Site icon Vistara News

Asaram Bapu : ಅತ್ಯಾಚಾರ ಪ್ರಕರಣದಲ್ಲಿ ಆಸಾರಾಮ್‌ ಬಾಪು ದೋಷಿ, ಗಾಂಧಿನಗರ ಸೆಷನ್ಸ್‌ ಕೋರ್ಟ್‌ ತೀರ್ಪು

Asaram Bapu

Supreme Court Orders Rape Convict Asaram Bapu To Approach High Court For Bail

ಗಾಂಧಿ ನಗರ : ಸುಮಾರು 10 ವರ್ಷ ಹಳೆಯ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ದೇವ ಮಾನವ ಆಸಾರಾಮ್‌ ಬಾಪು (Asaram Bapu) ದೋಷಿಯಾಗಿದ್ದಾರೆ ಎಂದು ಗಾಂಧಿನಗರ ಸೆಷನ್ಸ್‌ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ. ಸೂರತ್‌ ಮೂಲದ ಮಹಿಳೆಯನ್ನು ಅಹಮದಾಬಾದ್‌ನ ಮೊಟೇರಾದಲ್ಲಿರುವ ಆಶ್ರಮದಲ್ಲಿ ಅತ್ಯಾಚಾರ ಮಾಡಿರುವ ಆರೋಪವನ್ನು ಆಸಾರಾಮ್‌ ಬಾಪು ಎದುರಿಸುತ್ತಿದ್ದರು. ಇನ್ನೂ ಕೆಲ ಪ್ರಕರಣಗಳಲ್ಲಿ ಈಗಾಗಲೇ ಆಸಾರಾಮ್‌ಗೆ ಶಿಕ್ಷೆ ಪ್ರಕಟವಾಗಿದೆ.

2018ರ ಏಪ್ರಿಲ್‌ 25ರಂದು ಜೋಧ್‌ಪುರ ಕೋರ್ಟ್‌ ಆಸಾರಾಮ್‌ಗೆ ಬಾಲಕಿಯ ಅತ್ಯಾಚಾರ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೇ ಕೇಸ್‌ನಲ್ಲಿ ಆತನ ಇಬ್ಬರು ಸಹಚರರಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. 2013ರ ಆಗಸ್ಟ್‌ 15ರ ರಾತ್ರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಬಾಲಕಿ ದೂರು ದಾಖಲಿಸಿದ್ದಳು. ಉತ್ತರಪ್ರದೇಶ ಮೂಲದ ಬಾಲಕಿ, ಆಸಾರಾಮ್‌ನ ಆಶ್ರಮದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಳು.

2002ರಲ್ಲಿ ದಾಖಲಾದ ಮತ್ತೊಂದು ರೇಪ್‌ ಕೇಸ್‌ನಲ್ಲೂ ಆಸಾರಾಮ್‌ ಬಾಪುಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಗುಜರಾತ್‌ನ ಸೂರತ್‌ನಲ್ಲೂ ಒಂದು ರೇಪ್‌ ಕೇಸ್‌ ದಾಖಲಾಗಿದೆ. 2013ರ ಸೆಪ್ಟೆಂಬರ್‌ 1ರಂದು ಇಂದೋರ್‌ನಲ್ಲಿ ಆಸಾರಾಮ್‌ನನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿತ್ತು.

Exit mobile version