ಮುಂಬೈ: ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಸುಮಾರು ೨.೨ ಲಕ್ಷ ಕೋಟಿ ರೂ. ಸಾಲ (Gautam Adani Debt) ಹೊಂದಿದೆ ಎಂದು ವರದಿ ಆಗಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್ ಮುಂದಿನ ವರ್ಷದ ವೇಳೆಗೆ ಇನ್ನೂ ೮.೨೮ ಲಕ್ಷ ಕೋಟಿ ರೂ. (10 ಶತಕೋಟಿ ಡಾಲರ್) ಸಾಲ ಮಾಡಲಿದೆ ಎಂದು ತಿಳಿದುಬಂದಿದೆ.
ಅದಾನಿ ಗ್ರೂಪ್‌ನಿಂದ ಹೆಚ್ಚಿನ ಹೂಡಿಕೆಗಳ ಯೋಜನೆ ರೂಪಿಸಲಾಗಿದೆ. ಹೆಚ್ಚು ಹೂಡಿಕೆಯ ಯೋಜನೆಗಳ ಜಾರಿಗಾಗಿ ವಿದೇಶಿ ಮೂಲಗಳು, ಗ್ರೀನ್ ಬಾಂಡ್ ಸೇರಿ ಹಲವು ಮೂಲದಿಂದ ಮೊದಲಿಗೆ ೫ ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ. ಈಗಾಗಲೇ ಹೆಚ್ಚಿನ ಬಡ್ಡಿದರದಲ್ಲಿ ಅದಾನಿ ಗ್ರೂಪ್ ಸಾಲ ಪಡೆದಿದೆ. ಇದರ ಬೆನ್ನಲ್ಲೇ ಹೆಚ್ಚಿನ ಸಾಲ ಮಾಡಲು ಗ್ರೂಪ್ ಮುಂದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದೇ ಡಿಸೆಂಬರ್‌ನಿಂದಲೇ ಸಾಲ ಪಡೆಯುವ ಪ್ರಕ್ರಿಯೆ ಆರಂಭವಾಗಲಿದೆ. ಬಂದರುಗಳಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಅದಾನಿ ಹಿಡಿತವಿದೆ. ಹಾಗಾಗಿ ಇವರು ಏಷ್ಯಾದ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಸೇವೆಗಳು, ಮಾಧ್ಯಮ ಹಾಗೂ ಗ್ರೀನ್ ಎನರ್ಜಿ ಕ್ಷೇತ್ರದಲ್ಲೂ ಹೂಡಿಕೆ ಮಾಡಲಿದ್ದಾರೆ. ಹಾಗಾಗಿ ಹೆಚ್ಚಿನ ಸಾಲ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Adani | ಅದಾನಿ ಸಾಲದ ಕುರಿತ ತನ್ನ ವರದಿಯಲ್ಲಿ ತಪ್ಪಾಗಿದೆ ಎಂದು ಒಪ್ಪಿದ ಕ್ರೆಡಿಟ್ ಸೈಟ್ಸ್