Site icon Vistara News

G20 Summit | ಮುಂದಿನ ವರ್ಷ ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ವೃದ್ಧಿ: ಭದ್ರತಾ ಸಲಹೆಗಾರ ಜಾನ್‌ ಫೈನರ್

modi-biden

ನವ ದೆಹಲಿ: ಬಾಲಿಯಲ್ಲಿ ಇತ್ತೀಚೆಗೆ ಮುಕ್ತಾಯವಾದ ಜಿ20 ಶೃಂಗದಲ್ಲಿ ಎಲ್ಲ ರಾಷ್ಟ್ರಗಳು ಜಂಟಿ ಹೇಳಿಕೆ ನೀಡಲು ಒಮ್ಮತಕ್ಕೆ ಬರುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು ( G20 Summit) ಎಂದು ಅಮೆರಿಕದ ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಜಾನ್ ಫೈನರ್ ವಾಷಿಂಗ್ಟನ್‌ನಲ್ಲಿ ತಿಳಿಸಿದ್ದಾರೆ.‌

ವಾಷಿಂಗ್ಟನ್‌ನಲ್ಲಿ ಭಾರತೀಯ ದೂತಾವಾಸ ಕಚೇರಿಯು ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ-ಭಾರತ ಬಂಧವ್ಯ ವೃದ್ಧಿಯ ನಿಟ್ಟಿನಲ್ಲಿ 2022 ಮಹತ್ವದ ವರ್ಷವಾಗಿದೆ. ಮುಂದಿನ ವರ್ಷ ಮತ್ತಷ್ಟು ಮಹತ್ವದ ವರ್ಷವಾಗಲಿದೆ ಎಂದರು.

ಬೈಡೆನ್‌ ಸರ್ಕಾರವು ಭಾರತದ ಜತೆಗೆ ಉನ್ನತ ಮಟ್ಟದ ಸಂಬಂಧವನ್ನು ಹೊಂದಲಿದೆ. ಅಂತಾರಾಷ್ಟ್ರೀಯ ವಿದ್ಯಮಾನಗಳಲ್ಲಿ ನಿಜವಾಗಿಯೂ ತಮ್ಮ ಜತೆ ನ ಸಹಕರಿಸಬಲ್ಲ ಆಪ್ತ ಪಾಲುದಾರರನ್ನು ಅಮೆರಿಕ ಅಧ್ಯಕ್ಷ ಬೈಡೆನ್‌ ನಿರೀಕ್ಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ನಾಯಕರಾಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Exit mobile version