Site icon Vistara News

ಅಪರಾಧ ಎಸಗಿ ಪಲಾಯನಗೈದ 184 ಜನರ ಸ್ಥಳ ಪತ್ತೆ; ಶೀಘ್ರವೇ ಭಾರತಕ್ಕೆ ವಾಪಸ್

geoloaction of 184 fugitives found and they will bring back soon to india

ನವದೆಹಲಿ: ಭಾರತಕ್ಕೆ ಬೇಕಾಗಿರುವ 184 ಅಪರಾಧಿಗಳಿರುವ ವಿವಿಧ ಸ್ಥಳಗಳನ್ನು ಗುರುತಿಸಿದೆ(Geolocated of fugitives). ಇಂಟರ್‌ಪೋಲ್ (Interpol) ಮತ್ತು ಆಯಾ ದೇಶಗಳ ಕಾನೂನು ಜಾರಿ ಸಂಸ್ಥೆಗಳ ಸಹಾಯದಿಂದ ಅವರ ವಾಪಸಾತಿಗಾಗಿ ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರೀಯ ತನಿಖಾ ದಳ (CBI) ನಿರ್ದೇಶಕ ಪ್ರವೀಣ್ ಸೂದ್ (CBI Director Praveen Sood) ನೇತೃತ್ವದ ತಂಡ ತಿಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮುಖ್ಯಸ್ಥ ದಿನಕರ್ ಗುಪ್ತಾ (NIA Chief Dinkar Gupta) ಅವರು ವಿಯೆನ್ನಾದಲ್ಲಿ ನಡೆದ ಇಂಟರ್‌ಪೋಲ್ 91 ನೇ ಸಾಮಾನ್ಯ ಸಭೆಯಲ್ಲಿ “ಅಪರಾಧ, ಅಪರಾಧಿಗಳು ಮತ್ತು ಅಪರಾಧಗಳ ಆದಾಯಕ್ಕೆ ಯಾವುದೇ ಸುರಕ್ಷಿತ ಸ್ವರ್ಗವನ್ನು ನಿರಾಕರಿಸಬೇಕು” ಎಂದು ಒತ್ತಿ ಹೇಳಿದರು(fugitives in abroad). ಈ ಸಾಮಾನ್ಯಸಭೆಯಲ್ಲಿ ಸಿಬಿಐ ಮತ್ತು ಎನ್ಐಎ ಮುಖ್ಯಸ್ಥರ ನೇತೃತ್ವದ ತಂಡ ಭಾಗವಹಿಸಿತ್ತು.

ತಲೆಮರೆಸಿಕೊಂಡಿರುವ ಪೈಕಿ ಸುಮಾರು 24 ಅಪರಾಧಿಗಳನ್ನು ಭಾರತೀಯ ತನಿಖಾ ಸಂಸ್ಥೆಗಳು ಈ ವರ್ಷ ಭಾರತಕ್ಕೆ ವಾಪಸ್ ಕರೆತರಲಿವೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಏಜೆನ್ಸಿಗಳ ನಡುವಿನ ಹೆಚ್ಚಿರುವ ಸಹಕಾರದ ಪರಿಣಾಮವಾಗಿ 2021ರಿಂದ 65 ಕ್ಕೂ ಹೆಚ್ಚು ಜನರನ್ನು ಮರಳಿ ಕರೆತರಲಾಗಿದೆ. ಕಳೆದ ವರ್ಷ 27 ಅಪರಾಧಿಗಳನ್ನು ಭಾರತಕ್ಕೆ ವಾಪಸ್ ತರಲಾಗಿದ್ದರೆ, 2021ರಲ್ಲಿ 18 ಮಂದಿಯನ್ನು ಕರೆದುಕೊಂಡು ಬರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ಪರಾರಿಯಾದವ ಪೈಕಿ 24 ಜನರನ್ನು 2023ರಲ್ಲಿ ಇಂಟರ್‌ಪೋಲ್ ಚಾನೆಲ್‌ಗಳ ನಿಕಟ ಸಮನ್ವಯದ ಮೂಲಕ ವಿದೇಶದಿಂದ ಭಾರತಕ್ಕೆ ಕರೆತರಲಾಗುತ್ತಿದೆ. ಒಂದು ವರ್ಷದಲ್ಲಿ ಅತ್ಯಧಿಕ ಅಪರಾಧಿಗಳ ವಾಪಸ್ ಆಗುತ್ತಿದ್ದಾರೆ. ಇದಲ್ಲದೆ, ಭಾರತವು ವಿವಿಧ ದೇಶಗಳಲ್ಲಿ 184 ಕ್ಕೂ ಹೆಚ್ಚು ಅಪರಾಧಿಗಳ ಸ್ಥಳವನ್ನು ಪತ್ತೆ ಮಾಡಿದೆ ಮತ್ತು ಅವರ ವಾಪಸಾತಿಗಾಗಿ ಔಪಚಾರಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಇದು ಇಂಟರ್‌ಪೋಲ್ ಚಾನೆಲ್‌ಗಳ ಹೆಚ್ಚಿದ ಹತೋಟಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅಪರಾಧ ಮತ್ತು ಅಪರಾಧಿಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಸಿಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಜಿಯೋಲೊಕೆಟಿಂಗ್ ಎಂದರೆ, ಭಾರತೀಯ ಏಜೆನ್ಸಿಗಳಿಂದ ತಾಂತ್ರಿಕ ಡೇಟಾ, ಫೋನ್ ಸ್ಥಳಗಳು, ಅಪರಾಧ ಚಟುವಟಿಕೆ ಮತ್ತು ಮಾನವ ಗುಪ್ತಚರ ಸೇರಿದಂತೆ ವಿವಿಧ ವಿಧಾನಗಳನ್ನು ಬಳಸಿಕೊಂಡು ಅಪರಾಧಿಗಳು ಇರುವಿಕೆಯನ್ನು ಕಂಡುಹಿಡಿಯುವುದನ್ನು ಅದು ಸೂಚಿಸುತ್ತದೆ.

ನೀರವ್ ಮೋದಿ ನಿಕಟವರ್ತಿ ಸುಭಾಶ್ ಕುಮಾರ್ ಪರಬ್‌ನನ್ನು ಕಳೆದ ವರ್ಷ ಕೈರೋದಿಂದ, 2021ರ ಲುದಿಯಾನ್ ಕೋರ್ಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾ‌ ಕೌಲಾಲಂಪುರದಿಂದ, 2019ರ ತರನ್ ತಾರನ್ ಬಾಂಬ್ ಸ್ಫೋಟ ಪ್ರಮುಖ ಆರೋಪಿ ಹಾಗೂ ಖಲಿಸ್ತಾನಿ ಪರ ಆರೋಪಿ ಬಿಕ್ರಮಜಿತ್ ಸಿಂಗ್ ಅಲಿಯಾಸ್ ಬಿಕ್ಕರ್ ಪಂಜ್ವಾರನನ್ನು 2022ರಲ್ಲಿ ವಿಯೆನ್ನಾದಿಂದ ಕರೆ ತರಲಾಯಿತು. ಇಂಟರ್‌ಪೋಲ್ ಅಂಕಿಅಂಶಗಳು ಪ್ರಸ್ತುತ ಭಾರತಕ್ಕೆ ಬೇಕಾಗಿರುವ 277 ಜನರ ವಿರುದ್ಧ ರೆಡ್ ನೋಟಿಸ್ ಬಾಕಿ ಉಳಿದಿವೆ ಎಂದು ತೋರಿಸುತ್ತದೆ.

ನವೆಂಬರ್ 28 ರಿಂದ ಶುಕ್ರವಾರದವರೆಗೆ ವಿಯೆನ್ನಾದಲ್ಲಿ ನಡೆದ ಇಂಟರ್‌ಪೋಲ್‌ನ 91 ನೇ ಸಾಮಾನ್ಯ ಸಭೆಯಲ್ಲಿ ಸೂದ್ ಮತ್ತು ಗುಪ್ತಾ ಸೇರಿದಂತೆ ಐದು ಸದಸ್ಯರ ತಂಡವು ಭಾಗವಹಿಸಿತ್ತು. ಒಟ್ಟಾರೆಯಾಗಿ, ಭಾರತದ ನಿಯೋಗವು 14 ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದೆ. ಪರಸ್ಪರ ಕಾನೂನು ನೆರವು ಮತ್ತು ಹಸ್ತಾಂತರ ವಿನಂತಿಗಳನ್ನು ತ್ವರಿತಗೊಳಿಸಲು ಇಂಟರ್‌ಪೋಲ್ ಚಾನೆಲ್‌ಗಳ ಮೂಲಕ ಕ್ರಿಮಿನಲ್ ಮಾಹಿತಿಯ ಉತ್ತಮ ಹಂಚಿಕೆಯ ಸಹಕಾರ ಕೋರಿವೆ.

ಈ ಸುದ್ದಿಯನ್ನೂ ಓದಿ: Interpol ಮಾಹಿತಿ, ಆತ್ಮಹತ್ಯೆಗೆ ಮುಂದಾಗಿದ್ದ ಯುವಕನನ್ನು ರಕ್ಷಿಸಿದ ಮುಂಬೈ ಪೊಲೀಸರು

Exit mobile version