ನವದೆಹಲಿ: ದೇಶಾದ್ಯಂತ ಬಸ್‌ಗಳ ಬಾಡಿ ನಿರ್ಮಾಣದ (Bus Body Construction) ಕುರಿತಂತೆ ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. “ಬಸ್‌ಗಳ ಬಾಡಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮಾನದಂಡಗಳನ್ನು ರೂಪಿಸಲು ಅನುಮೋದನೆ ನೀಡಿದೆ” ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Nitin Gadkari) ಮಾಹಿತಿ ನೀಡಿದ್ದಾರೆ.
“ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಜಾರಿಗೊಳಿಸುವುದರಿಂದ ಬಸ್‌ಗಳ ಬಾಡಿ ನಿರ್ಮಾಣದಲ್ಲಿ ಒರಿಜಿನಲ್ ಎಕ್ಯೂಪ್‌ಮೆಂಟ್ ಮ್ಯಾನುಫೆಕ್ಚರರ್ (Original Equipment Manufacturer)ಗಳು ಹಾಗೂ ಬಸ್‌ಗಳ ಬಾಡಿ ನಿರ್ಮಾಣ ಕಂಪನಿಗಳಲ್ಲಿ ಏಕರೂಪತೆ ಜಾರಿಗೆ ಬರಲಿದೆ” ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಈ ಮಹತ್ವದ್ದು ಎಂದೇ ಹೇಳಲಾಗುತ್ತಿದೆ.
In the wake of rising number of bus accidents, there is a pressing need to enhance the quality of bus body construction in Bharat.
— Nitin Gadkari (@nitin_gadkari) October 6, 2023
I have now approved standards for the construction of bus bodies, which shall be uniformly applicable to both OEMs and bus body builders.
This…
ಬಸ್ ಬಾಡಿ ಮಾನದಂಡಗಳಿಂದ ಏನು ಉಪಯೋಗ?
ದೇಶಾದ್ಯಂತ ಬಸ್ ಬಾಡಿಗಳ ನಿರ್ಮಾಣದಲ್ಲಿ ಏಕರೂಪತೆ ಜಾರಿಗೆ ತಂದರೆ, ಬಸ್ ಅಪಘಾತ ಸಂಭವಿಸಿದಾಗ ಉಂಟಾಗುವ ಸಾವಿನ ಸಂಖ್ಯೆ ನಿಯಂತ್ರಣವಾಗುತ್ತದೆ ಎಂಬುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ. “ದೇಶದಲ್ಲಿ ಬಸ್ ಅಪಘಾತಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ದೇಶದಲ್ಲಿ ಗುಣಮಟ್ಟದ ಬಸ್‌ಗಳ ಬಾಡಿ ನಿರ್ಮಾಣವಾದರೆ ಅಪಘಾತದ ವೇಳೆ ಸಾವಿನ ಸಂಖ್ಯೆ ತಗ್ಗಿಸಬಹುದು. ಅದರಲ್ಲೂ, ದೇಶಾದ್ಯಂತ ಏಕರೂಪದ ಹಾಗೂ ಏಕ ಗುಣಮಟ್ಟದ ಬಸ್ ಬಾಡಿಗಳ ನಿರ್ಮಾಣವಾದರೆ ಪ್ರಯಾಣಿಕರ ಸುರಕ್ಷತೆ ಕಾಪಾಡಬಹುದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Nitin Gadkari: ಡೀಸೆಲ್ ವಾಹನಗಳ ಮೇಲೆ 10% ಹೆಚ್ಚುವರಿ ಮಾಲಿನ್ಯ ತೆರಿಗೆ: ನಿತಿನ್ ಗಡ್ಕರಿ ಪ್ರಸ್ತಾಪ
ಶೀಘ್ರದಲ್ಲೇ ಬಸ್ ಬಾಡಿ ನಿರ್ಮಾಣದ ಮಾನದಂಡಗಳ ಕುರಿತು ನೋಟಿಫಿಕೇಶನ್ ಹೊರಡಿಸಲಾಗುತ್ತದೆ. ಸಲಹೆ-ಸೂಚನೆಗಳ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದರು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿ ಪ್ರಕಾರ, 2022ರಲ್ಲಿ ಸಂಭವಿಸಿದ ಒಟ್ಟು ಅಪಘಾತಗಳಲ್ಲಿ ಬಸ್‌ಗಳ ಪಾಲು ಶೇ.3ರಷ್ಟಿದೆ. ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇ.28ರಷ್ಟು ಜನ ಬಸ್ ಅಪಘಾತಗಳಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಹಾಗೂ ತಮಿಳುನಾಡಿನಲ್ಲಿಯೇ ಹೆಚ್ಚು ಬಸ್ ಅಪಘಾತ ಸಂಭವಿಸಿವೆ.