ಕರೆ ನೀಡಿತು. ಇನ್ನು ಕೆಲವೇ ನಿಮಿಷಗಳಲ್ಲಿ ಮೋದಿ ಸಮಾರೋಪ ಭಾಷಣ ಮಾಡಲಿದ್ದು, ಆ ಮೂಲಕ ಶೃಂಗಸಭೆಗೆ ತೆರೆ ಎಳೆಯಲಿದ್ದಾರೆ.