ಕಳೆದ ಕೆಲವು ದಿನಗಳಿಂದಲೂ ಏರಿಕೆಯಾಗುತ್ತಲೇ ಇದ್ದ ಚಿನ್ನ-ಬೆಳ್ಳಿ ದರ (Gold-Silver Price Today )ಬಹು ಸರಕು ವಿನಿಮಯ ಕೇಂದ್ರದಲ್ಲಿ ಇಂದು ಸ್ವಲ್ಪ ಕಡಿಮೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗಳಿಗೆ 33 ರೂಪಾಯಿ ಕಡಿಮೆಯಾಗಿದ್ದು, 60,112 ರೂಪಾಯಿಗೆ ಆಗಿದೆ. ಹಾಗೇ, ಬೆಳ್ಳಿಯ ಬೆಲೆ (Silver Rate) ಕೂಡ 218 ರೂಪಾಯಿ ಇಳಿಕೆಯಾಗಿದ್ದು, ಒಂದು ಕೆಜಿಗೆ 72,440 ರೂಪಾಯಿ ಇದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಮಾರ್ಕೆಟ್ನಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ (Gold Rate) 134 ರೂ. ಇಳಿಕೆಯಾಗಿದ್ದು, 60512 ರೂ. ಇದೆ. ಬುಧವಾರ ಕ್ಲೋಸಿಂಗ್ ಟ್ರೇಡಿಂಗ್ನಲ್ಲಿ 10 ಗ್ರಾಂ ಚಿನ್ನ 60646 ರೂ. ಇತ್ತು. ಈ ಮಾರ್ಕೆಟ್ನಲ್ಲಿ ಬೆಳ್ಳಿಯ ಬೆಲೆ 63 ರೂಪಾಯಿ ಇಳಿಕೆಯಾಗಿದ್ದು, ಕೆಜಿಗೆ 71,745 ರೂ. ಇದೆ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ ಹೇಗಿದೆ?
22 ಕ್ಯಾರೆಟ್ ಚಿನ್ನ್
1 ಗ್ರಾಂ- 5,615 ರೂ.
8 ಗ್ರಾಂ- 44,920 ರೂ.
10 ಗ್ರಾಂ-56,150 ರೂ
100 ಗ್ರಾಂ- 5,61,500 ರೂ.
24 ಕ್ಯಾರೆಟ್ ಚಿನ್ನ
1 ಗ್ರಾಂ- 6,125 ರೂ.
8 ಗ್ರಾಂ- 49,000 ರೂ.
10 ಗ್ರಾಂ- 61,250 ರೂ.
100 ಗ್ರಾಂ- 6,12,500 ರೂ.
ವಿವಿಧ ಮಹಾನಗರಳಲ್ಲಿ 22 ಕ್ಯಾರೆಟ್ ಚಿನ್ನ- ಬೆಳ್ಳಿ ದರ ಏನಿದೆ?
ದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 56,450 ಮತ್ತು ಬೆಳ್ಳಿ ಕೆಜಿಗೆ 74,600 ರೂಪಾಯಿ. ಮುಂಬಯಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 56,300 ಮತ್ತು ಬೆಳ್ಳಿ ಕೆಜಿಗೆ 74,600 ರೂ., ಕೋಲ್ಕತ್ತ ಚಿನ್ನದ ದರ 56,300 ರೂ. ಮತ್ತು ಬೆಳ್ಳಿ ಕೆಜಿಗೆ Rs 74,600 ರೂ., ಚೆನ್ನೈ ಚಿನ್ನದ ಬೆಲೆ 56,700 ರೂ. ಮತ್ತು ಬೆಳ್ಳಿ ಕೆಜಿಗೆ 78,200 ರೂಪಾಯಿ. ಮಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 56150 ರೂಪಾಯಿ ಆಗಿದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 61,250. ಬೆಳ್ಳಿಯ ಬೆಲೆ ಕೆಜಿಗೆ 78100.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ-ಬೆಳ್ಳಿ ದರ ಕಡಿಮೆಯಾಗಿದೆ. ಯುಎಸ್ನಲ್ಲಿ ಚಿನ್ನದ ದರ 2.41 ಡಾಲರ್ನಷ್ಟು ಕಡಿಮೆಯಾಗಿದ್ದು, ಒಂದು ಔನ್ಸ್ಗೆ 1,980.16 ಹಾಗೂ ಬೆಳ್ಳಿ ಬೆಲೆ 0.10 ಡಾಲರ್ ಕಡಿಮೆಯಾಗಿದ್ದು, ಒಂದು ಔನ್ಸ್ಗೆ 23.65 ಡಾಲರ್ ನಿಗದಿಯಾಗಿದೆ.
ಇದನ್ನೂ ಓದಿ: Gold import : ಚಿನ್ನದ ದರ ಇಳಿಯಲಿದೆಯೇ? ರಿಯಾಯಿತಿ ಸುಂಕದಲ್ಲಿ 140 ಟನ್ ಬಂಗಾರ ಆಮದಿಗೆ ಚಿಂತನೆ
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ. ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳು ಎಂದರೆ ಮದುವೆ ಮತ್ತಿತರ ಸಮಾರಂಭಗಳ ಸೀಸನ್. ಹೀಗಾಗಿ ಚಿನ್ನ-ಬೆಳ್ಳಿ ಖರೀದಿಯೂ ಹೆಚ್ಚುತ್ತದೆ. ಇದೇ ಹೊತ್ತಲ್ಲಿ ದರ ಇಳಿಕೆ ಆಗುತ್ತಿರುವುದು ಗ್ರಾಹಕರಿಗೆ ಅನುಕೂಲವಾಗುತ್ತಿದೆ.