ಬಿಹಾರ್: ದೇಶದ ಅತ್ಯಂತ ಬೃಹತ್ ಚಿನ್ನದ ಗಣಿಯನ್ನು ಅನ್ವೇಷಣೆ ಮಾಡಲು ಬಿಹಾರ ಸರ್ಕಾರ ಅನುಮತಿ ನೀಡಿದೆ. ಭಾರತದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಜಮ್ಮುಯ್ ಜಿಲ್ಲೆಯಲ್ಲಿ ಸುಮಾರು 222.88 ಲಕ್ಷ ಟನ್‌ನಷ್ಟು ಚಿನ್ನದ ಗಣಿ ಇದೆ ಎಂದು ಹೇಳಲಾಗಿದೆ. ಚಿನ್ನದ ಗಣಿ ಜತೆಗೆ 37.6 ಖನಿಜ ಗಣಿ ಕೂಡ ಇದೆ ಎಂದು ತಿಳಿಸಲಾಗಿದೆ. ಹಾಗಾಗಿ ಅವುಗಳ ಅನ್ವೇಷಣೆಗೆ ಬಿಹಾರ್ ಸರ್ಕಾರ ಅನುಮತಿ ನೀಡಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಬಿಹಾರದಲ್ಲಿ ಚಿನ್ನದ ಗಣಿಯ ಅನ್ವೇಷಣೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು, ಭಾರತದ ಭೂವೈಜ್ಞಾನಿಕ ಸಮೀಕ್ಷೆ ಹಾಗೂ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಈ ಅನ್ವೇಷಣೆಯ ಕಾರ್ಯವನ್ನು ನಡೆಸಲಿದೆ.
ಇದನ್ನೂ ಓದಿ | ಜೈಲಿನಲ್ಲೇ ಕುಳಿತು ದರೋಡೆ ಸಂಚು ರೂಪಿಸಿದರು: 105 ಗ್ರಾಂ ಚಿನ್ನಾಭರಣದ ಜತೆಗೆ ಬಂಧನ
ಈ ತಿಂಗಳಲ್ಲಿ ಬಿಹಾರ ಸರ್ಕಾರ ಚಿನ್ನದ ಗಣಿ ಅನ್ವೇಷಣಾ ಯೋಜನೆಗೆ ಕೇಂದ್ರ ಇಲಾಖೆಯೊಂದಿಗೆ ಒಪ್ಪಂದಕ್ಕೆ ಬರಲಿದೆ. ಜಮೈ ಜಿಲ್ಲೆಯ ಕರ್ಮತಿಯಾ, ಝಾಝಾ ಹಾಗೂ ಸೊನೊ ಪ್ರದೇಶದಲ್ಲಿ ಚಿನ್ನದ ಗಣಿ ಇರುವ ಮಾಹಿತಿಯನ್ನು , ಭಾರತದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಈ ಮಾಹಿತಯ ಆಧಾರದ ಮೇಲೆ ಗಣಿ ಅನ್ವೇಷಣೆ ಕಾರ್ಯಕ್ಕೆ ಮುಂದಾಗಿದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಹರ್ಜೊಟ್ ಕೌರ್ ಬುಮ್ರಾ ತಿಳಿಸಿದ್ದಾರೆ.
ದೇಶದಲ್ಲಿ ಒಟ್ಟು 654.74 ಟನ್ ಚಿನ್ನದ ನಿಕ್ಷೇಪ ಲಭ್ಯವಿದ್ದು, ಬಿಹಾರದಲ್ಲಿ ಸುಮಾರು 222.885 ಲಕ್ಷ ಟನ್ ಇದೆ ಎಂದು ತಿಳಿದುಬಂದಿದೆ. ಇದರ ಪ್ರಕಾರ ದೇಶದ ಚಿನ್ನದಲ್ಲಿ ಸುಮಾರು 44% ಚಿನ್ನ ಬಿಹಾರದಲ್ಲೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರಾತ್ರೋರಾತ್ರಿ 500ಟನ್ ಸ್ಟೀಲ್‌ಬ್ರಿಡ್ಜ್ ದರೋಡೆ