Site icon Vistara News

Gold Smuggling: ಜ್ಯಾಕೆಟ್‌, ಲೆಗ್ಗಿನ್ಸ್‌ನಲ್ಲಿ, ಬೆಲ್ಟ್‌ನಲ್ಲಿ 25 ಕೆ.ಜಿ ಚಿನ್ನ; ಆಫ್ಘಾನ್‌ ರಾಜತಾಂತ್ರಿಕ ಅಧಿಕಾರಿ ಕಸ್ಟಮ್ಸ್‌ ಬಲೆಗೆ

Gold smuggling

ಮುಂಬೈ: ಭಾರತದಿಂದ ದುಬೈಗೆ ಕೋಟ್ಯಂತರ ರೂ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣೆ(Gold Smuggling) ಮಾಡುತ್ತಿದ್ದ ಅಫ್ಘಾನಿಸ್ತಾನದ ರಾಜತಾಂತ್ರಿಕ(Afghan diplomat) ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಲೆಗೆ ಬಿದ್ದಿದ್ದಾರೆ. ಅಫ್ಘಾನಿಸ್ತಾನದ(Afghanistan) ಇಸ್ಲಾಮಿಕ್‌ ರಿಪಬ್ಲಿಕ್‌ನ ರಾಜತಾಂತ್ರಿಕ ಅಧಿಕಾರಿ ಜಾಕಿಯಾ ವಾರ್ದಕ್‌ ಅವರು ಬರೋಬ್ಬರಿ 18.6 ಕೋಟಿ ರೂ. ಮೌಲ್ಯದ 25 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಏರ್‌ಪೋರ್ಟ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಏ.25ರಂದು ಈ ಘಟನೆ ನಡೆದಿದ್ದು, ಅಕ್ರಮ ಚಿನ್ನಾಭರಣ ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅನೇಕ ಸಿಬ್ಬಂದಿ ನೇಮಿಸುವ ಮೂಲಕ ಡಿಆರ್‌ಐ ಅಧಿಕಾರಿಗಳು ಕಾರ್ಯಪ್ರವೃತರಾಗಿದ್ದರು. ಜಾಕಿಯಾ ಮತ್ತು ಅವರ ಪುತ್ರ ಸಂಜೆ 5:45 ದುಬೈಗೆ ಪ್ರಯಾಣ ಬೆಳೆಸಲೆಂದು ಏರ್‌ಪೋರ್ಟ್‌ಗೆ ಬಂದಿದ್ದರು. ತಾವು ಯಾವುದೇ ಲಗೇಜ್‌ ತಂದಿಲ್ಲ ಎಂಬುದನ್ನು ತೋರಿಸಿಕೊಳ್ಳಲು ತಾಯಿ ಮಗ ಇಬ್ಬರೂ ಏರ್‌ಪೋರ್ಟ್‌ನ ಹಸಿರು ಚಾನೆಲನ್ನು ಬಳಸಿದ್ದರು ಎನ್ನಲಾಗಿದೆ.

ಜಾಕಿಯಾ ಮತ್ತು ಅವರ ಪುತ್ರನ ಬಳಿ ಇದ್ದ ಐದು ಟ್ರಾಲಿ ಬ್ಯಾಗ್‌ಗಳು, ಒಂದು ಹ್ಯಾಂಡ್‌ ಬ್ಯಾಗ್‌, ಒಂದು ಹ್ಯಾಂಗಿಂಗ್‌ ಬ್ಯಾಗ್‌ ಮತ್ತು ನೆಕ್‌ ಪಿಲ್ಲೋಗಳನ್ನು ತಪಾಸಣೆಗೊಳಪಡಿಸಿದ ಅಧಿಕಾರಿಗಳಿಗೆ ಅವುಗಳಲ್ಲಿ ಯಾವುದೇ ಚಿನ್ನ ಪತ್ತೆಯಾಗಿತ್ತು. ಆಮೇಲೆ ಅವರ ಬಳಿ ಯಾವುದಾದರೂ ಸುಂಕ ವಿಧಿಸಬಹುದಾದ ಅಥವಾ ಚಿನ್ನಾಭರಣ ಹೊಂದಿದ್ದೀರಾ ಎಂದು ಅಧಿಕಾರಿಗಳು ಜಾಕಿಯಾ ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಅನುಮಾನಗೊಂಡ ಅಧಿಕಾರಿಗಳು ಜಾಕಿಯಾ ಮತ್ತು ಅವರ ಪುತ್ರನನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು, ತಪಾಸಣೆಗೊಳಪಡಿಸಿದರು. ಆಗ ಆಕೆ ಧರಿಸಿದ್ದ ಜ್ಯಾಕೆಟ್‌, ಲೆಗ್ಗಿನ್ಸ್‌, ಮೊಣಕಾಲಿಗೆ ಹಾಕುವ ಕ್ಯಾಪ್‌ ಮತ್ತು ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೇಟ್‌ ಪತ್ತೆಯಾಗಿತ್ತು. ಆಕೆಯ ಮಗನನ್ನು ತಪಾಸಣೆಗೊಳಪಡಿಸಿದಾಗ ಯಾವುದೇ ವಸ್ತುಗಳು ಪತ್ತೆ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳು 1962ರ ಕಸ್ಟಮ್ಸ್‌ ಕಾಯ್ದೆ ಅಡಿಯಲ್ಲಿ ಎಲ್ಲಾ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಅದಾಗ್ಯೂ ಆಕೆ ಅಫ್ಘಾನಿಸ್ತಾನದ ರಾಜತಾಂತ್ರಿಕ ಅಧಿಕಾರಿಯಾಗಿರುವ ಕಾರಣ ಅವರನ್ನು ಬಂಧಿಸಿಲ್ಲ.

ಇದನ್ನೂ ಓದಿ:Elvish Yadav: ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ಗೆ ಮತ್ತೆ ಸಂಕಷ್ಟ; ಎಲ್ವಿಶ್‌ ವಿರುದ್ಧ ಇಡಿ ಕೇಸ್‌

ಎರಡು ವಾರಗಳ ಹಿಂದೆ ಮುಂಬೈ ಏರ್‌ಪೋರ್ಟ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ನೂಡಲ್ಸ್ ಪ್ಯಾಕೆಟ್​ಗಳಲ್ಲಿ ಹುದುಗಿಸಿಟ್ಟಿದದ ವಜ್ರಗಳ ಹರಳುಗಳು ಪತ್ತೆಯಾಗಿದ್ದವು. ಅದರ ಮೌಲ್ಯ 6.48 ಕೋಟಿ ರೂಪಾಯಿ ಎಂದು ತಿಳಿದುಬಂದಿದ್ದು, ಅರೋಪಿ ಸಮೇತ ಅಧಿಕಾರಿಗಳು ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯನ್ನು ವಿವರಿಸಿದ ಅಧಿಕಾರಿಯೊಬ್ಬರು ಮುಂಬೈನಿಂದ ಬ್ಯಾಂಕಾಕ್​​ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆಯಲಾಯಿತು. ಈ ವೇಳೆ ಆತನ ಟ್ರಾಲಿ ಬ್ಯಾಗ್​ನಲ್ಲಿ ನೂಡಲ್ಸ್ ಪ್ಯಾಕೆಟ್​ಗಳಿದ್ದವು. ಅದರಲ್ಲಿ ಅಡಗಿಸಿಟ್ಟಿದ್ದ ವಜ್ರಗಳಿದ್ದು ಅವುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂತು ಎಂದು ಹೇಳಿದ್ದಾರೆ. ಅದೇ ರೀತಿ ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಚಿನ್ನದ ಗಟ್ಟಿಗಳು ಮತ್ತು ಕತ್ತರಿಸಿದ ತುಂಡನ್ನು ಸಾಗಿಸುತ್ತಿರುವುದು ಕಂಡುಬಂದಿದೆ. 321 ಗ್ರಾಂ ತೂಕದ ಚಿನ್ನವನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.


Exit mobile version