ಪ್ರಾಣಿ-ಪಕ್ಷಿಗಳಿಗೆ ಬುದ್ಧಿ, ಮನಸು-ಭಾವ ಇರೋದಿಲ್ಲ ಎಂದು ನಾವು ಮನುಷ್ಯರು ಅಂದುಕೊಂಡಿದ್ದೇವೆ ಅಷ್ಟೇ. ಆದರೆ ವಾಸ್ತವದಲ್ಲಿ ಪ್ರತಿ ಜೀವಿಗಳಿಗೂ ಬುದ್ಧಿ ಇರುತ್ತದೆ. ಅದನ್ನು ತೋರಿಸಬೇಕಾದ ಜಾಗದಲ್ಲಿ ಖಂಡಿತ ತೋರಿಸುತ್ತವೆ. ಅದಕ್ಕೊಂದು ತಾಜಾ ಉದಾಹರಣೆ ಈ ನವಿಲು. ತನ್ನ ಮೊಟ್ಟೆಗಳನ್ನು ಕದಿಯಲು ಬಂದ ಒಬ್ಬಳು ಹುಡುಗಿಗೆ ಎಂದೂ ಮರೆಯಲಾಗದ ಪಾಠವೊಂದನ್ನು ಕಲಿಸಿದೆ ಈ ಪಕ್ಷಿ. ವಿಡಿಯೋ (Viral Video) ನೋಡಿದ ಮೇಲೆ ಯಾರಾದರೂ ಹೇಳಲಿ, ಪಕ್ಷಿಗಳಿಗೆಲ್ಲ ಬುದ್ಧಿ ಇರುವುದಿಲ್ಲವೆಂದು !
ಅಮ್ಮ ಎಂದರೇ ಹಾಗಲ್ಲವೇ..ತನ್ನ ಮಕ್ಕಳ ರಕ್ಷಣೆ, ಭದ್ರತೆಯೇ ಆಕೆಯ ಆದ್ಯತೆ. ಯಾವುದೇ ಪ್ರಾಣಿಯಾಗಿರಲಿ, ಪಕ್ಷಿಯಾಗಿರಲಿ ಅಥವಾ ಮನುಷ್ಯರೇ ಆಗಿರಲಿ, ತಾಯಿ ಸ್ವಭಾವ ಒಂದೇ. ಹೆಣ್ಣು ನವಿಲೊಂದು ಹಲವು ಮೊಟ್ಟೆಗಳನ್ನು ಇಟ್ಟಿತ್ತು. ಹಾಗೇ ತಾನು ಆ ಮೊಟ್ಟೆಗಳನ್ನು ಬಿಟ್ಟು ಹೋಗುವಾಗ ಅದರ ಕಾವಲಿಗೆಂದು ಗಂಡು ನವಿಲನ್ನು ಅಲ್ಲಿ ಬಿಟ್ಟೇ ಹೋಗಿತ್ತು. ಇದು ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಅಷ್ಟರಲ್ಲಿ ಅಲ್ಲೇ ಸಮೀಪದ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯೊಬ್ಬಳು ಮೊಟ್ಟೆಗಳನ್ನು ನೋಡಿ ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ. ಕಾವು ಕೊಡುತ್ತಿದ್ದ ನವಿಲನ್ನು ಎತ್ತಿ ಪಕ್ಕಕ್ಕೆ ತಳ್ಳಿದ ಹುಡುಗಿ, ಮೊಟ್ಟೆಗಳನ್ನು ಎರಡೂ ಕೈಯಲ್ಲಿ ಬಾಚಿಕೊಳ್ಳುತ್ತಿದ್ದಳು. ಅಷ್ಟರಲ್ಲಿ ಆ ನವಿಲು ಬಂದು ಹುಡುಗಿಯ ಮೇಲೆ ದಾಳಿ ಮಾಡಿದೆ. ಆಕೆಯ ಮೈಮೇಲೆ ಹಾರಿ ಕುಕ್ಕಿದೆ. ಮೊಟ್ಟೆ ಮುಟ್ಟಿದರೆ ಹುಷಾರ್ ಎಂದು ತನ್ನದೇ ಭಾಷೆಯಲ್ಲಿ ಎಚ್ಚರಿಕೆ ನೀಡಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬ ವೈರಲ್ ಆಗುತ್ತಿದ್ದು, ನೆಟ್ಟಿಗರೂ ನವಿಲಿನ ವರ್ತನೆಗೆ ಫುಲ್ ಖುಷಿಯಾಗಿದ್ದಾರೆ. ಮೇ 24ರಂದು IG & tiktok @thenitawooshow ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದೆ. ಎರಡೇ ದಿನದಲ್ಲಿ 30 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. 33 ಸಾವಿರಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ.
ಇದನ್ನೂ ಓದಿ: Viral Video: ನಾಯಿಯಾಗಲು 12 ಲಕ್ಷ ರೂಪಾಯಿ ವ್ಯಯಿಸಿದ ವ್ಯಕ್ತಿ; ಈತನೀಗ ಥೇಟ್ ಶ್ವಾನ