ನವದೆಹಲಿ: ದೆಹಲಿಯಲ್ಲಿ ನೀರಿನ ಸಮಸ್ಯೆ (Water Crisis) ಜೋರಾಗಿದೆ. ಫರ್ಶ್ ಬಜಾರ್ ಪ್ರದೇಶದಲ್ಲಿ ಸಾಮಾನ್ಯ ನಲ್ಲಿ ನೀರಿಗಾಗಿ ನಡೆದ ಜಗಳದಲ್ಲಿ ನೆರೆಮನೆಯೊಬ್ಬರನ್ನು ಚಾಕುವಿನಿಂದ ಇರಿದು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆ ಮಹಿಳೆಯನ್ನು 34 ವರ್ಷದ ಸೋನಿ ಎಂದು ಗುರುತಿಸಲಾಗಿದೆ. ಅವರ ಎಡಗೈಯಲ್ಲಿ ಹಲವಾರು ಗಾಯಗಳು ಮತ್ತು ಹೊಟ್ಟೆಯಲ್ಲಿ ಇರಿತದ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶುಕ್ರವಾರ ರಾತ್ರಿ 10.59 ಕ್ಕೆ, ಪೊಲೀಸರಿಗೆ ಕರೆ ಮಾಡಿದ ಮಹಿಳೆಯ ಪತಿ ತನ್ನ ಹೆಂಡತಿಯ ಹೊಟ್ಟೆಗೆ ಇರಿತವಾಗಿದೆ ಮತ್ತು ಆಂಬ್ಯುಲೆನ್ಸ್ ಅಗತ್ಯವಿದೆ ಎಂದು ಕೋರಿಕೊಂಡಿದ್ದರು. ಪೊಲೀಸ್ ತಂಡವು ಭಿಕಮ್ ಸಿಂಗ್ ಕಾಲೋನಿಯ ಗಲಿ ಸಂಖ್ಯೆ 2 ರ ಸ್ಥಳಕ್ಕೆ ತಲುಪಿ ಗಾಯಗೊಂಡ ಸೋನಿಯನ್ನು ಅವಳ ಕೋಣೆಯಲ್ಲಿ ನೋಡಿದ್ದರು. ಆಕೆಯ ಎಡಗೈಯಲ್ಲಿ ಎರಡು-ಮೂರು ಕತ್ತರಿಸಿದ ಗುರುತುಗಳು ಮತ್ತು ಹೊಟ್ಟೆಯ ಮೇಲೆ ಸಣ್ಣ ಗಾಯವಿತ್ತು ಎಂದು ಉಪ ಪೊಲೀಸ್ ಆಯುಕ್ತ (ಶಹದಾರಾ) ಸುರೇಂದ್ರ ಚೌಧರಿ ತಿಳಿಸಿದ್ದಾರೆ.
ಸೋನಿಯನ್ನು ತಕ್ಷಣ ಹೆಡ್ಗೆವಾರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಆಗಮಿಸಿ ಆಜೆ ಮೃತಪಟ್ಟಿದ್ದಾಳೆ ಎಂದು ಘೋಷಿಸಿದ್ದರು. ತನಿಖೆಯ ಸಮಯದಲ್ಲಿ ಸೋನಿ ಪಕ್ಕದ ಮನೆಯವರ ಜತೆಗೆ ಜಗಳವಾಡಿದ್ದ ವಿಚಾರ ಗೊತ್ತಾಗಿತ್ತು.
ಏನಿದು ಗಲಾಟೆ
ಸಂಜೆ 7.30 ರ ಸುಮಾರಿಗೆ, ಸೋನಿ ತನ್ನ ಮನೆಯ ಮೊದಲ ಮಹಡಿಯಲ್ಲಿರುವ ಸಾರ್ವಜನಿಕ ನಲ್ಲಿಯಿಂದ ನೀರು ಪಡೆಯುವ ವಿಚಾರವಾಗಿ ಪಕ್ಕದ ಮನೆಯ ಮಹಿಳೆ ಮತ್ತು ಆಕೆಯ ಮಗಳೊಂದಿಗೆ ಜಗಳವಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Kangana Ranaut : ಇದೆಂಥಾ ನಾಲಿಗೆ? ಬಿಜೆಪಿ ಅಭ್ಯರ್ಥಿ ಕಂಗನಾರನ್ನು ವೇಶ್ಯೆ ಎಂದು ಕರೆದ ಬಿಹಾರದ ರಾಜಕಾರಣಿ
ಮಾತಿನ ಚಕಮಕಿಯ ಸಮಯದಲ್ಲಿ, ಸೋನಿ ಹುಡುಗಿಯ ಕೈಯನ್ನು ತಿರುಚಿದ್ದಳು. ಇದರಿಂದಾಗಿ ಬಾಲಕಿಯ ಕೈಗೆ ಗಾಯವಾಗಿತ್ತು. ಆಕೆ ಹೆಡ್ಗೆವಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು. ಬಾಲಕಿಯನ್ನು ನಾನ್-ಮೆಡಿಕೋ ಲೀಗಲ್ ಕೇಸ್ ರೋಗಿ ಎಂದು ಪರಿಗಣಿಸಿ ಎಕ್ಸ್-ರೇ ಮಾಡಿದ್ದರು. ಬಾಲಕಿ ಮತ್ತು ಅವಳ ತಾಯಿ ತಮ್ಮ ಮನೆಗೆ ಮರಳಿದ್ದರು. ಬಳಿಕ ಅವರು ಸೋನಿ ಮತ್ತು ಅವಳ ಪತಿ ಸತ್ಬೀರ್ ಅವರೊಂದಿಗೆ ಮತ್ತೊಂದು ವಾಗ್ವಾದದಲ್ಲಿ ತೊಡಗಿದ್ದರು. ವಾಗ್ವಾದದ ಸಮಯದಲ್ಲಿ, ಸೋನಿಯನ್ನು ಹುಡುಗಿ ಇರಿದಿದ್ದಳು ಎಂದು ಡಿಸಿಪಿ ಹೇಳಿದರು.
ಬಾಲಕಿಯನ್ನು ಬಂಧಿಸಲಾಗಿದ್ದು, ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.