ನವದೆಹಲಿ: ಭಾರತದ ಯಾವುದೇ ಊರಿಗೆ ಹೋಗಿ, ಒಳ್ಳೆಯದೊಂದು ಬೀದಿ ಸಿಗದಿದ್ದರೂ, ಬೀದಿ ಬದಿಯ ಖ್ಯಾತ ತಿಂಡಿಯಾದ ಪಾನಿ ಪುರಿ ಸಿಗುತ್ತದೆ. ದೇಶದಲ್ಲಿ ಪಾನಿ ಪುರಿ ತಿನ್ನದೆ ಇರುವವರೇ ಇಲ್ಲ ಎನ್ನುವಷ್ಟರಮಟ್ಟಿಗೆ ಇದು ಎಲ್ಲರ ಫೇವರಿಟ್ ತಿನಿಸಾಗಿದೆ. ಅದರಲ್ಲೂ, ದೇಶಾದ್ಯಂತ ವಿವಿಧ ರುಚಿಯ ಪಾನಿ ಪುರಿ ಸಿಗುತ್ತದೆ. ಇದೇ ಕಾರಣಕ್ಕೆ ಜುಲೈ 12ರಂದು ಪಾನಿ ಪುರಿಯ ದಿನವಾದ ಹಿನ್ನೆಲೆಯಲ್ಲಿ ಪಾನಿ ಪುರಿಗೆ ಡೂಡಲ್ (Google Doodle) ಮೂಲಕ ಗೂಗಲ್ ವಿಶೇಷ ಗೌರವ ಸಲ್ಲಿಸಿದೆ.
ಹೌದು, ಭಾರತದ ಪಾನಿ ಪುರಿಯ ಖ್ಯಾತಿ ಪರಿಗೆ ಬೆರಗಾದ ಗೂಗಲ್, ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದೆ. ಅದರಲ್ಲೂ, ಕ್ಯಾಂಡಿ ಕ್ರಶ್ ರೀತಿ ಪಾನಿ ಪುರಿಯ ಗೇಮ್ ರಚಿಸುವ ಮೂಲಕ ಗೌರವ ನೀಡಿದೆ. Google.com ಎಂದು ಟೈಪ್ ಮಾಡಿದರೆ, ಮೊಬೈಲ್ ಅಥವಾ ಕಂಪ್ಯೂಟರ್ ಪರದೆ ಮೇಲೆ ಗೂಗಲ್ ಗೇಮ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಪಾನಿ ಪುರಿ ಗೇಮ್ ಆಡಬಹುದಾಗಿದೆ.
ಪಾನಿ ಪುರಿ ಗೇಮ್ ಹೀಗೆ ಆಡಿ
- WWW.Google.Com ಸರ್ಚ್ ಮಾಡಿ
- ಆಗ ಕಂಪ್ಯೂಟರ್ ಅಥವಾ ಮೊಬೈಲ್ ಮೇಲೆ ಗೇಮ್ ಗೋಚರವಾಗುತ್ತದೆ
- ಬಳಿಕ ಗೇಮ್ ಮೇಲೆ ಕ್ಲಿಕ್ ಮಾಡಿ
- ಆಗ Timed ಹಾಗೂ Relaxed ಎಂಬ ಆಪ್ಶನ್ ಸಿಗುತ್ತವೆ, ಯಾವುದಾದರೂ ಒಂದನ್ನು ಆಯ್ಕೆ ಮಾಡಿ
- ಬಳಿಕ ಪಾನಿ ಪುರಿ ಜೋಡಿಸುತ್ತ ಗೇಮ್ ಆಡಿ
ಇದನ್ನೂ ಓದಿ: P K Rosy: ಮೊದಲ ದಲಿತ ಅಭಿನೇತ್ರಿ ಪಿ.ಕೆ. ರೋಸಿಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
ಪಾನಿ ಪುರಿ ದಿನ ಆಚರಣೆ
ಮಧ್ಯಪ್ರದೇಶದ ಇಂದೋರ್‌ನ ರೆಸ್ಟೋರೆಂಟ್ ಒಂದರಲ್ಲಿ 2015ರ ಜುಲೈ 12ರಂದು ಸುಮಾರು 51 ರುಚಿಗಳ ಪಾನಿ ಪುರಿಗಳನ್ನು ತಯಾರಿಸಲಾಗಿತ್ತು. ಗ್ರಾಹಕರಿಗಾಗಿ ನಡೆದ ಪಾನಿ ಪುರಿ ಮೇಳವು ಖ್ಯಾತಿ ಗಳಿಸಿತು. ಅಲ್ಲದೆ, ಇದು ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೂ ಪಾತ್ರವಾಯಿತು. ಅಂದಿನಿಂದ ಜುಲೈ 12ರಂದು ಪಾನಿ ಪುರಿ ದಿನವನ್ನು ಆಚರಿಸಲಾಗುತ್ತದೆ.