ನವದೆಹಲಿ: ಇ-ಮೇಲ್ ಸೇವೆ ಒದಗಿಸುವ ಜಾಗತಿಕ ದೈತ್ಯ ಜಿಮೇಲ್ ಭಾರತ ಸೇರಿ ಜಗತ್ತಿನಾದ್ಯಂತ ಡೌನ್ (Gmail Down) ಆಗಿದೆ. ಇದರಿಂದಾಗಿ ಕಾರ್ಪೊರೇಟ್ ಕಂಪನಿಗಳು ಎಲ್ಲ ಬಳಕೆದಾರರಿಗೆ ಭಾರಿ ತೊಂದರೆಯಾಗಿದೆ. ಅದರಲ್ಲೂ, ವಾರದಲ್ಲಿಯೇ ಎರಡನೇ ಬಾರಿ ಜಿಮೇಲ್ ಡೌನ್ ಆದ ಕಾರಣ ಬಳಕೆದಾರರಿಗೆ ಕಿರಿಕಿರಿಯಾಗಿದೆ.
ಶೇ.೬೦ರಷ್ಟು ಬಳಕೆದಾರರಿಗೆ ಗೂಗಲ್ ವೆಬ್‌ಸೈಟ್‌ನಲ್ಲಿ ತೊಂದರೆಯಾದರೆ, ಶೇ.೩೫ರಷ್ಟು ಜನರಿಗೆ ಲಾಗ್ ಇನ್ ತೊಂದರೆಯಾಗಿದೆ. ಇನ್ನೂ ಕೆಲವರಿಗೆ ಮೇಲ್ ಮಾಡುವಲ್ಲಿ ತೊಂದರೆಯಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಗೂಗಲ್ ಸಂಸ್ಥೆಯಿಂದ ಇದರ ಕುರಿತು ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಕೆಲ ದಿನಗಳ ಹಿಂದೆಯೂ ಜಿಮೇಲ್ ಡೌನ್ ಆಗಿತ್ತು.
ಹೆಚ್ಚಿನ ಬಳಕೆದಾರರಿಗೆ ೫೦೨ ಎರರ್ ಕಾಣಿಸಿಕೊಂಡ ಕಾರಣ ಬಳಕೆದಾರರು ಟ್ವಿಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ೫೦೨ ಎರರ್‌ನ ಸ್ಕ್ರೀನ್‌ಶಾಟ್ ಫೋಟೊ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಹಾಗೂ ಕಂಪ್ಯೂಟರ್‌ನಲ್ಲಿ ಬಳಕೆ ಮಾಡುವ ಜಿಮೇಲ್ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Twitter Down In India | ಭಾರತದಲ್ಲಿ ಟ್ವಿಟರ್ ಡೌನ್, ಬಳಕೆದಾರರಿಗೆ ಪೇಚಾಟ, ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ