Site icon Vistara News

Google Pay: ಇಲ್ಲಿದೆ ಬ್ಯಾಡ್‌ನ್ಯೂಸ್; ಈ ದಿನದಿಂದ ಗೂಗಲ್‌ ಪೇ ಆ್ಯಪ್ ಸ್ಥಗಿತ!

Google Pay

Google Pay app will no longer be available in US; Continues operations in India

ನವದೆಹಲಿ: ದೇಶಾದ್ಯಂತ ಕೆಲವೇ ದಿನಗಳಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ (Paytm Payments Bank) ಸ್ಥಗಿತವಾಗಲಿದೆ. ಫಾಸ್ಟ್‌ಟ್ಯಾಗ್‌ ಹೊಂದಿರುವವರು ಈಗ ಪೇಟಿಎಂ ಬದಲು ಬೇರೆ ಆ್ಯಪ್ ಮೊರೆ ಹೋಗಬೇಕಾಗಿದೆ. ಇದರ ಬೆನ್ನಲ್ಲೇ, ಗೂಗಲ್‌ ಪೇ ಆ್ಯಪ್ ಕೂಡ (Google Pay) ಸ್ಥಗಿತವಾಗಲಿದೆ. ಆದರೆ, ಗೂಗಲ್‌ ಪೇ ಅಮೆರಿಕದಲ್ಲಿ (USA) ಮಾತ್ರ ಸ್ಥಗಿತವಾಗುವ ಹಿನ್ನಲೆಯಲ್ಲಿ ಭಾರತೀಯರಿಗೆ (Indians) ಯಾವುದೇ ತೊಂದರೆ ಎಂದು ತಿಳಿದುಬಂದಿದೆ.

ಹೌದು, 2024ರ ಜೂನ್‌ 4ರಿಂದಲೇ ಅಮೆರಿಕದಲ್ಲಿ ಗೂಗಲ್‌ ಪೇ ಆ್ಯಪ್ ಕಾರ್ಯಾಚರಣೆಯು ಸ್ಥಗಿತಗೊಳ್ಳಲಿದೆ ಎಂದು ಕಂಪನಿಯೇ ಮಾಹಿತಿ ನೀಡಿದೆ. ಆದರೆ, ಅಮೆರಿಕದಲ್ಲಿ ಗೂಗಲ್‌ ವ್ಯಾಲೆಟ್‌ ಪ್ಲಾಟ್‌ಫಾರ್ಮ್‌ ಲಭ್ಯವಾಗಲಿದ್ದು, ಜನರು ಅದರ ಮೂಲಕವೇ ವಹಿವಾಟು ನಡೆಸಬಹುದಾಗಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ. ಆದರೆ, ಭಾರತದಲ್ಲಿ ಗೂಗಲ್‌ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ ಎಂದು ಕಂಪನಿಯೇ ಸ್ಪಷ್ಟನೆ ನೀಡಿದೆ.

ಗೂಗಲ್‌ ಪೇ ಏಕೆ ಸ್ಥಗಿತ?

ಗೂಗಲ್‌ ಪೇ ಆ್ಯಪ್ ಕಾರ್ಯಾಚರಣೆಯಲ್ಲಿ ಇನ್ನಷ್ಟು ಸರಳ ಫೀಚರ್‌ಗಳನ್ನು ಅಳವಡಿಸುವ ದಿಸೆಯಲ್ಲಿ ಗೂಗಲ್‌ ಪೇ ಆ್ಯಪ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಮಾಹಿತಿ ನೀಡಿದೆ. ಗೂಗಲ್‌ ಪೇ ಆ್ಯಪ್ ಸ್ಥಗಿತವಾದರೂ, ಈಗ ಗ್ರಾಹಕರು ಗೂಗಲ್‌ ವ್ಯಾಲೆಟ್‌ ಮೂಲಕ ವಹಿವಾಟು ನಡೆಸಬಹುದಾಗಿದೆ ಎಂದು ತಿಳಿಸಿದೆ. ಗೂಗಲ್‌ ವ್ಯಾಲೆಟ್‌ಗೆ ಗೂಗಲ್‌ ಪೇ ಫೀಚರ್‌ಗಳನ್ನು ಮೈಗ್ರೇಟ್‌ (ವರ್ಗಾವಣೆ) ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲವೇ ಹೊಸ ಆ್ಯಪ್ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: Paytm FASTag: ನೀವು ಪೇಟಿಎಂ ಫಾಸ್ಟ್ಯಾಗ್‌ ಮೂಲಕ ಟೋಲ್ ಪಾವತಿ ಮಾಡ್ತಿದೀರಾ? ಹಾಗಿದ್ರೆ ಇಲ್ಲಿ ಗಮನಿಸಿ

“ಭಾರತ ಹಾಗೂ ಸಿಂಗಾಪುರದಲ್ಲಿ ಕೋಟ್ಯಂತರ ಜನ ಗೂಗಲ್‌ ಪೇ ಆ್ಯಪ್ ಬಳಸುತ್ತಿದ್ದಾರೆ. ಹಾಗಾಗಿ, ಎರಡೂ ದೇಶಗಳಲ್ಲಿ ಆ್ಯಪ್ ಕಾರ್ಯಾಚರಣೆ ಮುಂದುವರಿಯಲಿದೆ. ಜನರು ಎಂದಿನಂತೆ ಗೂಗಲ್‌ ಪೇ ಮೂಲಕ ಹಣ ಪಾವತಿ, ವರ್ಗಾವಣೆ ಮಾಡಬಹುದಾಗಿದೆ. ಈ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ” ಎಂದು ಕಂಪನಿ ತಿಳಿಸಿದೆ. ಗೂಗಲ್‌ ವ್ಯಾಲೆಟ್‌ ಮೂಲಕವೂ ಅಮೆರಿಕದಲ್ಲಿ ಗ್ರಾಹಕರು ಹಣ ವರ್ಗಾವಣೆ, ಕ್ರೆಡಿಟ್‌ ಕಾರ್ಡ್‌ ಅಟ್ಯಾಚ್‌ ಸೇರಿ ಹಲವು ಸೌಲಭ್ಯಗಳಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version