Site icon Vistara News

Pervez Musharraf Death: ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದ ಮುಷರಫ್, ಆಗ್ರಾ ಮಾತುಕತೆ ಮುರಿದರು

General Pervez Musharraf was the behind of Kargil war

ನವದೆಹಲಿ: ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಜತೆಗೆ ಶಾಂತಿ ಬಯಸಿ, ಲಾಹೋರ್ ಬಸ್ ಯಾತ್ರೆ ಕೈಗೊಂಡಿದ್ದರು. ಆದರೆ, ಪಾಕಿಸ್ತಾನ ಮಾತ್ರ ಯುದ್ಧದ ಉಡುಗೋರೆ ನೀಡಿತು! ಈ ಕೃತಘ್ನ ಕೃತ್ಯದ ಹಿಂದೆ ಇದ್ದದ್ದು ಪರ್ವೇಜ್ ಮುಷರಫ್ (Pervez Musharraf Death) ಅವರು. ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಮುಷರಫ್, ಪ್ರಧಾನಿ ನವಾಷ್ ಷರೀಫ್ ಅವರನ್ನು ಕತ್ತಲಲ್ಲಿ ಇಟ್ಟು, ಕಾಶ್ಮೀರದ ಕಾರ್ಗಿಲ್‌ಗೆ (kargil war) ಸೇನೆಯನ್ನು ಕಳುಹಿಸಿದ್ದರು, ಇದೇ ಮುಂದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧಕ್ಕೆ ಕಾರಣವಾಯಿತು.

ಸೇನೆ ಹಿಂಪಡೆದ ಷರೀಫ್

ಎಲ್‌ಒಸಿ ದಾಟಿ ಒಳ ನುಗ್ಗಿದ ಪಾಕಿಸ್ತಾನದ ಪಡೆಗಳು ಕಾಶ್ಮೀರ ಕಾರ್ಗಿಲ್‌ ಜಿಲ್ಲೆಯ ಕೆಲವು ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತವು ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಕೈಗೊಂಡಿತು. ಎರಡು ತಿಂಗಳ ಕಾಲ ಈ ಯುದ್ಧ ನಡೆಯಿತು. ಭಾರತೀಯ ಸೇನೆ ತನ್ನೆಲ್ಲ ಪ್ರದೇಶಗಳನ್ನು ಒಂದೊಂದಾಗಿ ಮರಳಿ ವಶಪಡಿಸಿಕೊಂಡಿತು. ಘನಘೋರ ಯುದ್ಧದ ಸುಳಿವು ಅರಿತ ಅಂತಾರಾಷ್ಟ್ರೀಯ ಸಮುದಾಯವು ಯುದ್ಧ ವಿರಾಮಕ್ಕೆ ಒತ್ತಡ ಹೇರಿದವು. ಕೊನೆಗೆ, ಮುಷರಫ್‌ ಅವರು ಗಡಿಯಿಂದ ಸೇನೆಯನ್ನು ವಾಪಸ್ ಕರೆಯಿಸಿಕೊಂಡರು. ಪಾಕಿಸ್ತಾನ ಸರ್ಕಾರದ ಈ ನಿರ್ಧಾರಕ್ಕೆ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿತು. ಅಲ್ಲದೇ, ಶೀಘ್ರವೇ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ ದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂಬ ವದಂತಿಗಳು ಹಬ್ಬಿದವು. ಈ ವದಂತಿ ನಿಜವಾಗಲೂ ತುಂಬ ದಿನ ಬೇಕಾಗಲಿಲ್ಲ. ಜನರಲ್ ಪರ್ವೇಜ್ ಮುಷರಫ್ ಅವರು ಷರೀಫ್ ಅವರನ್ನು ಪದಚ್ಯುತಗೊಳಿಸಿಯೇ ಬಿಟ್ಟರು.

ಇಷ್ಟಾಗಿಯೂ, ಕಾರ್ಗಿಲ್ ಯುದ್ಧದಲ್ಲಿ ಮುಷರಫ್ ಅವರ ಕೈಗೊಂಡ ನಿರ್ಧಾರಗಳ ಬಗ್ಗೆ ಸೇನಾವಲಯದಲ್ಲೂ ಅಸಮಾಧಾನ ವ್ಯಕ್ತವಾಗಿತ್ತು. ಮುಷರಫ್ ಅವರ ಅನುಸರಿಸಿದ ನೀತಿಗಳಿಂದಾಗಿ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಸೋಲುಂಟಾಯಿತು. ಹಾಗಾಗಿ, ಅವರ ವಿರುದ್ಧ ಕೋರ್ಟ್ ಮಾರ್ಷಲ್ ಮಾಡಲು ಅಡ್ಮಿರಲ್ ಬೊಖಾರಿ ಒತ್ತಾಯಿಸಿದರು. ಜನರಲ್ ಕುಲಿಖಾನ್ ಅವರು ಇದು ಪೂರ್ವ ಪಾಕಿಸ್ತಾನದ ಯುದ್ಧಕ್ಕಿಂತ ದೊಡ್ಡ ದುರಂತ ಎಂದು ಬಣ್ಣಿಸಿದ್ದರು. ತಪ್ಪು ಕಾರ್ಯತಂತ್ರಗಳಿಂದಾಗಿ ಯೋಧರು ಪ್ರಾಣ ಕಳೆದುಕೊಳ್ಳವಂತಾಯಿತು ಎದು ಆರೋಪಿಸಿದರು.

ಹುದ್ದೆಗೆ ಕುತ್ತು ಬರುತ್ತಿದ್ದಂತೆ ಬಂಡೆದ್ದರು

ಕಾರ್ಗಿಲ್ ಯುದ್ಧ ಆರಂಭಿಸಿ, ಸೋಲು ಅನುಭವಿಸಲು ಕಾರಣವಾದ ಜನರಲ್ ಪರ್ವೇಜ್ ಮುಷರಫ್ ಅವರನ್ನು ಅಂದಿನ ಪ್ರಧಾನಿ ನವಾಜ್ ಷರೀಫ್, ಹುದ್ದೆಯಿಂದ ವಜಾಗೊಳಿಸಲು ಮುಂದಾದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಜನರಲ್ ಪರ್ವೇಜ್ ಮುಷರಫ್ ಅವರು ಕ್ಷಿಪ್ರ ಸೇನಾಕ್ರಾಂತಿ ನಡೆಸಿ, ಸರ್ಕಾರವನ್ನು ಕಿತ್ತೊಗೆದು ದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಆ ಬಳಿಕ, ಷರೀಫ್ ಮುಂದಿನ 10 ವರ್ಷಗಳ ಪಾಕಿಸ್ತಾನ ಪ್ರವೇಶವನ್ನು ನಿಷೇಧಿಸಿದರು.

ಇದನ್ನೂ ಓದಿ: Pervez Musharraf Death: ಪರ್ವೇಜ್ ಮುಷರಫ್ ಹುಟ್ಟೂರು ದಿಲ್ಲಿ; ವಿಸ್ಕಿ, ಸಿಗಾರ್ ಪ್ರಿಯ

ಆಗ್ರಾ ಮಾತುಕತೆ

ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ವ್ಯಕ್ತಿಯೇ ಮುಂದೆ ಭಾರತದ ಜತೆಗೆ ಆಗ್ರಾ ಮಾತುಕತೆಗೆ ಮುಂದಾದರು. ಅಂದಿನ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರು ಪಾಕಿಸ್ತಾನದ ಜತೆಗೆ ಶಾಂತಿ ಬಯಸಿದ್ದರು. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಮಾತುಕತೆಗೆ ವೇದಿಕೆ ಸೃಷ್ಟಿಸಲು, ಆಗ್ರಾ ಶೃಂಗ ಸಭೆಯನ್ನು ಆಯೋಜಿಸಲಾಯಿತು. ಆದರೆ, ಮುಷರಫ್ ಅವರು ಇಲ್ಲಿಯೂ ತಮ್ಮ ಹಟಮಾರಿತನ ಪ್ರದರ್ಶಿಸಿದ್ದರಿಂದ ಮಾತುಕತೆ ಮುರಿದು ಬಿತ್ತು.

Exit mobile version