ಮದುವೆ ಸಂಭ್ರಮ ನಡೆಯುತ್ತಿದ್ದ ಮಧ್ಯೆಯೇ ವಧುವಿನ ಕಡೆಯವರು, ವರನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಿಹಾರದ ಗಯಾದಲ್ಲಿ ನಡೆಯುತ್ತಿದ್ದ ಮದುವೆ ಒಂದು ಅರೆಕ್ಷಣದಲ್ಲಿ ಗಲಾಟೆಯಾಗಿ ಬದಲಾಯಿತು. ವಧುವಿನ ಕಡೆಯವರ ಹೊಡೆತ ತಾಳಲಾರದೆ ವರ ಕೈಮುಗಿದು ನಿಂತು, ಹೊಡೆಯಬೇಡಿ ಎಂದು ಕೈಮುಗಿದು ಕೇಳಿಕೊಂಡರೂ ಅವರಲ್ಲಿ ಕರುಣೆ ಬರಲಿಲ್ಲ. ಒಂದೇ ಸಮನೆ ಥಳಿಸುತ್ತಲೇ ಇದ್ದರು. ಈ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ (Viral Video) ಆಗಿದೆ.
ಇದಕ್ಕೆ ಕಾರಣ ವರನ ತಲೆಯಲ್ಲಿ ಕೂದಲು ಇಲ್ಲ ಎಂಬುದು. ವರ ವಿಗ್ ಧರಿಸಿದ್ದಾನೆ. ತನ್ನದು ಬೊಕ್ಕತಲೆ ಎಂಬುದನ್ನು ಮುಚ್ಚಿಟ್ಟಿದ್ದಾನೆ. ಈ ಮೂಲಕ ವಂಚಿಸಿದ್ದಾನೆ ಎಂಬುದು ವಧುವಿನ ಕಡೆಯವರ ಆರೋಪ. ಇದೇ ಕಾರಣಕ್ಕೆ ಬಾಯಿಗೆ ಆತನಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಇನ್ನು ಆ ವರ ತಲೆಯ ಮೇಲಿನ ವಿಗ್ ನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನೂ ವಿಡಿಯೊದಲ್ಲಿ ನೋಡಬಹುದು. ವರ ಸಂಪ್ರದಾಯದಂತೆ ತಲೆಗೆ ಬಾಸಿಂಗ ಕಟ್ಟಿದ್ದ. ಆದರೂ ವಧುವಿನ ಕುಟುಂಬಕ್ಕೆ ಅನುಮಾನ ಬಂದಿದೆ. ಅದರಲ್ಲೇ ಒಬ್ಬ ತಲೆಗೆ ಕಟ್ಟಿದ್ದ ಬಾಸಿಂಗವನ್ನು ವಿಗ್ ಸಮೇತ ಎತ್ತಿದ್ದಾನೆ. ಆಗಲೇ ಗಲಾಟೆ ಶುರುವಾಗಿದೆ. ವಂಚನೆ ಮಾಡಿದ್ದೀಯಾ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ.
ಆದರೆ ಇನ್ನೊಂದು ವರದಿ ಪ್ರಕಾರ, ಈ ವರನಿಗೆ ಅದಾಗಲೇ ಒಂದು ಮದುವೆಯಾಗಿದೆ. ಮೊದಲ ಪತ್ನಿಯ ಜತೆಯೇ ವಾಸವಾಗಿದ್ದಾನೆ. ಇದು ಅವನಿಗೆ ಎರಡನೇ ಮದುವೆ ಎಂಬ ಕಾರಣ ಗೊತ್ತಾಗಿಯೇ ವಧುವಿನ ಕುಟುಂಬದವರು ಥಳಿಸಿದ್ದಾರೆ ಎನ್ನಲಾಗಿದೆ.
#Gaya, #Bihar
— ミ🇮🇳★ 𝙆𝙪𝙘𝙝𝘽𝙖𝙖𝙩𝙃𝙖𝙞 ★🇮🇳彡 (@KyaaBaatHai) July 13, 2023
Groom was beaten by the bride's family as they came to know that he wears a wig.
Now such kind of information shouldn't be kept hidden from a partner and that's absolutely wrong.
BUT for that purpose, the groom can't be tortured or beaten by the bride's family. pic.twitter.com/KvB7F3g2gL