Site icon Vistara News

Gautam Adani: ಒಂದೇ ವಾರದಲ್ಲಿ ಅದಾನಿ ಸಂಪತ್ತಿನಲ್ಲಿ 10 ಶತಕೋಟಿ ಡಾಲರ್ ಏರಿಕೆ!

Gautam Adani

Gautam Adani overtakes Mukesh Ambani as India's richest man

ನವದೆಹಲಿ: ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ (Hindenburg Report) ವರದಿಯಿಂದಾಗಿ ಭಾರೀ ಕುಸಿತ ಅನುಭವಿಸಿದ್ದ ಅದಾನಿ ಗ್ರೂಪ್‌(Adani Group) ಷೇರುಗಳು ಈಗ ಏರುಗತಿಯಲ್ಲಿವೆ(adani Shares). ಪರಿಣಾಮ, ಅದಾನಿ ಗ್ರೂಪ್ ಚೇರ್ಮನ್ ಗೌತಮ್ ಅದಾನಿ (Gautam Adani) ಅವರ ಸಂಪತ್ತಿನ ಮೌಲ್ಯವು ಒಂದೇ ವಾರದಲ್ಲಿ 10 ಶತಕೋಟಿ ಡಾಲರ್‌ನಷ್ಟು ಏರಿಕೆ ಕಂಡಿದೆ. ಸದ್ಯ ಅವರು ಒಟ್ಟು ಆಸ್ತಿ ಮೌಲ್ಯ 70.3 ಶತಕೋಟಿ ಡಾಲರ್‌ನಷ್ಟಿದೆ(Gautam Adani’s Wealth) ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಂಪತ್ತಿನ ಹೆಚ್ಚಳದ ನಂತರ ಗೌತಮ್ ಅದಾನಿ ಈಗ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 16 ನೇ ಸ್ಥಾನಕ್ಕೆ ಏರಿದ್ದಾರೆ. ಟಾಪ್ 20 ಪಟ್ಟಿಯಲ್ಲಿ ಎರಡನೇ ಭಾರತೀಯ ಬಿಲಿಯನೇರ್ ಆಗಿದ್ದಾರೆ. ಮುಕೇಶ್ ಅಂಬಾನಿ ಅವರು 90.4 ಶತಕೋಟಿ ಡಾಲರ್‌ ಆಸ್ತಿಯೊಂದಿಗೆ 13ನೇ ಸ್ಥಾನದಲ್ಲಿದ್ದಾರೆ.

ಅಮೆರಿಕದ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್ (DFC)ಯ ವರದಿಯ ನಂತರ, ಮಂಗಳವಾರ ಅದಾನಿ ಗ್ರೂಪ್‌ ಷೇರುಗಳು 20% ರಷ್ಟು ಏರಿಕೆ ಕಂಡವು. ಅದಾನಿ ಗ್ರೂಪ್ ವಿರುದ್ಧ ಹಿಂಡೆನ್‌ಬರ್ಗ್ ಮಾಡಿದ್ದ ಕಾರ್ಪೊರೇಟ್ ವಂಚನೆಯ ವರದಿಯ ಆರೋಪಗಳು ಅಪ್ರಸ್ತು ಎಂಬುದನ್ನು ಈ ಬೆಳವಣಿಗೆಯು ಸಾಬೀತುಪಡಿಸುತ್ತಿವೆ.

ಶ್ರೀಲಂಕಾದಲ್ಲಿ ಕಂಟೈನರ್ ಟರ್ಮಿನಲ್ ನಿರ್ಮಿಸಲು ಡಿಎಫ್‌ಸಿ 553 ಮಿಲಿಯನ್ ಡಾಲರ್ ಅಂದರೆ, 4600 ಕೋಟಿ ರೂ.ಗೂ ಹೆಚ್ಚು ಸಾಲವನ್ನು ಅದಾನಿಗೆ ನೀಡಿದೆ. ಸಾಲವನ್ನು ನೀಡುವ ಮೊದಲು, ಡಿಎಫ್‌ಸಿ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್‌ಬರ್ಗ್‌ನ ಆರೋಪಗಳ ಕುರಿತು ತನಿಖೆ ಮಾಡಿದ್ದು, ಅವು ಸುಳ್ಳು ಎಂದು ಕಂಡುಬಂದಿದೆ ಎಂದು ಹೇಳಿದೆ. ಕಳೆದ ಒಂದು ವಾರದಲ್ಲಿ ಅದಾನಿ ಗ್ರೂಪ್ ಸಂಪತ್ತಿನಲ್ಲಿಿ 1.76 ಲಕ್ಷ ಕೋಟಿ ರೂ.ಗೂ ಅಧಿಕ ಏರಿಕೆಯಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಈ ಮಧ್ಯೆ, ಷೇರು ಪೇಟೆ ನಿಯಮಗಳನ್ನು ಮೀರಿರುವ ಆರೋಪ ಎದುರಿಸುತ್ತಿರುವ ಅದಾನಿ ಗ್ರೂಪ್ ವಿರುದ್ಧ, ನ್ಯಾಯಾಲಯ ನಿಯಂತ್ರಣದಲ್ಲಿ ತನಿಖೆಗೆ ಕೋರಿ ಸಲ್ಲಿಸಲಾಗಿದ್ದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿಟ್ಟಿದೆ. ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ವರದಿಯ ಹಿನ್ನೆಲೆಯಲ್ಲ ಈ ಪಿಐಎಲ್ ದಾಖಲಿಸಲಾಗಿತ್ತು.

ನಿಫ್ಟಿ, ಸೆನ್ಸೆಕ್ಸ್‌ ನೆಗೆತ, ಸುಧಾರಿಸಿದ ರೂಪಾಯಿ ಮೌಲ್ಯ!

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಗೆಲುವು ಸಾಧಿಸಿದ (Assembly Election Results 2023) ಬೆನ್ನಲ್ಲೇ ದೇಶದ ಷೇರುಪೇಟೆಯಲ್ಲಿ (Stock Market) ಹೊಸ ಉತ್ಸಾಹ ಮೂಡಿದೆ. ಸೋಮವಾರ ನಿಫ್ಟಿ, ಸೆನ್ಸೆಕ್ಸ್‌ ದಾಖಲೆಯ ಏರಿಕೆ ಕಂಡಿದ್ದು, ಚುನಾವಣೆ ಫಲಿತಾಂಶವೇ ಇದಕ್ಕೆ ಕಾರಣ ಎಂದು ಷೇರುಪೇಟೆ ತಜ್ಞರು ತಿಳಿಸಿದ್ದಾರೆ. ಮತ್ತೊಂದೆಡೆ ಡಾಲರ್‌ ಎದುರು ರೂಪಾಯಿ ಮೌಲ್ಯವೂ ಸುಧಾರಿಸಿಕೊಂಡಿದೆ.

ಷೇರು ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಭಾರಿ ಲವಲವಿಕೆ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್‌ 877.43 ಪಾಯಿಂಟ್‌ಗಳ ಏರಿಕೆಯೊಂದಿಗೆ (ಶೇ.1.3%) 68,358.52 ಅಂಕಗಳೊಂದಿಗೆ ಸಾರ್ವಕಾಲಿಕ ಸಾಧನೆ ಮಾಡಿತು. ಇನ್ನು ನಿಫ್ಟಿಯೂ 284.80 ಅಂಕಗಳ ಏರಿಕೆಯೊಂದಿಗೆ (ಶೇ.1.41) 20,552.70 ಅಂಕಗಳನ್ನು ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಪಾಯಿಂಟ್‌ಗಳ ದಾಖಲೆ ಬರೆಯಿತು.

ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಡಾಲರ್‌ ಎದುರು ರೂಪಾಯಿ ಮೌಲ್ಯವು 6 ಪೈಸೆ ಸುಧಾರಣೆಯಾಗಿದೆ. ಇನ್ನು ಷೇರು ಮಾರುಕಟ್ಟೆಯಲ್ಲ ವಹಿವಾಟು ಆರಂಭವಾದ ಕೆಲವೇ ನಿಮಿಷಗಳಲ್ಲಿ ಹಲವು ಕಂಪನಿಗಳ ಮಾರುಕಟ್ಟೆ ಬಂಡವಾಳವು 4.09 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಬೆಳಗ್ಗೆಯ ಟ್ರೇಡಿಂಗ್‌ನಲ್ಲಿ ಅದಾನಿ ಗ್ರೂಪ್‌ ಕಂಪನಿಗಳು ಹೆಚ್ಚು ಲಾಭ ಗಳಿಸಿವೆ. ಹಾಗೆಯೇ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಎನ್‌ಟಿಪಿಸಿ ಹಾಗೂ ಲಾರ್ಸೆನ್‌ & ಟರ್ಬೊ ಕೂಡ ಹೆಚ್ಚಿನ ಲಾಭ ಗಳಿಸಿದವು.

ಈ ಸುದ್ದಿಯನ್ನೂ ಓದಿ: Gautam Adani: ಶರದ್ ಪವಾರ್ ಮನೆಗೆ ಗೌತಮ್ ಅದಾನಿ; ಎರಡು ಗಂಟೆ ಮಾತುಕತೆ!

Exit mobile version