ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಕಳೆದ ಆರು ವರ್ಷದಿಂದ ಹೆಚ್ಚಿನ ಸಂಭ್ರಮ, ಸಡಗರದಿಂದ ದೀಪಾವಳಿಯನ್ನು (Diwali In Ayodhya) ಆಚರಿಸಲಾಗುತ್ತಿದೆ. ಅದರಲ್ಲೂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಅಯೋಧ್ಯೆಯ ದೀಪಾವಳಿಗೆ ಹೆಚ್ಚಿನ ರಂಗು ಬಂದಿದೆ. ಇದಕ್ಕೆ ನಿದರ್ಶನ ಎಂಬಂತೆ ಈ ಬಾರಿ ಅಯೋಧ್ಯೆಯಲ್ಲಿ ಶನಿವಾರ 17 ಲಕ್ಷ ದೀಪ ಬೆಳಗುವ ಹಾಗೂ ಜಗಮಗಿಸುವ ಲೇಸರ್ ಶೋ ಮೂಲಕ ಬೆಳಕಿನ ಹಬ್ಬದ ಸಂಭ್ರಮಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗಿದೆ.
ಶುಕ್ರವಾರದಿಂದಲೇ ದೀಪಾವಳಿಗೆ ಸಿದ್ಧತೆ ನಡೆದಿದೆ. ಸುಮಾರು 5 ಸಾವಿರ ಜನ ಸ್ವಯಂಪ್ರೇರಿತರಾಗಿ ದೀಪಾವಳಿಗೆ ಸಿದ್ಧತೆ ಕೈಗೊಂಡಿದ್ದಾರೆ. ಭಾನುವಾರ ದೀಪೋತ್ಸವ ನಡೆಯಲಿದ್ದು, ಲಕ್ಷಾಂತರ ದೀಪಗಳನ್ನು ಬೆಳಗುವ ಮೂಲಕ ಸಡಗರದಿಂದ ಆಚರಿಸಲಾಗುತ್ತದೆ. ಶನಿವಾರ ಘಾಟ್‌ಗಳಲ್ಲಿ 17 ಲಕ್ಷ ದೀಪ ಬೆಳಗಿಸಲಾಯಿತು. ಲೇಸರ್ ಬೆಳಕಿನ ಆಟವು ನೋಡುಗರ ಕಣ್ಮನ ತಣಿಸಿತು.
ಭಾನುವಾರ ದೀಪ ಬೆಳಗಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಅಯೋಧ್ಯೆಯ ದೀಪಾವಳಿಯಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ದೀಪೋತ್ಸವದ ಹಿನ್ನೆಲೆಯಲ್ಲಿ ಮೋದಿ ಅವರು ಅಯೋಧ್ಯೆಯಲ್ಲಿ ದೀಪ ಬೆಳಗಲಿದ್ದಾರೆ. ಹಾಗೆಯೇ, 4 ಸಾವಿರ ಕೋಟಿ ರೂ. ವೆಚ್ಚದ 66 ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈಗಾಗಲೇ ಲಕ್ಷಾಂತರ ಜನ ಅಯೋಧ್ಯೆಯಲ್ಲಿ ಬೀಡುಬಿಟ್ಟಿರುವ ಕಾರಣ ನಗರಕ್ಕೆ ಹೊಸ ಕಳೆ ಬಂದಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ | ಈ ರಾಜ್ಯದಲ್ಲಿ ಏಳು ದಿನ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಇಲ್ಲ ದಂಡ; ಇದು ವಾಹನ ಸವಾರರಿಗೆ ದೀಪಾವಳಿ ಗಿಫ್ಟ್ !