Site icon Vistara News

Vande Bharat: ವಂದೇ ಭಾರತ್‌ ರೈಲು ಬೋಗಿ ತುಂಬ ಕಸದ ರಾಶಿ, ಇದೇನಾ ಸಂಸ್ಕೃತಿ? ಇದೇನಾ ಸಭ್ಯತೆ?

Vande Bharat Train

#image_title

ನವದೆಹಲಿ: ದೇಶದಲ್ಲಿ ಜನರಿಗೆ ಉತ್ತಮ ಪ್ರಯಾಣದ ಅನುಭವ ಸಿಗಲಿ, ಪ್ರಯಾಣದ ಸಮಯ ಉಳಿತಾಯವಾಗಲಿ ಎಂದು ಕೇಂದ್ರ ಸರ್ಕಾರವು ಹಲವೆಡೆ ವಂದೇ ಭಾರತ್‌ (Vande Bharat) ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ಆರಂಭಿಸಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಆರಂಭಿಸುತ್ತಿದೆ. ಆದರೆ, ವಂದೇ ಭಾರತ್‌ ರೈಲುಗಳಿಗೆ ಚಾಲನೆ ನೀಡಿದಾಗಿನಿಂದಲೂ ಕೆಲ ಕಿಡಿಗೇಡಿಗಳ ಕೃತ್ಯವು ಮಿತಿಮೀರುತ್ತಿದೆ. ವಂದೇ ಭಾರತ್‌ ರೈಲುಗಳಿಗೆ ಕಲ್ಲು ಎಸೆಯುವ ಪ್ರಕರಣಗಳು ಹಲವೆಡೆ ಕೇಳಿಬಂದಿವೆ. ಇದರ ಬೆನ್ನಲ್ಲೇ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿ ತುಂಬ ಕಸವೇ ತುಂಬಿದ ಫೋಟೊ ವೈರಲ್‌ ಆಗಿದ್ದು, ನಾಗರಿಕರ ಅನಾಗರಿಕ ವರ್ತನೆಗೆ ಕನ್ನಡಿ ಹಿಡಿದಂತಿದೆ.

ಇದನ್ನೂ ಓದಿ: Vande Bharat Trains: ಬೆಂಗಳೂರು ಮಾರ್ಗ ಸೇರಿ ಶೀಘ್ರದಲ್ಲೇ ದಕ್ಷಿಣ ಭಾರತಕ್ಕೆ ಇನ್ನೂ 3 ವಂದೇ ಭಾರತ್‌ ರೈಲು ಸೇವೆ

ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ಅವರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿ ತುಂಬ ಕಸ, ಕ್ಯಾರಿ ಬ್ಯಾಗ್‌ಗಳು, ಊಟದ ಪೊಟ್ಟಣಗಳು, ನೀರಿನ ಬಾಟಲ್‌ಗಳು ಬಿದ್ದಿರುವ ಫೋಟೊವನ್ನು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ‘ವೀ ದ ಪೀಪಲ್‌’ ಎಂಬ ಒಕ್ಕಣೆ ಬರೆದು ಜನರ ಮನಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಇಂತಹ ಅನಾಗರಿಕರ ವರ್ತನೆಗೆ ನೂರಾರು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ದೇಶದಲ್ಲಿ ಜನರಿಗೆ ಉತ್ಕೃಷ್ಟ ಸೌಲಭ್ಯ ಬೇಡ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಜನರಲ್ಲಿ ನಾಗರಿಕ ಪ್ರಜ್ಞೆ ಮೂಡದ ಹೊರತು ಯಾವ ಯೋಜನೆ, ಸೌಲಭ್ಯ ನೀಡಿದರೂ ಉಪಯೋಗವಿಲ್ಲ” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ, ನೂರಾರು ಜನ ಅನಾಗರಿಕ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:

Exit mobile version