Site icon Vistara News

Gold Rate today: ₹ 100 ಇಳಿಕೆ ಕಂಡ ಬಂಗಾರದ ಬೆಲೆ; 10 ಗ್ರಾಂಗೆ ಎಷ್ಟು?

gold weared women

ಬೆಂಗಳೂರು: 22 ಹಾಗೂ 24 ಕ್ಯಾರೆಟ್‌ ಚಿನ್ನದ ದರಗಳು (Gold Rate today) ಭಾರತದ ಮಾರುಕಟ್ಟೆಯಲ್ಲಿ ನಿನ್ನೆಗಿಂತ ಗ್ರಾಂಗೆ 10 ರೂ. ಇಳಿಕೆಯಾಗಿದೆ. 22 ಕ್ಯಾರೆಟ್‌ ಚಿನ್ನದ ದರ ಒಂದು ಗ್ರಾಂಗೆ ₹ 5,505, 8 ಗ್ರಾಂಗೆ ₹ 44,040, 10 ಗ್ರಾಂಗೆ ₹ 55,050 ಹಾಗೂ 100 ಗ್ರಾಂಗೆ ₹ 5,50,500ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯೂ ಅಷ್ಟೇ ಇಳಿದಿದೆ. 1 ಗ್ರಾಂಗೆ ₹ 6,006, 8 ಗ್ರಾಂಗೆ ₹ 48,048, 10 ಗ್ರಾಂಗೆ ₹ 60,060 ಹಾಗೂ 100 ಗ್ರಾಂಗೆ ₹ 6,00,600 ಬೆಲೆಯಿದೆ.

ಇದೇ ವೇಳೆ ಬೆಳ್ಳಿ ಬೆಲೆ ಹಿಂದಿನ ದಿನಕ್ಕಿಂತ ಒಂದು ರೂ. ಇಳಿಕೆಯಾಗಿದೆ. 1 ಗ್ರಾಂಗೆ ₹ 73.50, 8 ಗ್ರಾಂಗೆ ₹ 588, 10 ಗ್ರಾಂಗೆ ₹ 735, 100 ಗ್ರಾಂಗೆ ₹ 7,350 ಹಾಗೂ 1 ಕೆಜಿಗೆ ₹ 73,500 ರೂ.ಗಳಿವೆ.

ನಗರ 22 ಕ್ಯಾರಟ್ 24 ಕ್ಯಾರಟ್
ದಿಲ್ಲಿ 55,200 60,210
ಮುಂಬಯಿ 55,05060,060
ಬೆಂಗಳೂರು 55,05060,060
ಹೈದರಾಬಾದ್ 55,05060,060

ಬಂಗಾರದ ದರದ ಮೇಲೆ ಪ್ರಭಾವ ಬೀರುವ ಅಂಶಗಳು: ಬೇಡಿಕೆ ಮತ್ತು ಪೂರೈಕೆಯು ಬಂಗಾರದ ದರವನ್ನು ನಿರ್ಧರಿಸುತ್ತದೆ. ಬೇಡಿಕೆ ಏರಿಕೆಯಾದಾಗ ದರ ಕೂಡ ವೃದ್ಧಿಸುತ್ತದೆ. ಜಾಗತಿಕ ಆರ್ಥಿಕ ಪರಿಸ್ಥಿತಿ ಕೂಡ ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇದ್ದಾಗ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ. ಆಗ ಅದರ ದರ ಏರುತ್ತದೆ. ರಾಜಕೀಯ ಅಸ್ಥಿರತೆ ಅಥವಾ ಸಂಘರ್ಷ ಇದ್ದಾಗ ಕೂಡ ಬಂಗಾರದ ದರ ವ್ಯತ್ಯಾಸವಾದೀತು. ಭಾರತ ಜಗತ್ತಿನ ಪ್ರಮುಖ ಬಂಗಾರ ಆಮದು ರಾಷ್ಟ್ರಗಳಲ್ಲೊಂದು.

ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನದ ಗಟ್ಟಿ ಮತ್ತು ನಾಣ್ಯಗಳನ್ನು ತಯಾರಿಸುವ ದೇಶ. ಭಾರತೀಯರ ಮನೆಗಳಲ್ಲಿ 25,000 ಟನ್‌ ಬಂಗಾರ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಈ ಬಂಗಾರದಲ್ಲಿ ಕೆಲ ಭಾಗವನ್ನು ಆರ್ಥಿಕತೆಗೆ ತರಲು ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಗೋಲ್ಡ್ಮಾನಿಟೈಸೇಶನ್ಸ್ಕೀಮ್ ಇದೆ. ಚಿನ್ನದ ಗಟ್ಟಿ ಮತ್ತು ಕಾಯಿನ್ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2007ರಲ್ಲಿ ಗೋಲ್ಡ್ ಇಟಿಎಫ್ ಅನ್ನು ಬಿಡುಗಡೆಗೊಳಿಸಲಾಯಿತು. ಕೋವಿಡ್ಸಮಯದಲ್ಲಿ ಚಿನ್ನದ ಬೇಡಿಕೆ ಕುಸಿದಿತ್ತು. ಆದರೆ 2022ರಲ್ಲಿ ಮತ್ತೆ ಬಂಗಾರದ ವಹಿವಾಟು ಚೇತರಿಸಿದೆ. 2022ರಲ್ಲಿ ಗೋಲ್ಡ್ ಇಟಿಎಫ್‌ನಲ್ಲಿ 38 ಟನ್ ಬಂಗಾರ ಇತ್ತು.

Exit mobile version