ದೇಶ
Vande Bharat: ವಂದೇ ಭಾರತ್ ರೈಲು ಬೋಗಿ ತುಂಬ ಕಸದ ರಾಶಿ, ಇದೇನಾ ಸಂಸ್ಕೃತಿ? ಇದೇನಾ ಸಭ್ಯತೆ?
Vande Bharat: ವಂದೇ ಭಾರತ್ ರೈಲಿನ ಬೋಗಿ ತುಂಬ ಕಸದ ರಾಶಿ ಬಿದ್ದಿರುವ ಫೋಟೊವನ್ನು ಐಎಎಸ್ ಅಧಿಕಾರಿಯೊಬ್ಬರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಯಾಣಿಕರ ಅನಾಗರಿಕತೆಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನವದೆಹಲಿ: ದೇಶದಲ್ಲಿ ಜನರಿಗೆ ಉತ್ತಮ ಪ್ರಯಾಣದ ಅನುಭವ ಸಿಗಲಿ, ಪ್ರಯಾಣದ ಸಮಯ ಉಳಿತಾಯವಾಗಲಿ ಎಂದು ಕೇಂದ್ರ ಸರ್ಕಾರವು ಹಲವೆಡೆ ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಆರಂಭಿಸಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಆರಂಭಿಸುತ್ತಿದೆ. ಆದರೆ, ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದಾಗಿನಿಂದಲೂ ಕೆಲ ಕಿಡಿಗೇಡಿಗಳ ಕೃತ್ಯವು ಮಿತಿಮೀರುತ್ತಿದೆ. ವಂದೇ ಭಾರತ್ ರೈಲುಗಳಿಗೆ ಕಲ್ಲು ಎಸೆಯುವ ಪ್ರಕರಣಗಳು ಹಲವೆಡೆ ಕೇಳಿಬಂದಿವೆ. ಇದರ ಬೆನ್ನಲ್ಲೇ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿ ತುಂಬ ಕಸವೇ ತುಂಬಿದ ಫೋಟೊ ವೈರಲ್ ಆಗಿದ್ದು, ನಾಗರಿಕರ ಅನಾಗರಿಕ ವರ್ತನೆಗೆ ಕನ್ನಡಿ ಹಿಡಿದಂತಿದೆ.
ಇದನ್ನೂ ಓದಿ: Vande Bharat Trains: ಬೆಂಗಳೂರು ಮಾರ್ಗ ಸೇರಿ ಶೀಘ್ರದಲ್ಲೇ ದಕ್ಷಿಣ ಭಾರತಕ್ಕೆ ಇನ್ನೂ 3 ವಂದೇ ಭಾರತ್ ರೈಲು ಸೇವೆ
ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿ ತುಂಬ ಕಸ, ಕ್ಯಾರಿ ಬ್ಯಾಗ್‌ಗಳು, ಊಟದ ಪೊಟ್ಟಣಗಳು, ನೀರಿನ ಬಾಟಲ್‌ಗಳು ಬಿದ್ದಿರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ‘ವೀ ದ ಪೀಪಲ್’ ಎಂಬ ಒಕ್ಕಣೆ ಬರೆದು ಜನರ ಮನಸ್ಥಿತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಇಂತಹ ಅನಾಗರಿಕರ ವರ್ತನೆಗೆ ನೂರಾರು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಮ್ಮ ದೇಶದಲ್ಲಿ ಜನರಿಗೆ ಉತ್ಕೃಷ್ಟ ಸೌಲಭ್ಯ ಬೇಡ” ಎಂದು ಒಬ್ಬರು ಪ್ರತಿಕ್ರಿಯಿಸಿದರೆ, “ಜನರಲ್ಲಿ ನಾಗರಿಕ ಪ್ರಜ್ಞೆ ಮೂಡದ ಹೊರತು ಯಾವ ಯೋಜನೆ, ಸೌಲಭ್ಯ ನೀಡಿದರೂ ಉಪಯೋಗವಿಲ್ಲ” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ, ನೂರಾರು ಜನ ಅನಾಗರಿಕ ವರ್ತನೆಗೆ ಆಕ್ರೋಶ ಹೊರಹಾಕಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ಗ್ಯಾಜೆಟ್ಸ್
HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?
ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಲ್ಯಾಪ್‌ಟಾಪ್ ಲಾಂಚ್ ಆಗಿದೆ. ಸಾಕಷ್ಟು ಹೊಸ ಫೀಚರ್ಸ್‌ಗಳೊಂದಿಗೆ HP Pavilion Aero 13 ಲ್ಯಾಪ್‌ಟ್ಯಾಪ್ ಗಮನ ಸೆಳೆಯುತ್ತಿದೆ.
ಬೆಂಗಳೂರು: ಎಚ್‌ಪಿ ಕಂಪನಿಯು ಭಾರತದಲ್ಲಿ ತನ್ನ ಹೊಸ ಪೆವಿಲಿಯನ್ ಏರೋ 13 (HP Pavilion Aero 13) ಲ್ಯಾಪ್‌ಟ್ಯಾಪ್‌ಗಳನ್ನು ಮಂಗಳಾರ ಬಿಡುಗಡೆ ಮಾಡಿದೆ. ಶಕ್ತಿಯುತ ಕಾರ್ಯಕ್ಷಮತೆಗಾಗಿ AMD Ryzen™ 7 ಪ್ರೊಸೆಸರ್ ಮತ್ತು Radeon™ ಗ್ರಾಫಿಕ್ಸ್ ಒಳಗೊಂಡಿದೆ. GenZ ಮತ್ತು ಈ ಸಹಸ್ರಮಾನದ ಆಧುನಿಕ ಗ್ರಾಹಕರಿಗಾಗಿ ಈ ಸಾಧನವನ್ನು ನಿರ್ಮಿಸಲಾಗಿದೆ. ಯಾವುದೇ ಸಮಯ ಅಥವಾ ಸ್ಥಳದಲ್ಲಿ ಉತ್ಪಾದಕವಾಗಿ ಕೆಲಸ ಮಾಡಲು ಮತ್ತು ಕಲಿಯಲು ಅನುವು ಮಾಡಿಕೊಡುತ್ತದೆ.
ಆಧುನಿಕ ಜಗತ್ತಿನಲ್ಲಿ, ಬಹುಮುಖವಾದ ಹಲವು ಕಾರ್ಯಗಳನ್ನು ಮಾಡಬಲ್ಲ, ಕೆಲಸ ಮತ್ತು ಕಲಿಕೆ ಎರಡನ್ನೂ ನಿಭಾಯಿಸಬಲ್ಲ ಸಾಧನಗಳನ್ನು ಗ್ರಾಹಕರು ಅರಸುತ್ತಿರುತ್ತಾರೆ. ಹೈಬ್ರಿಡ್ ಕಾರ್ಯಶೈಲಿಗೆ ಸರಿಹೊಂದುವಂತೆ ಈ ಸಾಧನಗಳು ಹಗುರವಾಗಿರಬೇಕು ಮತ್ತು ಯುವ ಪೀಳಿಗೆಯ ಆದ್ಯತೆಗಳನ್ನು ಪೂರೈಸುವಂತೆ ಆಕರ್ಷಕವಾಗಿರಬೇಕು. ಹೊಚ್ಚ-ಹೊಸ HP ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ Wi-Fi6 ಜತೆಗೆ ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕವನ್ನು ಹೊಂದಿದೆ. 10.5 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಇದ್ದು, ಯಾವುದೇ ಸ್ಥಳದಿಂದ ಕೆಲಸ, ಬ್ರೌಸಿಂಗ್ ಮತ್ತು ಸ್ಟ್ರೀಮಿಂಗ್ ಮಾಡಲು ಸೂಕ್ತವಾಗಿದೆ.
400 ನಿಟ್ಸ್ ಪ್ರಕಾಶಮಾನವಾದ ಮತ್ತು 16:10 ಆಕಾರ ಅನುಪಾತದಗ ಸ್ಕ್ರೀನ್ ಬಳಕೆದಾರರಿಗೆ ತಲ್ಲೀನಗೊಳಿಸುವ ವೀಕ್ಷಣೆಯ ಅನುಭವವನ್ನು ನೀಡುತ್ತದೆ. HP ಪೆವಿಲಿಯನ್ ಏರೋ 13 ಕೇವಲ 970 ಗ್ರಾಂ ಭಾರವಿದ್ದು, GenZ ಗಳು ಮತ್ತು ಈ ಸಹಸ್ರಮಾನದ ಯುವಜನರಿಗೆ ಪೋರ್ಟಬಿಲಿಟಿಯನ್ನು ಸಕ್ರಿಯಗೊಳಿಸುತ್ತದೆ. ಇದು ಅವರ ಶೈಲಿ ಮತ್ತು ಜೀವನಶೈಲಿಗೆ ಹೊಂದಿಕೊಳ್ಳಲು ಮೂರು ವಿಶಿಷ್ಟ ಬಣ್ಣಗಳಲ್ಲಿದೆ – ಪೇಲ್ ರೋಸ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್.
HP ಇಂಡಿಯಾ ಪರ್ಸನಲ್ ಸಿಸ್ಟಮ್ಸ್ ಹಿರಿಯ ನಿರ್ದೇಶಕ ವಿಕ್ರಮ್ ಬೇಡಿ ಮಾತನಾಡಿ, “ಪಿಸಿಗಳು ಹೈಬ್ರಿಡ್ ಪರಿಸರದಲ್ಲಿ ಜನರ ಜೀವನದ ಪ್ರಮುಖ ಅಂಶಗಳಾಗುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಹುಮುಖ ಮತ್ತು ಶಕ್ತಿಯುತ ಕಂಪ್ಯೂಟಿಂಗ್ ಪರಿಹಾರಗಳಿಗಾಗಿ ವೃದ್ಧಿಸುತ್ತಿರುವ ಬೇಡಿಕೆಯನ್ನು ಪೂರೈಸಲು HP ವಿನ್ಯಾಸಗೊಳಿಸಿದ ಹೊಸ ಪೆವಿಲಿಯನ್ ಏರೋ 13 ಲ್ಯಾಪ್‌ಟಾಪ್ ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಇದು ಅಸಾಧಾರಣ ಕಾರ್ಯಕ್ಷಮತೆ ಮತ್ತು ಚಲನಶೀಲತೆಯನ್ನು ನೀಡುತ್ತದೆ, ಬಳಕೆದಾರರು ಪ್ರಯಾಣಿಸುತ್ತಿರುವಾಗಲೂ ಉತ್ಪಾದಕವಾಗಿರಲು ಮತ್ತು ಮನೋರಂಜನೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. HP ಪೆವಿಲಿಯನ್ ಏರೋ 13 ಆಕರ್ಷಕವಾದ ಪ್ರೀಮಿಯಂ ಲ್ಯಾಪ್‌ಟಾಪ್ ಆಗಿದೆ. ಕೆಲಸ ಮತ್ತು ಗೇಮಿಂಗ್ – ಎರಡೂ ವಿಷಯಗಳಲ್ಲಿ ಬಳಕೆದಾರರಿಗೆ ಅಸಾಧಾರಣವಾಗಿ ಆಪ್ತವಾಗುತ್ತದೆ.
ಹೈಬ್ರಿಡ್ ಪರಿಸರಕ್ಕೆ ಅನುಗುಣವಾಗಿ ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ನೀಡುವಂತೆ ಹಗುರವಾದ ಆದರೆ ಶಕ್ತಿಶಾಲಿಯಾದ HP ಪೆವಿಲಿಯನ್ ಏರೋ 13 ರೂಪಿಸಲಾಗದೆ. ಕೆಲಸ ಮಾಡಲು ಅಥವಾ ಸ್ನೇಹಿತರ ಜತೆಗೆ ಸ್ಪಷ್ಟವಾದ ವೀಡಿಯೋ ಕರೆಗಳನ್ನು ಮಾಡಲು ಮತ್ತು ಅನಗತ್ಯವಾದ ಹಿನ್ನೆಲೆಯ ಗದ್ದಲವನ್ನು ನಿವಾರಿಸುವ ಸೌಕರ್ಯವನ್ನು ಹೊಂದಿದೆ. 100% sRGB ಸಹಿತವಾದ ವಿಶಾಲವಾದ ಕಲರ್ ಪ್ಯಾಲೆಟ್ ವೆಬ್‌ನಲ್ಲಿ ಸರ್ಫ್ ಮಾಡುವಾಗ ಮತ್ತು ವೀಡಿಯೋಗಳನ್ನು ಸ್ಟ್ರೀಮ್ ಮಾಡುವಾಗ ಹೆಚ್ಚು ರೋಮಾಂಚಕ ಚಿತ್ರಗಳ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಫ್ಲಿಕರ್-ರಹಿತವಾದ ಪರದೆಯು ದಿನವಿಡೀ ಕೆಲಸ ಮಾಡಲು ಮತ್ತು ರಾತ್ರಿಯಿಡೀ ಆಟವಾಡಲು ಸೌಕರ್ಯ ನೀಡುವುದು HP ಪೆವಿಲಿಯನ್ ಏರೋ ವಿಶೇಷತೆಯಾಗಿದೆ. ಹೆಚ್ಚುವರಿಯಾಗಿ, 2.5k ರೆಸಲ್ಯೂಶನ್ ಸ್ಕ್ರೀನ್ ಮೇಲೆ ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಗಳನ್ನು ಮೂಡಿಸುತ್ತದೆ. ಇದನ್ನು 4-ಬದಿಗಳ ಕಿರಿದಾದ ಅಂಚಿನ ಸ್ಕ್ರೀನ್ ವೀಕ್ಷಣೆಗೆ ಇರುವ ಎಲ್ಲ ಅಡ್ಡಿಗಳನ್ನೂ ನಿವಾರಿಸುತ್ತದೆ.
ಸುಸ್ಥಿರತೆ ಮತ್ತು ಪರಿಸರ ರಕ್ಷಣೆಗೆ HP ಯ ಬದ್ಧತೆಗೆ ಅನುಗುಣವಾಗಿ HP ಪೆವಿಲಿಯನ್ ಏರೋ 13 ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಬಳಸಿದ ಮರುಬಳಕೆಯ ಮತ್ತು ಸಾಗರದಿಂದ ಸಂಗ್ರಹಿಸಿದ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ. VOC ಹೊರಸೂಸುವಿಕೆ ತಗ್ಗಿಸಲು ನೀರು-ಆಧಾರಿತ ಬಣ್ಣವನ್ನು ಬಳಸಲಾಗಿದೆ.
HP ಪೆವಿಲಿಯನ್ ಏರೋ 13 ವಿಶೇಷತೆಗಳೇನು?
ಡಿಸ್‌ಪ್ಲೇ ಹೇಗಿದೆ?
• 16:10 ಆಕಾರ ಅನುಪಾತದೊಂದಿಗೆ HP ಯ ಪ್ರಥಮ ಪೆವಿಲಿಯನ್ ಲ್ಯಾಪ್‌ಟಾಪ್
• ತಡೆರಹಿತ ಬ್ರೌಸಿಂಗ್ ಅನುಭವಕ್ಕಾಗಿ 400 ನಿಟ್‌ಗಳಷ್ಟು ಪ್ರಕಾಶಮಾನ ಡಿಸ್‌ಪ್ಲೇ
• ಫ್ಲಿಕರ್-ರಹಿತ ಪರದೆ
• ವೀಕ್ಷಣೆಯ ಅಡ್ಡಿಗಳನ್ನು ನಿವಾರಿಸಲು 4-ಬದಿ ಕಿರಿದಾದ ಅಂಚಿನ ಡಿಸ್‌ಪ್ಲೇ
• ತೀಕ್ಷ್ಣವಾದ ಚಿತ್ರಗಳು ಮತ್ತು ಪಠ್ಯಕ್ಕಾಗಿ 2.5k ರೆಸಲ್ಯೂಶನ್
• ಬಿಸಿಲಿನಲ್ಲೂ ಬ್ರೌಸಿಂಗ್ ಮಾಡುವುದಕ್ಕಾಗಿ 400 ನಿಟ್ಸ್ ಪ್ರಕಾಶ
• 100% sRGB ಯೊಂದಿಗೆ ವಿಶಾಲ ಕಲರ್ ಪ್ಯಾಲೆಟ್
ಕಾರ್ಯಕ್ಷಮತೆ
• ಸುಗಮ ಕಾರ್ಯಕ್ಷಮತೆಗಾಗಿ AMD Ryzen™ 7000 ಸರಣಿಯ ಪ್ರೊಸೆಸರ್, Radeon™ ಗ್ರಾಫಿಕ್ಸ್
• Wi-Fi 6 ಜೊತೆಗೆ ವಿಶ್ವಾಸಾರ್ಹ ಮತ್ತು ವೇಗದ ಸಂಪರ್ಕ
• ತಡೆರಹಿತ ಕಲಿಕೆ ಮತ್ತು ಕೆಲಸಕ್ಕಾಗಿ 10.5 ಗಂಟೆಗಳ ಬ್ಯಾಟರಿ ಬಾಳಿಕೆ
• ಉತ್ತಮ ವೀಡಿಯೊ ಕರೆಗಳಿಗಾಗಿ AI ನಾಯ್ಸ್ ರಿಮೂವಲ್ ಸೌಕರ್ಯ
• ಕಾರ್ಯಗಳ ಬೇಡಿಕೆಯನ್ನು ನಿರ್ವಹಿಸಲು DDR5 RAM
ವಿನ್ಯಾಸ
• ಕೇವಲ 970 ಗ್ರಾಂ ಭಾರವಿದ್ದು, ಪೋರ್ಟಬಿಲಿಟಿಯನ್ನು ಖಚಿತಪಡಿಸುತ್ತದೆ.
• ಮೂರು ಬಣ್ಣಗಳಲ್ಲಿ ಲಭ್ಯವಿದೆ – ರೋಸ್ ಪೇಲ್ ಗೋಲ್ಡ್, ವಾರ್ಮ್ ಗೋಲ್ಡ್ ಮತ್ತು ನ್ಯಾಚುರಲ್ ಸಿಲ್ವರ್
ಬೆಲೆ ಮತ್ತು ಲಭ್ಯತೆ
• HP Pavilion Aero 13 (Ryzen 5 ಸಹಿತ) 72,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ
• HP Pavilion Aero 13 (Ryzen 7 ಸಹಿತ) 1TB SSD 82,999 ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ದೇಶ
Supreme Court: ನೇಣಿಗೇರಿಸುವುದು ಕ್ರೂರತನವೇ? ಈ ಬಗ್ಗೆ ಚರ್ಚಿಸಿ ಎಂದು ಕೇಂದ್ರಕ್ಕೆ ಸೂಚಿಸಿದ ಸುಪ್ರೀಂ ಕೋರ್ಟ್
Supreme Court: ಮರಣದಂಡನೆಗೆ ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ನೇಣಿಗೇರಿಸುವುದು(Hanging) ಕ್ರೂರತನವೇ? ಈ ಬಗ್ಗೆ ಚರ್ಚೆ ನಡೆಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಕಡಿಮೆ ನೋವಿನ ಮೂಲಕ ಮರಣದಂಡನೆ ಜಾರಿ ಮಾಡುವ ಪರ್ಯಾಯ ಮಾರ್ಗ ಶೋಧಕ್ಕೂ ಸೂಚಿಸಿದೆ.
ನವದೆಹಲಿ: ನೇಣಿಗೇರಿಸುವ ಮೂಲಕ ಮರಣದಂಡನೆಯನ್ನು(Hanging) ಜಾರಿಗೊಳಿಸುವುದಕ್ಕಿಂತಲೂ ಕಡಿಮೆ ನೋವು ಆಗುವ ಮೂಲಕ ಮರಣದಂಡನೆಯನ್ನು ಜಾರಿ ಮಾಡುವ ಪರ್ಯಾಯ ಮಾರ್ಗವನ್ನು ಶೋಧಿಸಬಹುದೇ ಎಂದು ಸುಪ್ರೀಂ ಕೋರ್ಟ್ (Supreme Court) ಕೇಂದ್ರ ಸರ್ಕಾರಕ್ಕೆ ಕೇಳಿದೆ. ಈ ಬಗ್ಗೆ ಚರ್ಚೆ ಮಾಡುವಂತೆ ದೇಶದ ಅತ್ಯುನ್ನತ ನ್ಯಾಯಾಲಯವು ಸೂಚಿಸಿದೆ.
ನೇಣು ಹಾಕುವುದಕ್ಕಿಂತ ಕಡಿಮೆ ನೋವಿನ ವಿಧಾನವಿದೆಯೇ ಎಂದು ಪರಿಶೀಲಿಸಲು ಚರ್ಚೆಯನ್ನು ಪ್ರಾರಂಭಿಸಲು ಮತ್ತು ಮಾಹಿತಿಯನ್ನು ಸಂಗ್ರಹಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನೇಣು ಹಾಕುವ ಮೂಲಕ ಉಂಟಾಗುವ ಪರಿಣಾಮಗಳ ಕುರಿತಾದ ಅಧ್ಯಯನ ಮಾಹಿತಿಯೊಂದಿಗೆ ಬನ್ನಿ ಎಂದು ಕೇಂದ್ರ ಸರ್ಕಾರ ಅಟಾರ್ನಿ ಜನರಲ್ ಅವರಿಗೆ ಆರ್ ವೆಂಕಟರಮಣಿ ಅವರಿಗೆ ಕೋರಿದೆ.
ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೆ ನೋವು ರಹಿತವಾಗಿ ಶಿಕ್ಷೆಯನ್ನು ಜಾರಿಗೊಳಿಸುವ ಕುರಿತು ದಾಖಲಾಗಿರುವ ಪಿಐಎಲ್‌ಗಳ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿದೆ. ನೇಣು ಹಾಕುವ ಬದಲು ಗುಂಡು ಹಾರಿಸುವುದು, ಮಾರಣಾಂತಿಕ ಚುಚ್ಚುಮದ್ದು ನೀಡುವುದು ಅಥವಾ ವಿದ್ಯುತ್ ಕುರ್ಚಿ ಮೂಲಕ ಸಾಯಿಸುವುದು ಸೇರಿದಂತೆ ಇತರ ಕ್ರಮಗಳನ್ನು ಅರ್ಜಿಯಲ್ಲಿ ಮಾಹಿತಿ ನೀಡಲಾಗಿದೆ. ಕುತ್ತಿಗೆಗೆ ನೇಣು ಹಾಕಿ ಮರಣದಂಡನೆಯನ್ನು ಜಾರಿಗೊಳಿಸುವ ಪ್ರಕ್ರಿಯೆ ಅತ್ಯಂತ ಕ್ರೂರವಾಗಿದೆ ಎಂದು, ಕಾನೂನು ಆಯೋಗದ ವರದಿಯನ್ನು ಓದಿ ವಕೀಲ ರಿಷಿ ಮಲ್ಹೋತ್ರಾ ಅವರು ಕೋರ್ಟ್‌ಗೆ ತಿಳಿಸಿದರು.
ಹೌದು, ಇದೊಂದು ಚರ್ಚಾ ವಿಷಯವಾಗಿದೆ. ಈ ಕುರಿತು ನಮಗೆ ಕೆಲವು ವೈಜ್ಞಾನಿಕ ದತ್ತಾಂಶಗಳು ನಮ್ಮ ಬಳಿ ಇಲ್ಲ. ನೋವಿಗೆ ಕಾರಣವಾಗುವ ಕೆಲವು ಅಧ್ಯಯನಗಳನ್ನು ನಮಗೆ ಕೊಡಿ. ನಾವು ಒಂದು ಸಮಿತಿಯನ್ನು ರಚಿಸಬಹುದು, ಈ ಕುರಿತು ಮುಂದಿನ ವಿಚಾಣೆಯಲ್ಲಿ ಚರ್ಚಿಸಬಹುದು ಎಂದು ಸಿಜೆಐ ಡಿ ವೈ ಚಂದ್ರಚೂಡ್ ಹೇಳಿದರು. ಅಲ್ಲದೇ, ಮುಂದಿನ ವಿಚಾರಣೆಯನ್ನು ಮೇ 2ಕ್ಕೆ ನಿಗದಿ ಮಾಡಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಪಿ ಎಸ್ ನರಸಿಂಹ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಂದಿಗೂ ಸಾವಿನಲ್ಲಿ ಘನತೆ ಇರಬೇಕೆಂಬ ಪ್ರಶ್ನೆ ಚರ್ಚೆಯಾಗುತ್ತಲೇ ಇದೆ. ಅದು ಕಡಿಮೆ ನೋವಿನಿಂದ ಕೂಡಿರಬೇಕು. ಸದ್ಯದ ಪರಿಸ್ಥಿತಿಯ ನೇಣು ಹಾಕುವುದು ತೃಪ್ತಿಕರ ಸಾಧನವಾಗಿದೆ. ಹಾಗಾದಲ್ಲಿ, ಇಂಜೆಕ್ಷನ್ ಕೊಟ್ಟು ಸಾಯಿಸುವುದು ಪರಿಗಣಿಸಬಹುದೇ ಎಂದು ಜಸ್ಟೀಸ್ ಹೇಳಿದರು.
ಚುಚ್ಚುಮದ್ದು ಮೂಲಕ ಮರಣ ದಂಡನೆ ಶಿಕ್ಷೆಯ ಜಾರಿ ಮಾಡುವುದು ನೋವಿನಿಂದ ಕೊಡಿದೆ. ಶೂಟ್ ಮಾಡುವ ಮೂಲಕ ಶಿಕ್ಷೆ ಜಾರಿ ಮಾಡುವುದು ಮಿಲಿಟರಿ ಆಡಳಿತಗಳ ನೆಚ್ಚಿನ ಟೈಮ್‌ಪಾಸ್ ಆಗಿತ್ತು. ಇದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಸಿಜೆಐ ಚಂದ್ರಚೂಡ್ ಅವರು ಹೇಳಿದರು.
ಕರ್ನಾಟಕ
Nitin Gadkari: ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದು ಮಂಗಳೂರು ಮಹಿಳೆಯ ಮೊಬೈಲ್‌ನಿಂದ, ಏನಿದು ಕೇಸ್?
Nitin Gadkari: ಕಳೆದ ಜನವರಿಯಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜಯೇಶ್ ಕಾಂತಾ ಎಂಬಾತನ ಹೆಸರಿನಲ್ಲಿ ನಾಗಪುರದ ಕಚೇರಿಗೆ ಬೆದರಿಕೆ ಕರೆ ಮಾಡಲಾಗಿತ್ತು. ಇದೀಗ ಅದೇ ಜಯೇಶ್ ಹೆಸರಿನಲ್ಲಿ ಹಿಂಡಲಗಾ ಜೈಲಿನಿಂದಲೇ ಕರೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಮತ್ತೆ ಬೆದರಿಕೆ ಕರೆಗಳು ಬಂದಿದ್ದು, ಇದರ ಹಿನ್ನೆಲೆಯಲ್ಲಿ ಸಚಿವರ ಕಚೇರಿ ಹಾಗೂ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಿಂದಲೇ ಜಯೇಶ್ ಪೂಜಾರಿ ಎಂಬಾತನೇ ಮತ್ತೆ ಬೆದರಿಕೆ ಕರೆ ಮಾಡಿದ್ದಾನೆ ಎಂಬುದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಂಗಳೂರಿನ ಮಹಿಳೆಯ ಮೊಬೈಲ್‌ನಿಂದ ಬೆದರಿಕೆ ಕರೆ ಮಾಡಿದ್ದಾನೆ ಎಂದು ಮಹತ್ವದ ಅಂಶ ಬಹಿರಂಗಪಡಿಸಿದ್ದಾರೆ.
“ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆಗಳನ್ನು ಮಾಡಿದ ವ್ಯಕ್ತಿಯು ಜಯೇಶ್ ಪೂಜಾರಿ ಎಂಬುದಾಗಿ ತಿಳಿಸಿದ್ದಾನೆ. ಕರೆ ಮಾಡಿದ ನಂಬರ್‌ಅನ್ನು ಆಧರಿಸಿ ತನಿಖೆ ನಡೆಸಲಾಗಿದ್ದು, ಆ ಮಹಿಳೆಯು ಮಂಗಳೂರಿನವರು ಎಂಬುದಾಗಿ ಗೊತ್ತಾಗಿದೆ. ನಾವು ಕೂಡ ಆ ಮಹಿಳೆಯನ್ನು ಸಂಪರ್ಕಿಸಿದ್ದು, ಮಂಗಳೂರಿನಲ್ಲಿ ಇವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಮಹಿಳೆಯ ಫ್ರೆಂಡ್ ಅಥವಾ ಜಯೇಶ್ ಪೂಜಾರಿಯಿಂದ ಕರೆ ಬಂದಿರುವ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ” ಎಂದು ನಾಗ್ಪುರ ಡಿಸಿಪಿ ರಾಹುಲ್ ಮಂದಾನೆ ಮಾಹಿತಿ ನೀಡಿದ್ದಾರೆ.
ನಾಗ್ಪುರ ಪೊಲೀಸರು ನೀಡಿದ ಮಾಹಿತಿ
ನಿತಿನ್ ಗಡ್ಕರಿ ಕಚೇರಿಗೆಕರೆ ಮಾಡಿ 10 ಕೋಟಿ ರೂಪಾಯಿ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಜನವರಿಯಲ್ಲಿ ಕರೆ ಮಾಡಿದ್ದಾಗ 100 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂಬುದಾಗಿ ತಿಳಿದುಬಂದಿದೆ. ಅಲ್ಲದೆ, ಜನವರಿಯಲ್ಲಿ ಕರೆ ಮಾಡಿದ್ದಾತ, ತಾನು ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಎಂಬುದಾಗಿ ಹೇಳಿದ್ದ. ಆಗಲೂ, ಗಡ್ಕರಿ ನಿವಾಸ ಹಾಗೂ ಕಚೇರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಜನವರಿಯಲ್ಲೂ ಜಯೇಶ್ ಪೂಜಾರಿ ಹೆಸರಲ್ಲಿ ಕರೆ
ಕಳೆದ ಜನವರಿ 14ರಂದು ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಕಚೇರಿಗೆ ರಾತ್ರಿ 11.25, 11.32 ಮತ್ತು 12.32ಕ್ಕೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದು ಹಿಂಡಲಗಾ ಜೈಲಿನಿಂದ ಬಂದ ಕರೆ ಇದೆಂದು ಪ್ರಾಥಮಿಕ ತನಿಖೆಯಲ್ಲೇ ಬಯಲಾಗಿತ್ತು. ಆವತ್ತು ಕರೆ ಮಾಡಿದವನು ಜೈಲಿನಲ್ಲಿರುವ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್ ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂದು ಪತ್ತೆ ಹಚ್ಚಲಾಗಿತ್ತು. ಆವತ್ತು ಜಯೇಶ್ ಪೂಜಾರಿಯ ಕೋಣೆಯನ್ನು ಶೋಧಿಸಿದಾಗ ಒಂದು ಡೈರಿ ಪತ್ತೆಯಾಗಿತ್ತು.
ಜಯೇಶ್ ಕಾಂತಾನನ್ನು ಆವತ್ತು ನಾಗಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮರಳಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ಈಗ ಆತ ಮತ್ತೆ ಕರೆ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪದೇಪದೆ ಗಡ್ಕರಿ ಅವರಿಗೆ ಕರೆ ಮಾಡುವ ಉದ್ದೇಶದ ಬಗ್ಗೆಯೂ ತನಿಖೆ ಆಗಬೇಕಾಗಿದೆ. ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: Nitin Gadkari : ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೆ ಜೀವ ಬೆದರಿಕೆ ಕರೆ; ಏನಾಗುತ್ತಿದೆ ಹಿಂಡಲಗಾ ಜೈಲಿನಲ್ಲಿ?
ದೇಶ
ಪಾಟ್ನಾ ರೈಲ್ವೆ ಸ್ಟೇಶನ್ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಆಗಿದ್ದಕ್ಕೆ ಫುಲ್ ಖುಷಿಯಾದ ಪೋರ್ನ್ ಸ್ಟಾರ್; ಅದು ನಂದೇ ಎಂದ ಕೇಂದ್ರಾ ಲಸ್ಟ್
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಬ್ಲರ್ ರೂಪದಲ್ಲಿ ಹರಿದಾಡುತ್ತಿದೆ. ಕೆಲವು ವಿಡಿಯೊಗಳು ಸಂಪೂರ್ಣ ಬ್ಲರ್ ಆಗಿದ್ದರೆ, ಮತ್ತೆ ಕೆಲವು ಅರ್ಧಂಬರ್ಧ ಬ್ಲರ್ ಆಗಿದೆ.
ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್ನ (Patna Railway Junction)10ನೇ ಪ್ಲಾಟ್ಫಾರ್ಮ್ನಲ್ಲಿ ಭಾನುವಾರ ಬೆಳಗ್ಗೆ 9.30ರ ಹೊತ್ತಿಗೆ, ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರದರ್ಶನವಾಗಿತ್ತು. ಅಲ್ಲಿದ್ದ ನೂರಾರು ಪ್ರಯಾಣಿಕರು ಮುಜುಗರಗೊಂಡಿದ್ದರೆ, ಕೆಲವರು ಅದನ್ನು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದರು. ಅದರ ಬೆನ್ನಲ್ಲೇ ಈ ಟಿವಿ ಪರದೆ ಮೇಲೆ ಜಾಹೀರಾತು ಪ್ರಸಾರ ಮಾಡಲು ಗುತ್ತಿಗೆ ತೆಗೆದುಕೊಂಡಿದ್ದ ದತ್ತಾ ಸ್ಟುಡಿಯೊ ಕಂಪನಿ ಪ್ರೈವೇಟ್ ಲಿಮಿಟೆಡ್ ವಿರುದ್ಧ ರೈಲ್ವೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆ ಏಜೆನ್ಸಿಯನ್ನು ಬ್ಲ್ಯಾಕ್ ಲಿಸ್ಟ್ಗೆ ಹಾಕಲಾಗಿದೆ. ಇಷ್ಟೆಲ್ಲದರ ಮಧ್ಯೆ ಈ ಅಶ್ಲೀಲ ವಿಡಿಯೊ ಪ್ರಸಾರವಾದ ಬಗ್ಗೆ ಅಮೆರಿಕದ ಪೋರ್ನ್ಸ್ಟಾರ್ ಕೇಂದ್ರಾ ಲಸ್ಟ್ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಇದು ನನ್ನದೇ ವಿಡಿಯೊ ಇರಬಹುದು ಎನ್ನಿಸುತ್ತದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಬ್ಲರ್ ರೂಪದಲ್ಲಿ ಹರಿದಾಡುತ್ತಿದೆ. ಕೆಲವು ವಿಡಿಯೊಗಳು ಸಂಪೂರ್ಣ ಬ್ಲರ್ ಆಗಿದ್ದರೆ, ಮತ್ತೆ ಕೆಲವು ಅರ್ಧಂಬರ್ಧ ಮಸುಬಾಗಿವೆ. ಅದರ ಮಧ್ಯೆ ಕೇಂದ್ರಾ ಲಸ್ಟ್ ಅವರು ತಮ್ಮ ಒಂದು ಮಾದಕ ಫೋಟೋವನ್ನು ಪೋಸ್ಟ್ ಮಾಡಿಕೊಂಡು, ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಅದರ ಮುಂದೆ ಭಾರತದ ಧ್ವಜದ ಇಮೋಜಿ ಹಾಕಿದ್ದಾರೆ. ಬಿಹಾರ ರೈಲ್ವೆ ಸ್ಟೇಶನ್ ಎಂದು ಹ್ಯಾಷ್ಟ್ಯಾಗ್ (#BiharRailwayStation) ಹಾಕಿದ್ದಾರೆ.
ಅವರ ಈ ಟ್ವೀಟ್ಗೆ ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ‘ಇದು ನಿಮ್ಮ ವಿಡಿಯೊವಾ? ನಿಮಗೆ ಗೊತ್ತಾ?’ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಕೇಂದ್ರಾ ಲಸ್ಟ್ ‘ನಾನೂ ಹಾಗಂದುಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ಇನ್ನುಳಿದಂತೆ ಹಲವು ನೆಟ್ಟಿಗರು ಕೇಂದ್ರಾ ಅವರ ಟ್ವೀಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರಂತೂ ಪಕ್ಕಾ ಇದು ನಿಮ್ಮ ವಿಡಿಯೊವೇ. ಭಾರತದಲ್ಲಿ ಇನ್ಮುಂದೆ ನಿಮ್ಮ ಪೋರ್ನ್ ವಿಡಿಯೊಗಳು ಸಖತ್ ಫೇಮಸ್ ಆಗಲಿವೆ ಎಂದಿದ್ದಾರೆ.
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ20 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್21 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್5 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ8 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ