ಬೆಂಗಳೂರು: ಶನಿವಾರ ಚಿನ್ನದ ಬೆಲೆ (Gold Rate Today) ಪ್ರತಿ ಗ್ರಾಂಗೆ ₹15 ಇಳಿಕೆಯಾಗಿದೆ. ಗುಡ್‌ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹5,455 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹5,951 ಆಗಿದೆ.
ಬೆಳ್ಳಿ ಬೆಲೆಯಲ್ಲಿ (silver price today) ಯಾವುದೇ ಬದಲಾವಣೆ ಆಗಿಲ್ಲ. ಒಂದು ಗ್ರಾಂ ಬೆಳ್ಳಿಯ ಬೆಲೆ ₹73 ಆಗಿದೆ. ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಲ್ಲಿ ಹತ್ತು ಗ್ರಾಂ ಬೆಳ್ಳಿಯ ಬೆಲೆ ₹730. ಮತ್ತೊಂದೆಡೆ, ಚೆನ್ನೈನಲ್ಲಿ ಬೆಳ್ಳಿಯ ಬೆಲೆ ಹತ್ತು ಗ್ರಾಂಗೆ ₹762 ಇತ್ತು.
ನಗರ | 22 ಕ್ಯಾರಟ್ | 24 ಕ್ಯಾರಟ್ |
ದಿಲ್ಲಿ | 54,550 | 59,510 |
ಮುಂಬಯಿ | 54,650 | 59,620 |
ಬೆಂಗಳೂರು | 54,650 | 59,620 |
ಚೆನ್ನೈ | 54,650 | 59,620 |
ಬಂಗಾರದ ದರದ ಮೇಲೆ ಪ್ರಭಾವ ಬೀರುವ ಅಂಶಗಳು: ಬೇಡಿಕೆ ಮತ್ತು ಪೂರೈಕೆಯು ಬಂಗಾರದ ದರವನ್ನು ನಿರ್ಧರಿಸುತ್ತದೆ. ಬೇಡಿಕೆ ಏರಿಕೆಯಾದಾಗ ದರ ಕೂಡ ವೃದ್ಧಿಸುತ್ತದೆ.
ಜಾಗತಿಕ ಆರ್ಥಿಕ ಪರಿಸ್ಥಿತಿ ಕೂಡ ಬಂಗಾರದ ದರದ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಇದ್ದಾಗ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಮಾಡುತ್ತಾರೆ. ಆಗ ಅದರ ದರ ಏರುತ್ತದೆ. ರಾಜಕೀಯ ಅಸ್ಥಿರತೆ ಅಥವಾ ಸಂಘರ್ಷ ಇದ್ದಾಗ ಕೂಡ ಬಂಗಾರದ ದರ ವ್ಯತ್ಯಾಸವಾದೀತು. ಭಾರತ ಜಗತ್ತಿನ ಪ್ರಮುಖ ಬಂಗಾರ ಆಮದು ರಾಷ್ಟ್ರಗಳಲ್ಲೊಂದು.
ಭಾರತ ವಿಶ್ವದಲ್ಲಿಯೇ ಅತಿ ಹೆಚ್ಚು ಚಿನ್ನದ ಗಟ್ಟಿ ಮತ್ತು ನಾಣ್ಯಗಳನ್ನು ತಯಾರಿಸುವ ದೇಶ. ಭಾರತೀಯರ ಮನೆಗಳಲ್ಲಿ 25,000 ಟನ್ ಬಂಗಾರ ಇರಬಹುದು ಎಂದು ಅಂದಾಜು ಮಾಡಲಾಗಿದೆ. ಆದ್ದರಿಂದ ಈ ಬಂಗಾರದಲ್ಲಿ ಕೆಲ ಭಾಗವನ್ನು ಆರ್ಥಿಕತೆಗೆ ತರಲು ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಇದೆ. ಚಿನ್ನದ ಗಟ್ಟಿ ಮತ್ತು ಕಾಯಿನ್ ಮಾರುಕಟ್ಟೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. 2007ರಲ್ಲಿ ಗೋಲ್ಡ್ ಇಟಿಎಫ್ ಅನ್ನು ಬಿಡುಗಡೆಗೊಳಿಸಲಾಯಿತು.
ಕೋವಿಡ್ ಸಮಯದಲ್ಲಿ ಚಿನ್ನದ ಬೇಡಿಕೆ ಕುಸಿದಿತ್ತು. ಆದರೆ 2022ರಲ್ಲಿ ಮತ್ತೆ ಬಂಗಾರದ ವಹಿವಾಟು ಚೇತರಿಸಿದೆ. 2022ರಲ್ಲಿ ಗೋಲ್ಡ್ ಇಟಿಎಫ್‌ನಲ್ಲಿ 38 ಟನ್ ಬಂಗಾರ ಇತ್ತು. ಗೋಲ್ಡ್ ಮಾನಿಟೈಸೇಶನ್ ಸ್ಕೀಮ್‌ನಲ್ಲಿ ವಾರ್ಷಿಕ 2.25% ಬಡ್ಡಿ ದರ ಸಿಗುತ್ತದೆ. ಲಾಕ್ ಇನ್ ಅವಧಿ 5 ವರ್ಷಗಳು.
ಇದನ್ನೂ ಓದಿ: Gold Rate Today: ಬಂಗಾರದ ದರ ಯಥಾಸ್ಥಿತಿ, ಬೆಳ್ಳಿ ದರವೂ ಬದಲಾವಣೆ ಇಲ್ಲ