Site icon Vistara News

Narendra Modi: ಮೋದಿ ಈಗ ಗೀತ ರಚನೆಕಾರ; ಪ್ರಧಾನಿ ವಿರಚಿತ ಗರ್ಬಾ ಹಾಡನ್ನು ನೀವೂ ಕೇಳಿ!

Narendra Modi Garba Song

Garba Song Penned By PM Narendra Modi Released Ahead of Navratri Festivities, Video Goes Viral

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ರಾಜಕೀಯ ಭಾಷಣ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ, ಆಡಳಿತದ ಹೊರತಾಗಿಯೂ ಅವರು ಹಲವು ಚಟುವಟಿಕೆಗಳಲ್ಲಿ ತೊಡಗುತ್ತಾರೆ. ವಿಭಿನ್ನ ದಿರಸುಗಳನ್ನು ಧರಿಸುವುದು, ಡೋಲು ಬಾರಿಸುವುದು ಸೇರಿ ಹಲವು ಆಸಕ್ತಿಗಳನ್ನು ನರೇಂದ್ರ ಮೋದಿ (Narendra Modi) ಹೊಂದಿದ್ದಾರೆ. ಇಂತಹ ನರೇಂದ್ರ ಮೋದಿ ಅವರೀಗ ಗೀತರಚನೆಕಾರರೂ ಆಗಿದ್ದಾರೆ. ಇವರು ರಚಿಸಿದ ಗರ್ಬಾ ಹಾಡಿನ (Garba Song) ವಿಡಿಯೊ ರಿಲೀಸ್‌ ಆಗಿದ್ದು, ಭಾರಿ ವೈರಲ್‌ ಆಗಿದೆ.

ಗುಜರಾತ್‌ನಲ್ಲಿ ನವರಾತ್ರಿ ವೇಳೆ ಗರ್ಬಾ ಜನಪದ ಹಾಡು, ಗರ್ಬಾ ಜನಪದ ನೃತ್ಯವು ತುಂಬ ಫೇಮಸ್‌ ಆಗಿದೆ. ಪ್ರತಿ ನವರಾತ್ರಿ ವೇಳೆಯೂ ಗರ್ಬಾ ನೃತ್ಯ, ಗರ್ಬಾ ಹಾಡುಗಳು ರಾಜ್ಯಾದ್ಯಂತ ಕೇಳಿಬರುತ್ತವೆ. ನವರಾತ್ರಿ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ಗರ್ಬಾ ಜನಪದ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ವಿಡಿಯೊ ವೈರಲ್‌ ಆಗಿದ್ದು, ಲಕ್ಷಾಂತರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಕೂಡ ಹಾಡನ್ನು ಮೆಚ್ಚಿದ್ದಾರೆ. ಸಾಹಿತ್ಯಕ್ಕೆ ತಕ್ಕಂತೆ ಇರುವ ನೃತ್ಯವೂ ಗಮನ ಸೆಳೆದಿದೆ.

ಗರ್ಬಾ ಹಾಡಿನ ಝಲಕ್

ಅದ್ಭುತ ಸಾಹಿತ್ಯ ಎಂದು ಬಣ್ಣಿಸಿದ ಗಾಯಕಿ

ಖ್ಯಾತ ಗಾಯಕಿ ಧ್ವನಿ ಭಾನುಶಾಲಿ ಅವರು ಗರ್ಬಾ ಹಾಡಿನ ವಿಡಿಯೊವನ್ನು ಹಂಚಿಕೊಂಡಿದ್ದು, “ನರೇಂದ್ರ ಮೋದಿ ಅವರೇ ನೀವು ರಚಿಸಿದ ಹಾಡನ್ನು ನಾನು ಹಾಗೂ ತನಿಷ್ಕ್‌ ಬಾಗ್ಚಿ ಅವರು ತುಂಬ ಇಷ್ಟಪಟ್ಟೆವು. ನೀವು ರಚಿಸಿದ ಹಾಡನ್ನು ಹಾಡುವಾಗಲೇ ನನಗೆ ತುಂಬ ಖುಷಿ ನೀಡಿತು. ಹೊಸ ರಿದಮ್‌ ಹಾಗೂ ಕಂಪೋಸಿಷನ್‌ ಹಾಡಿಗೆ ಹಾಡಿದ ಖುಷಿ ನನಗಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಪೂರ್ತಿ ವಿಡಿಯೊ ಇಲ್ಲಿದೆ

ಇದನ್ನೂ ಓದಿ: ಹಸಿವಿನ ಸೂಚ್ಯಂಕದಲ್ಲಿ ಭಾರತ ಕುಸಿತ; ಮೋದಿಗೆ, ಅನ್ನಭಾಗ್ಯ ನೋಡಿ ಕಲೀರಿ ಎಂದ ಸಿಎಂ ಸಿದ್ದರಾಮಯ್ಯ!

ಧನ್ಯವಾದ ಎಂದ ಮೋದಿ

ಧ್ವನಿ ಭಾನುಶಾಲಿ ಅವರ ಪೋಸ್ಟ್‌ಗೆ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. “ಧ್ವನಿ ಭಾನುಶಾಲಿ ಹಾಗೂ ತನಿಷ್ಕ್‌ ಬಾಗ್ಚಿ ಅವರಿಗೆ ಧನ್ಯವಾದಗಳು. ನಾನು ತುಂಬ ವರ್ಷಗಳ ಹಿಂದೆ ಬರೆದ ಗರ್ಬಾ ಹಾಡಿಗೆ ನೀವು ಉತ್ತಮವಾಗಿ ಧ್ವನಿಗೂಡಿಸಿದ್ದೀರಿ. ಸಂಗೀತ ಸಂಯೋಜನೆಯೂ ಅದ್ಭುತವಾಗಿದೆ. ಇದು ನನಗೆ ಹಲವು ವರ್ಷಗಳ ನೆನಪಿನ ಹಾದಿಗೆ ಕರೆದೊಯ್ಯುತ್ತಿದೆ. ತುಂಬ ವರ್ಷಗಳಿಂದ ನಾನು ಬರೆಯುವುದನ್ನು ನಿಲ್ಲಿಸಿದ್ದೆ. ಈಗ ಹೊಸ ಗರ್ಬಾ ಹಾಡನ್ನು ಬರೆದಿರುವೆ. ನವರಾತ್ರಿ ವೇಳೆ ನಿಮ್ಮೊಂದಿಗೆ ಹಂಚಿಕೊಳ್ಳುವೆ” ಎಂದಿದ್ದಾರೆ.

10 ಲಕ್ಷ ವೀಕ್ಷಣೆ ಕಂಡ ವಿಡಿಯೊ

ಗರ್ಬಾ ಹಾಡನ್ನು ಎಕ್ಸ್‌ ಸಾಮಾಜಿಕ ಜಾಲತಾಣ, ಯುಟ್ಯೂಬ್‌ ಸೇರಿ ಹಲವೆಡೆ ಶೇರ್‌ ಮಾಡುತ್ತಲೇ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ 10 ಲಕ್ಷ ಹಾಗೂ ಯುಟ್ಯೂಬ್‌ನಲ್ಲಿ ವಿಡಿಯೊ 10 ಲಕ್ಷ ವ್ಯೂಸ್‌ (Views) ಕಂಡಿದೆ. ಸಾವಿರಾರು ಜನ ಹಾಡಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

Exit mobile version