Site icon Vistara News

Onion Export: ನಾಲ್ಕು ರಾಷ್ಟ್ರಗಳಿಗೆ 54,760 ಟನ್‌ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರ ಗ್ರೀನ್‌ ಸಿಗ್ನಲ್

Government Permits for export of 54,760 Tonnes of onion to four countries

ನವದೆಹಲಿ: ಬಾಂಗ್ಲಾದೇಶ(Bangla Desh), ಮಾರಿಷಸ್(Mauritius), ಬಹ್ರೇನ್(Bahrain) ಮತ್ತು ಭೂತಾನ್‌ಗಳಿಗೆ (Bhutan) 54,760 ಟನ್ ಈರುಳ್ಳಿ ರಫ್ತು (Onion Export) ಮಾಡಲು ಕೇಂದ್ರ ಸರ್ಕಾರವು (Central Government) ಒಪ್ಪಿಗೆ ನೀಡಿದೆ. ಮಾರ್ಚ್ 31ರವರೆಗೂ ಈರುಳ್ಳಿ ರಫ್ತು ಮಾಡಬಹುದಾಗಿದೆ. ಭಾರೀ ಪ್ರಮಾಣದಲ್ಲಿ ಈರುಳ್ಳಿ ರಫ್ತು ಮಾಡಲು ಅವಕಾಶ ನೀಡಿದ್ದರಿಂದ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಲೂಬಹುದು.

ನಾವು ತಕ್ಷಣದಿಂದ ಜಾರಿಗೆ ಬರುವಂತೆ ಬಾಂಗ್ಲಾದೇಶಕ್ಕೆ 50,000 ಟನ್, ಮಾರಿಷಸ್‌ಗೆ 1,200 ಟನ್, ಬಹ್ರೇನ್‌ಗೆ 3,000 ಟನ್ ಮತ್ತು ಭೂತಾನ್‌ಗೆ 560 ಟನ್ ಈರುಳ್ಳಿ ರಫ್ತು ಮಾಡಲು ಅವಕಾಶ ನೀಡಿದ್ದೇವೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವರ್ತಕರು ಮಾರ್ಚ್ 31ರ ವರೆಗೆ ಈರುಳ್ಳಿ ರಫ್ತು ಮಾಡಬಹುದು. ವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಫಾರಸಿನ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಪ್ರಸ್ತುತ, ಮಾರ್ಚ್ 31 ರವರೆಗೆ ಈರುಳ್ಳಿ ರಫ್ತಿನ ಮೇಲೆ ನಿಷೇಧವಿದೆ. ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ಬೆಲೆ ಏರಿಕೆಯನ್ನು ತಡೆಯಲು 2023ರ ಡಿಸೆಂಬರ್ 8ರಂದು ನಿಷೇಧವನ್ನು ವಿಧಿಸಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಲಹೆಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಂಗ್ ಉಲ್ಲೇಖಿಸಿದ್ದಾರೆ.

ಹಾಗಂತ, ಈರುಳ್ಳಿ ರಫ್ತು ಮೇಲಿನ ನಿಷೇಧವನ್ನು ತೆಗೆದು ಹಾಕಿಲ್ಲ. ನಿಷೇಧವೂ ಈಗಲೂ ಜಾರಿಯಲ್ಲಿದೆ ಮತ್ತು ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ. ಕಳೆದ ವರ್ಷ ಈರುಳ್ಳಿ ದರ ಭಾರೀ ಏರಿಕೆ ಕಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ಮೇಲೆ ನಿಷೇಧ ಹೇರಿತ್ತು. ಈಗ ಮತ್ತೆ ನಾಲ್ಕು ರಾಷ್ಟ್ರಗಳಿಗೆ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತದೆಯೇ ಎಂದು ಕಾದು ನೋಡಬೇಕು.

ಈ ಸುದ್ದಿಯನ್ನೂ ಓದಿ: ಈರುಳ್ಳಿ ರಫ್ತು ನಿಷೇಧ! ಎಥೆನಾಲ್‌ ಉತ್ಪಾದನೆಗೆ ಕಬ್ಬು ಬಳಸುವಂತಿಲ್ಲ

Exit mobile version