Site icon Vistara News

Jio Games: ಜಿಯೋಗೇಮ್ಸ್‌ನಲ್ಲಿ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್ಸ್‌ ಲಭ್ಯ

ನವದೆಹಲಿ: ದೇಶದ ಮುಂಚೂಣಿ ಗೇಮಿಂಗ್‌ ಫ್ಲಾಟ್‌ಫಾರಂ ಆಗಿರುವ ʼಜಿಯೋಗೇಮ್ಸ್ʼ, ಜಿಯೋಗೇಮ್ಸ್‌ ಆಪ್‌ ಮತ್ತು ಜಿಯೋ ಸೆಟ್‌ಆಫ್‌ ಬಾಕ್ಸ್‌ನಲ್ಲಿ ಗೂಗಲ್‌ ಗೇಮ್‌ಸ್ನ್ಯಾಕ್ಸ್‌ ಅನ್ನು ಸಂಯೋಜಿಸುವ ಮೂಲಕ ತನ್ನ ಗೇಮಿಂಗ್‌ ಪೋರ್ಟ್‌ಫೋಲಿಯೊವನ್ನು (Jio Games) ವಿಸ್ತರಿಸಿಕೊಂಡಿದೆ. ಇದರಿಂದಾಗಿ ಜಿಯೋಗೇಮ್ಸ್ ಬಳಕೆದಾರರು‌ Daily Sudoku, Om Nom Run and Traffic Tom ಸೇರಿದಂತೆ ಜನಪ್ರಿಯವಾದ 8 ಗೇಮ್‌ಗಳನ್ನು ಆಡಬಹುದಾಗಿದೆ.

ʼಗೇಮ್‌ಸ್ನ್ಯಾಕ್ಸ್‌ʼನ ಎಲ್ಲ ಗೇಮ್‌ಗಳೂ ಜಿಯೋಗೇಮ್ಸ್‌ ಬಳಕೆದಾರರಿಗೆ ಉಚಿತವಾಗಿರಲಿವೆ. ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಜಿಯೋಗೇಮ್ಸ್‌ ಆಪ್‌ನ ಹೋಮ್‌ಪೇಜ್‌ನಲ್ಲಿ ಈ ಗೇಮ್‌ಗಳನ್ನು ಸುಲಭವಾಗಿ ಪಡೆಯಬಹುದು. ಜಿಯೋಗೇಮ್ಸ್‌ನ ಮಿನಿ ಆಪ್‌ಗಳಾದ ಮೈಜಿಯೋ ಮತ್ತು ಜಿಯೋಟಿವಿಯಲ್ಲಿಯೂ ಗೂಗಲ್‌ನ ಗೇಮ್‌ಸ್ನ್ಯಾಕ್ಸ್‌ ಗೇಮ್‌ಗಳು ಲಭ್ಯವಿವೆ.

Traffic Tom

ಗೂಗಲ್‌ನ ʼಗೇಮ್‌ಸ್ನ್ಯಾಕ್ಸ್‌ ಗೇಮ್‌ʼ ಗಳು ಕಡಿಮೆ ಗಾತ್ರದ್ದಾಗಿರುವ ಜತೆಗೆ ಬೇಗನೆ ತೆರೆದುಕೊಳ್ಳುತ್ತವೆ. ಕಡಿಮೆ ಮೆಮೊರಿ ಇರುವ ಸಾಧನಗಳಲ್ಲಿ, ವಿವಿಧ ನೆಟ್‌ವರ್ಕ್‌ ಸ್ಥಿತಿಯಲ್ಲಿಯೂ HTML5 ನ ಈ ಗೇಮ್‌ಗಳನ್ನು ಆಡಬಹುದಾಗಿದೆ.

ಇದನ್ನೂ ಓದಿ: Pralhad Joshi: ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ: ಪ್ರಲ್ಹಾದ್‌ ಜೋಶಿ

ಭಾರತದಲ್ಲಿ ಲಕ್ಷಗಟ್ಟಲೆ ಬಳಕೆದಾರರ ಗೇಮಿಂಗ್‌ ಅನುಭವವನ್ನು ಸುಧಾರಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ ಎಂದು ಕಂಪನಿಯು ತಿಳಿಸಿದೆ. ಇದರಿಂದಾಗಿ ಸಾಮಾನ್ಯವಾದ ಗೇಮ್‌ಗಳನ್ನು ಗ್ರಾಹಕರು ಸುಲಭವಾಗಿ ಆಡಬಹುದು ಎಂದು ತಿಳಿಸಿದೆ.

Exit mobile version