Gold rate : ಚಿನ್ನದ ಬೆಲೆ 10 ಗ್ರಾಮ್‌ಗೆ 60,000 ರೂ. ದರ ಇನ್ನೂ ಜಾಸ್ತಿ ಆಗುತ್ತಾ? - Vistara News

ಚಿನ್ನದ ದರ

Gold rate : ಚಿನ್ನದ ಬೆಲೆ 10 ಗ್ರಾಮ್‌ಗೆ 60,000 ರೂ. ದರ ಇನ್ನೂ ಜಾಸ್ತಿ ಆಗುತ್ತಾ?

ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯ ನಡುವೆಯೇ ಬಂಗಾರದ ಮೇಲಿನ ಹೂಡಿಕೆಯೂ ಹೆಚ್ಚುತ್ತಿದೆ. ಜತೆಗೆ ಅದರ ದರವೂ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಹಾಗಾದರೆ ಮತ್ತಷ್ಟು ಏರಿಕೆಯಾಗಲಿದೆಯೇ? (Gold rate)
ಹಣಕಾಸು ತಜ್ಞರು ಏನೆನ್ನುತ್ತಾರೆ?

VISTARANEWS.COM


on

gold rate gold price increased by 110 rupees
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Gold Rate Today: ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,765ಕ್ಕೆ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,380 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,040 ಆಗಿದೆ.

VISTARANEWS.COM


on

gold rate today 18
Koo

ಬೆಂಗಳೂರು: ಗುರುವಾರ ರಾಜ್ಯದಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕ್ರಮವಾಗಿ ₹30 ಮತ್ತು ₹33 ಇಳಿಕೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ದರ ಏರುತ್ತಲೇ ಇದೆ. ಮಂಗಳವಾರ 22 ಕ್ಯಾರಟ್‌ ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ (gold price today) ಕ್ರಮವಾಗಿ ₹90 ಮತ್ತು ₹98 ಹೆಚ್ಚಳವಾಗಿತ್ತು.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,765ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,120 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,650 ಮತ್ತು ₹6,76,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,380 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,040 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹73,800 ಮತ್ತು ₹7,38,000 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹85.75, ಎಂಟು ಗ್ರಾಂ ₹686 ಮತ್ತು 10 ಗ್ರಾಂ ₹857.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,575 ಮತ್ತು 1 ಕಿಲೋಗ್ರಾಂಗೆ ₹85,750 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,80073,950
ಮುಂಬಯಿ67,650 73,800
ಬೆಂಗಳೂರು67,650 73,800
ಚೆನ್ನೈ68,35074,560

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

gold purchase

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Rate Today: ₹74,130 ತಲುಪಿ ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನದ ಬೆಲೆ; ಇಂದಿನ ದರ ಹೀಗಿದೆ

Continue Reading

ಚಿನ್ನದ ದರ

Gold Rate Today: ₹74,130 ತಲುಪಿ ಯಥಾಸ್ಥಿತಿ ಕಾಪಾಡಿಕೊಂಡ ಚಿನ್ನದ ಬೆಲೆ; ಇಂದಿನ ದರ ಹೀಗಿದೆ

ಶ್ರೀರಾಮ ನವಮಿಯ ದಿನವಾದ ಇಂದು ಚಿನ್ನದ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗಿಲ್ಲ. ಆದರೆ ನಿನ್ನೆಯೇ ಬಂಗಾರದ ದರ (Gold Rate Today) ದಾಖಲೆ ಮಟ್ಟವನ್ನು ಮುಟ್ಟಿದೆ. ಇಂದಿನ ದರ ಗಮನಿಸಿ.

VISTARANEWS.COM


on

gold rate today 34
Koo

ಬೆಂಗಳೂರು: ರಾಜ್ಯದಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕಳೆದ ಒಂದು ತಿಂಗಳಿನಿಂದ ಏರುತ್ತಲೇ ಇದೆ. ಬುಧವಾರ ಬಂಗಾರದ ದರದಲ್ಲಿ ನಿನ್ನೆಗಿಂತ ಯಾವುದೇ ವ್ಯತ್ಯಾಸ ಆಗಿಲ್ಲ. ಆದರೆ ಮಂಗಳವಾರ 22 ಕ್ಯಾರಟ್‌ ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ (gold price today) ಕ್ರಮವಾಗಿ ₹90 ಮತ್ತು ₹98 ಹೆಚ್ಚಳವಾಗಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,795ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,360 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,950 ಮತ್ತು ₹6,79,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,413 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,304 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹74,130 ಮತ್ತು ₹7,41,300 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹84.65, ಎಂಟು ಗ್ರಾಂ ₹677.20 ಮತ್ತು 10 ಗ್ರಾಂ ₹846.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,465 ಮತ್ತು 1 ಕಿಲೋಗ್ರಾಂಗೆ ₹84,650 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ68,10074,280
ಮುಂಬಯಿ67,95074,130
ಬೆಂಗಳೂರು67,95074,130
ಚೆನ್ನೈ68,70074,950

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

Continue Reading

ಚಿನ್ನದ ದರ

Gold Rate Today: ಏರಿಕೆಯಲ್ಲಿ ದಾಖಲೆ ಬರೆಯುತ್ತಲೇ ಇದೆ ಚಿನ್ನದ ದರ! ಇಂದಿನ ಬೆಲೆ ₹74,130 !

Gold Rate Today: ಚಿನ್ನದ ಬೆಲೆ ಈ ತಿಂಗಳಲ್ಲಿ ತೀವ್ರವಾಗಿ ಏರಿದೆ. ಮಂಗಳವಾರ ಮತ್ತೆ 22 ಕ್ಯಾರಟ್‌ ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ (gold price today) ಕ್ರಮವಾಗಿ ₹90 ಮತ್ತು ₹98 ಹೆಚ್ಚಳವಾಗಿದೆ.

VISTARANEWS.COM


on

gold rate today tapasi
Koo

ಬೆಂಗಳೂರು: ರಾಜ್ಯದಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಕಳೆದ ಒಂದು ತಿಂಗಳಿನಿಂದ ಏರುತ್ತಲೇ ಇದೆ. ಮಂಗಳವಾರ 22 ಕ್ಯಾರಟ್‌ ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ (gold price today) ಕ್ರಮವಾಗಿ ₹90 ಮತ್ತು ₹98 ಹೆಚ್ಚಳವಾಗಿದೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,795ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹54,360 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹67,950 ಮತ್ತು ₹6,79,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,413 ಆಗಿದ್ದರೆ, ಎಂಟು ಗ್ರಾಂ ಬೆಲೆ ₹59,304 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹74,130 ಮತ್ತು ₹7,41,300 ವೆಚ್ಚವಾಗಲಿದೆ.

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹84.65, ಎಂಟು ಗ್ರಾಂ ₹677.20 ಮತ್ತು 10 ಗ್ರಾಂ ₹846.50ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹8,465 ಮತ್ತು 1 ಕಿಲೋಗ್ರಾಂಗೆ ₹84,650 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ68,10074,280
ಮುಂಬಯಿ67,950 74,130
ಬೆಂಗಳೂರು67,950 74,130
ಚೆನ್ನೈ68,70074,950

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗಿಲ್ಲ ಬೆಲೆ ಏರಿಕೆ ಬಿಸಿ; ಇಂದಿನ ದರ ಇಷ್ಟು

Continue Reading

ವಾಣಿಜ್ಯ

Gold price: 2000ರಲ್ಲಿ 4,400 ರೂ, 2024ರಲ್ಲಿ 71,414 ರೂ! ಚಿನ್ನ ದರ ಏರಿಕೆ ಹಾದಿ ಹೇಗಿದೆ ನೋಡಿ!

Gold price: ಭಾರತದಲ್ಲಿ ಚಿನ್ನದ ದರವು 2000ರಿಂದ ಏರುತ್ತಲೇ ಇದೆ. ಚಿನ್ನದ ದರ ಹೀಗೆ ಏರಿಕೆಯಾಗಲು ಹಲವಾರು ಕಾರಣಗಳು ಇವೆ. ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುದು ಗೊತ್ತೇ? ಈ ಲೇಖನ ಓದಿ. ಪ್ರತಿ ವರ್ಷ ಏರುತ್ತಲೇ ಹೋಗಿರುವ ಚಿನ್ನದ ದರ ಗ್ರಾಫ್‌ ಇಲ್ಲಿದೆ.

VISTARANEWS.COM


on

By

Gold price
Koo

ಬೆಂಗಳೂರು: ಜಾಗತಿಕವಾಗಿ ಚಿನ್ನಕ್ಕೆ (gold) ಭಾರತದಲ್ಲಿ (india) ಅತೀ ಹೆಚ್ಚು ಗ್ರಾಹಕರಿದ್ದಾರೆ. ಹೀಗಾಗಿ ಚಿನ್ನದ ಮೇಲಿನ ಹೂಡಿಕೆಯನ್ನು (investment) ಇಲ್ಲಿ ಸುರಕ್ಷಿತ ಎಂದೇ ಪರಿಗಣಿಸಲಾಗಿದೆ. ಹೀಗಾಗಿ ವಿಶ್ವದಲ್ಲೇ ಭಾರತವು ಎರಡನೇ ಅತಿದೊಡ್ಡ ಚಿನ್ನದ ಆಮದುದಾರ (import) ರಾಷ್ಟ್ರವಾಗಿದೆ. ಚಿನ್ನದ ದರದಲ್ಲಿ (Gold price) ಏರಿಳಿತವಾದರೂ ಚಿನ್ನದ ಮೇಲಿನ ಹೂಡಿಕೆಯ ಆಕರ್ಷಣೆಯು ಭಾರತದಲ್ಲಿ ಸ್ಥಿರವಾಗಿ ಉಳಿದಿದೆ.

ಕಳೆದ ಸುಮಾರು ಹತ್ತು ವರ್ಷಗಳಿಂದ ಭಾರತದಲ್ಲಿ ಚಿನ್ನದ ದರದ ಭಾರಿ ಹೆಚ್ಚಳವಾಗುತ್ತಿದೆ. ಚಿನ್ನದ ದರವು ಆರ್ಥಿಕ, ಭೌಗೋಳಿಕ ರಾಜಕೀಯ ಮತ್ತು ಮಾರುಕಟ್ಟೆಯ ಕೆಲವೊಂದು ಅಂಶಗಳಿಂದ ಪ್ರಭಾವಿತವಾಗಿದೆ ಎಂಬುದು ಇಲ್ಲಿ ಗಮನಾರ್ಹ ಸಂಗತಿ.

ಭಾರತದಲ್ಲಿ ಚಿನ್ನದ ದರದ ಇತಿಹಾಸವನ್ನು ಅವಲೋಕಿಸಿದರೆ ಸಣ್ಣ ಪ್ರಮಾಣದ ಕುಸಿತವನ್ನು ಹೊರತುಪಡಿಸಿ ಸ್ಥಿರವಾಗಿ ಹೆಚ್ಚಾಗುತ್ತಲೇ ಸಾಗಿದೆ. ಆದರೆ ಕಳೆದ ಒಂದು ದಶಕದಿಂದ ಚಿನ್ನದ ಬೆಲೆ ಭಾರಿ ಏರಿಕೆಯಾಗುತ್ತಲೇ ಇರುವುದು ಅಂಕಿ ಅಂಶಗಳಿಂದ ತಿಳಿಯುತ್ತದೆ.

ಇದನ್ನೂ ಓದಿ: Gold Price Explainer: ಚಿನ್ನದ ದರ ಇಷ್ಟೊಂದು ಏರಲು ಏನು ಕಾರಣ? ಬಂಗಾರದ ಮೇಲೆ ಹೂಡಿಕೆಗಿದು ಸಕಾಲವೇ?

2000ರಿಂದ 2024ರ ಅವಧಿಯಲ್ಲಿ ಚಿನ್ನದ ದರ ಹೇಗೆ ಏರಿದೆ ನೋಡಿ:

ಕಳೆದ ಒಂದು ದಶಕದಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, 2000 ರಿಂದ 2024ರವರೆಗೆ ಸರಾಸರಿ ದರ ಇಂತಿದೆ:

– 2000ರಲ್ಲಿ 4,400 ರೂ.

  • – 2001ರಲ್ಲಿ 4,300 ರೂ.
  • – 2002ರಲ್ಲಿ 4,990 ರೂ.
  • – 2003ರಲ್ಲಿ 5,600 ರೂ.
  • – 2004ರಲ್ಲಿ 6,307 ರೂ.
  • – 2005ರಲ್ಲಿ 7,638 ರೂ.
  • – 2006ರಲ್ಲಿ 9,265 ರೂ.
  • – 2007ರಲ್ಲಿ 10,598 ರೂ.
  • – 2008ರಲ್ಲಿ 13,630 ರೂ.
  • – 2009ರಲ್ಲಿ 16,686 ರೂ.
  • – 2010ರಲ್ಲಿ 20,728 ರೂ.
  • – 2011ರಲ್ಲಿ 27,329 ರೂ.
  • – 2012ರಲ್ಲಿ 30,859 ರೂ.
  • – 2013ರಲ್ಲಿ 28,422 ರೂ.
  • – 2014ರಲ್ಲಿ 26,703 ರೂ.
  • – 2015ರಲ್ಲಿ 24,931 ರೂ.
  • – 2016ರಲ್ಲಿ 27,445 ರೂ.
  • – 2017ರಲ್ಲಿ 29,156 ರೂ.
  • – 2018ರಲ್ಲಿ 31,391 ರೂ.
  • – 2019ರಲ್ಲಿ 39,108 ರೂ.
  • – 2020ರಲ್ಲಿ 50,151 ರೂ.
  • – 2021ರಲ್ಲಿ 48,099 ರೂ.
  • – 2022ರಲ್ಲಿ 55,017 ರೂ.
  • – 2023ರಲ್ಲಿ 63,203 ರೂ.
  • – 2024ರ ಏಪ್ರಿಲ್‌ನಲ್ಲಿ
  • 71,414 ರೂ.


ಬೆಲೆ ಏರಿಕೆಗೆ ಕಾರಣ ಏನು?

ಚಿನ್ನದ ಬೆಲೆ ಏರಿಕೆಗೆ ಅನೇಕ ಕಾರಣಗಳೂ ಇವೆ. ಮುಖ್ಯವಾಗಿ ಭೌಗೋಳಿಕ, ರಾಜಕೀಯ ಘಟನೆಗಳು ಕಾರಣವಾಗಿರುತ್ತದೆ. ಜೊತೆಗೆ ಇನ್ನು ಹಲವು ಅಂಶಗಳಿಂದಾಗಿ ಚಿನ್ನದ ಬೆಲೆ ಏರಿಕೆಯಾಗುತ್ತದೆ.

ಪೂರೈಕೆ ಮತ್ತು ಬೇಡಿಕೆ

ಎಲ್ಲ ಸರಕುಗಳಂತೆ ಚಿನ್ನದ ದರಗಳು ಪೂರೈಕೆ ಮತ್ತು ಬೇಡಿಕೆಯಿಂದ ಪ್ರಭಾವಿತವಾಗಿರುತ್ತದೆ. ಗಣಿಗಾರಿಕೆ ಉತ್ಪಾದನೆ, ಮರುಬಳಕೆ ದರಗಳು ಮತ್ತು ಕೈಗಾರಿಕಾ ಬೇಡಿಕೆಗಳಲ್ಲಿನ ಬದಲಾವಣೆಗಳು ಮಾರುಕಟ್ಟೆಯಲ್ಲಿ ಚಿನ್ನದ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತದೆ.

ಕೇಂದ್ರೀಯ ಬ್ಯಾಂಕ್ ನೀತಿಗಳು

ಕೇಂದ್ರೀಯ ಬ್ಯಾಂಕುಗಳಲ್ಲಿ ಗಮನಾರ್ಹವಾದ ಚಿನ್ನದ ನಿಕ್ಷೇಪಗಳಿವೆ. ಅಂದರೆ ಅವುಗಳ ಖರೀದಿ ಅಥವಾ ಮಾರಾಟ ಚಟುವಟಿಕೆಗಳು ಬೆಲೆಗಳ ಮೇಲೆ ಪ್ರಭಾವ ಬೀರಬಹುದು. ಬಡ್ಡಿ ದರ, ವಿತ್ತೀಯ ನೀತಿಗಳು ಹೂಡಿಕೆದಾರರನ್ನು ಚಿನ್ನದ ಕಡೆಗೆ ಸೆಳೆಯುತ್ತದೆ.

ಹಣದುಬ್ಬರ ಮತ್ತು ಹಣದುಬ್ಬರ ಇಳಿಕೆ

ಚಿನ್ನವನ್ನು ಹಣದುಬ್ಬರದ ವಿರುದ್ಧ ಹೆಡ್ಜ್ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಕರೆನ್ಸಿ ಅಪಮೌಲ್ಯೀಕರಣದ ಅವಧಿಯಲ್ಲಿ ಚಿನ್ನದ ಮೌಲ್ಯವು ಹೆಚ್ಚಾಗುತ್ತದೆ. ಇದಕ್ಕೆ ವಿರುದ್ಧವಾಗಿ ಹಣದುಬ್ಬರ ಇಳಿಕೆ ಅವಧಿಯಲ್ಲಿ ಚಿನ್ನವು ತನ್ನ ಆಕರ್ಷಣೆಯನ್ನು ಕಳೆದುಕೊಳ್ಳಬಹುದು. ಹೂಡಿಕೆದಾರರು ಹೆಚ್ಚು ಸ್ಥಿರವಾದ ಆದಾಯದೊಂದಿಗೆ ಸ್ವತ್ತುಗಳನ್ನು ಹುಡುಕುತ್ತಾರೆ.


ಕರೆನ್ಸಿ ಸಾಮರ್ಥ್ಯ

ಚಿನ್ನದ ಬೆಲೆ ಯುಎಸ್ ಡಾಲರ್‌ಗಳ ಮೇಲಿರುತ್ತದೆ. ಡಾಲರ್‌ಗೆ ಸಂಬಂಧಿಸಿ ಪ್ರಮುಖ ಕರೆನ್ಸಿಗಳ ಮೌಲ್ಯದಲ್ಲಿನ ಏರಿಳಿತಗಳು ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ದುರ್ಬಲ ಡಾಲರ್ ಸಾಮಾನ್ಯವಾಗಿ ಚಿನ್ನದ ಬೆಲೆಗಳನ್ನು ಹೆಚ್ಚಿಸುತ್ತದೆ, ಡಾಲರ್ ಮೌಲ್ಯ ಹೆಚ್ಚಳವು ಹೂಡಿಕೆದಾರರಿಗೆ ಚಿನ್ನವನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

ಭೌಗೋಳಿಕ, ರಾಜಕೀಯ ಉದ್ವಿಗ್ನತೆಗಳು

ರಾಜಕೀಯ ಅಸ್ಥಿರತೆ, ಸಂಘರ್ಷಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಬೇಡಿಕೆಯನ್ನು ಹೆಚ್ಚಿಸಬಹುದು. ಜಾಗತಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಯ ಸಮಯದಲ್ಲಿ ಹೂಡಿಕೆದಾರರನ್ನು ಚಿನ್ನವು ಸೆಳೆಯುತ್ತದೆ.

ಬಡ್ಡಿ ದರಗಳು

ಚಿನ್ನ ಇದ್ದರೆ ಅದೊಂದು ಬಹು ದೊಡ್ಡ ಆಸ್ತಿ. ಬಾಂಡ್‌ ಮತ್ತು ಉಳಿತಾಯ ಖಾತೆಗಳಂತಹ ಬಡ್ಡಿ ನೀಡುವ ಹೂಡಿಕೆಗಳೊಂದಿಗೆ ಚಿನ್ನ ಸ್ಪರ್ಧಿಸುತ್ತದೆ. ಬಡ್ಡಿದರಗಳಲ್ಲಿನ ಬದಲಾವಣೆಗಳು ಹೂಡಿಕೆದಾರರ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಮಾರುಕಟ್ಟೆಯ ಚಟುವಟಿಕೆ

ಹೂಡಿಕೆದಾರರ ಭಾವನೆ ಮತ್ತು ಊಹಾತ್ಮಕ ವ್ಯಾಪಾರ ಚಟುವಟಿಕೆಗಳು ಚಿನ್ನದ ಬೆಲೆಗಳ ಮೇಲೆ ಗಮನಾರ್ಹವಾದ ಅಲ್ಪಾವಧಿಯ ಪ್ರಭಾವವನ್ನು ಬೀರಬಹುದು.

ತಾಂತ್ರಿಕ ಪ್ರಗತಿಗಳು

ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನದಲ್ಲಿ ಕೆಲವು ಕೈಗಾರಿಕೆಗಳಿಗೆ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯವಿದೆ. ಕೈಗಾರಿಕೆಗಳು ಸಾಮಾನ್ಯವಾಗಿ ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮತ್ತು ಆಭರಣದ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ.

Continue Reading
Advertisement
Steet Food
ಆಹಾರ/ಅಡುಗೆ5 hours ago

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

IPL 2024
ಪ್ರಮುಖ ಸುದ್ದಿ5 hours ago

IPL 2024 : ಪಂಜಾಬ್​ ತಂಡಕ್ಕೆ ವಿರೋಚಿತ 9 ರನ್ ಸೋಲು, ಜಯದ ಹಳಿಗೆ ಮರಳಿದ ಮುಂಬೈ

Physical Abuse
ದೇಶ5 hours ago

Physical Abuse : ಸ್ಪೇನ್​ನ ಮಹಿಳೆ ಮೇಲೆ ಜಾರ್ಖಂಡ್​ನಲ್ಲಿ ಗ್ಯಾಂಗ್​ ರೇಪ್​; ತಿಂಗಳ ಬಳಿಕ ಪ್ರಕರಣ ಬಯಲು

Amanatullah Khan
ದೇಶ5 hours ago

Amanatullah Khan: ಆಪ್‌ಗೆ ಮತ್ತಷ್ಟು ಸಂಕಷ್ಟ; ಶಾಸಕ ಅಮಾನತುಲ್ಲಾ ಖಾನ್ ಅರೆಸ್ಟ್‌

Moral policing
ಪ್ರಮುಖ ಸುದ್ದಿ6 hours ago

Moral policing : ನೈತಿಕ ಪೊಲೀಸ್​ಗಿರಿ; ಮುಸ್ಲಿಮರ ಗುಂಪಿನಿಂದ ಹಿಂದೂ ಯುವಕನ ಮೇಲೆ ಹಲ್ಲೆ

Rishab Shetty
ಸಿನಿಮಾ6 hours ago

Rishab Shetty: ರಿಷಬ್‌ ಮೀಟ್ಸ್‌ ಮೋಹನ್‌ಲಾಲ್‌; ʼಕಾಂತಾರʼ ಪ್ರೀಕ್ವೆಲ್​ನಲ್ಲಿ ಅಭಿನಯಿಸುತ್ತಾರಾ ಮಾಲಿವುಡ್‌ ಸೂಪರ್‌ ಸ್ಟಾರ್‌?

lok Sabha Election
ಪ್ರಮುಖ ಸುದ್ದಿ6 hours ago

Lok Sabha Election : ಕಾಂಗ್ರೆಸ್​​ಗೆ ಹಿನ್ನಡೆಯಾದರೆ ಸಿದ್ದರಾಮಯ್ಯ ಸ್ಥಾನಕ್ಕೆಕಂಟಕ​​​; ಚರ್ಚೆ ಹುಟ್ಟು ಹಾಕಿದ ಬೈರತಿ ಸುರೇಶ್​ ಹೇಳಿಕೆ

Hubli Murder Case
ಪ್ರಮುಖ ಸುದ್ದಿ7 hours ago

Hubli murder case : ನೇಹಾಳನ್ನು ಕೊಲ್ಲಲೆಂದೇ ಕಾಲೇಜಿಗೆ ಸಜ್ಜಾಗಿ ಬಂದಿದ್ದ ಶಿಕ್ಷಕರ ಪುತ್ರ ಫಯಾಜ್!

congress workers meeting in kudligi
ವಿಜಯನಗರ7 hours ago

Lok Sabha Election 2024: ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಗೆಲ್ಲಿಸಲು ಸಂತೋಷ್‌ ಲಾಡ್‌ ಮನವಿ

Indian Railways
ದೇಶ7 hours ago

Indian Railways: ಹಿರಿಯ ನಾಗರಿಕ ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್‌; ಲೋವರ್ ಬರ್ತ್ ಕಾಯ್ದಿರಿಸುವಿಕೆಗೆ ಹೊಸ ನಿಯಮ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ7 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ7 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ1 week ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌