Site icon Vistara News

GMail Server Down | ಭಾರತ ಸೇರಿ ವಿಶ್ವಾದ್ಯಂತ ಜಿಮೇಲ್‌ ಸರ್ವರ್‌ ಡೌನ್‌, ಕೋಟ್ಯಂತರ ಜನಕ್ಕೆ ತೊಂದರೆ

Gmail

ನವದೆಹಲಿ: ಭಾರತ, ಬ್ರಿಟನ್‌ ಸೇರಿ ಜಗತ್ತಿನಾದ್ಯಂತ ಗೂಗಲ್‌ನ ಪ್ರಮುಖ ಇ-ಮೇಲ್‌ ಪ್ಲಾಟ್‌ಫಾರ್ಮ್‌ ಜಿಮೇಲ್‌ ಸರ್ವರ್‌ ಡೌನ್‌ (GMail Server Down) ಆಗಿದ್ದು, ಕೋಟ್ಯಂತರ ಜನ ಇ-ಮೇಲ್‌ ಮಾಡಲು ಆಗದೆ ತೊಂದರೆ ಅನುಭವಿಸಿದ್ದಾರೆ. ಅದರಲ್ಲೂ, ಕಾರ್ಪೊರೇಟ್‌ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಂತೂ ಪರದಾಡುವಂತಾಗಿದೆ.

ಭಾರತ, ಬ್ರಿಟನ್‌ ಒಳಗೊಂಡು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶನಿವಾರ (ಡಿಸೆಂಬರ್‌ ೧೦) ಸಂಜೆ ೭ ಗಂಟೆ ಸುಮಾರಿಗೆ ಸಮಸ್ಯೆ ಶುರುವಾಗಿದ್ದು, ರಾತ್ರಿ ೮.೩೦ರ ವೇಳೆಗೆ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇದುವರೆಗೆ ಈ ಕುರಿತು ಗೂಗಲ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಭಾರತದಲ್ಲಿ ಶೇ.೮೪ರಷ್ಟು ಗ್ರಾಹಕರು ಇ-ಮೇಲ್‌ ಸ್ವೀಕರಿಸಲು ಆಗುತ್ತಿಲ್ಲ ಎಂದು ಹೇಳಿದರೆ, ಶೇ.೯ರಷ್ಟು ಜನ ಸರ್ವರ್‌ ಕನೆಕ್ಷನ್‌ ಬಗ್ಗೆ ದೂರಿದ್ದಾರೆ. ಹಾಗೆಯೇ, ಶೇ.೭ರಷ್ಟು ಜನ ವೆಬ್‌ಸೈಟ್‌ ಆ್ಯಕ್ಸೆಸ್‌ ಸಿಗುತ್ತಿಲ್ಲ ಎಂದಿದ್ದಾರೆ. ಮೊಬೈಲ್‌ ಆ್ಯಪ್ ಹಾಗೂ ಕಂಪ್ಯೂಟರ್‌ಗಳಲ್ಲೂ ಸಮಸ್ಯೆ ಸೃಷ್ಟಿಯಾಗಿದೆ. ಜಗತ್ತಿನಾದ್ಯಂತ ೧೫೦ ಕೋಟಿ ಜನ ಜಿಮೇಲ್‌ ಬಳಸುತ್ತಾರೆ.

ಇದನ್ನೂ ಓದಿ | Instagram Down | ಇನ್‌ಸ್ಟಾಗ್ರಾಮ್ ಸರ್ವರ್‌ ಡೌನ್‌, ಪೋಸ್ಟ್‌, ರೀಲ್ಸ್‌ ಇಲ್ಲದೆ ಪೇಚಾಡಿದ ಕೋಟ್ಯಂತರ ಜನ

Exit mobile version