Site icon Vistara News

Gold Bond Scheme | ಪ್ರತಿ ಗ್ರಾಂಗೆ 5,197 ರೂ. ನಿಗದಿಪಡಿಸಿದ ಕೇಂದ್ರ, ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸಿಹಿ ಸುದ್ದಿ

Gold Bond Scheme

ನವ ದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬಗಳ ವೇಳೆ ಚಿನ್ನದ ಮೇಲೆ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ಸರಿಯಾಗಿಯೇ ಇದೆ. ಅದರಲ್ಲೂ, ಕೇಂದ್ರ ಸರಕಾರವು ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ (Sovereign Gold Bond Scheme 2022-23 -Series II) ಹೊಸ ಆವೃತ್ತಿ ಘೋಷಿಸಿದ್ದು, ಪ್ರತಿ ಗ್ರಾಂಗೆ 5,197 ರೂ. ನಿಗದಿಪಡಿಸಿದೆ. ಹಾಗಾಗಿ, ಈಗ ಚಿನ್ನದ ಮೇಲೆ ಹೂಡಿಕೆ ಮಾಡಲು ಸಕಾಲ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಸಾಲಿನಲ್ಲಿ ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ ಅನ್ವಯ ಪ್ರತಿ ಗ್ರಾಂಗೆ ನಿಗದಿಪಡಿಸಿದ್ದ ಹಣಕ್ಕಿಂತ ಈ ಬಾರಿ ೧೦೬ ರೂ. ಏರಿಕೆ ಮಾಡಲಾಗಿದೆ. ಕಳೆದ ಬಾರಿ ೫,೦೯೧ ರೂ. ಇತ್ತು. ಆಗಸ್ಟ್ ೨೨ರಿಂದ ೨೬ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಹಾಗೆಯೇ, ಆನ್‌ಲೈನ್‌ ಮೂಲಕ ಸಬ್‌ಸ್ಕ್ರೈಬ್‌ ಮಾಡಿಕೊಳ್ಳುವವರಿಗೆ ೫೦ ರೂ. ರಿಯಾಯಿತಿಯನ್ನೂ ಘೋಷಿಸಲಾಗಿದೆ. ಒಂದು ಗ್ರಾಂಗೆ ೫,೧೪೭ ರೂ. ಪಾವತಿಸಿ ಬಾಂಡ್‌ ಖರೀದಿ ಮಾಡಬಹುದಾಗಿದೆ.

ಗೋಲ್ಡ್‌ ಬಾಂಡ್‌ ಸ್ಕೀಮ್‌ನಲ್ಲಿ ಕನಿಷ್ಠ ಹೂಡಿಕೆಯು ಒಂದು ಗ್ರಾಂ ಆಗಿದ್ದು, ಗರಿಷ್ಠ ೫೦೦ ಗ್ರಾಂವರೆಗೆ ಹೂಡಿಕೆ ಮಾಡಬಹುದಾಗಿದೆ. ಇದು ಚಿನ್ನದ ಮೇಲೆ ಸಾಲ ಪಡೆಯಲು ನೆರವಾಗುತ್ತದೆ.

ಇದನ್ನೂ ಓದಿ | Good News | ಇಳಿಯಲಿದೆ ಚಿನ್ನದ ದರ! ಡಾಲರ್‌, ಅಮೆರಿಕದ ಎಕಾನಮಿ, ತೈಲ ದರ ನಿರ್ಣಾಯಕ

Exit mobile version