Site icon Vistara News

GST Collection : ಡಿಸೆಂಬರ್ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಭರ್ಜರಿ ಪ್ರಗತಿ

Use of AI, analytical tools to detect GST fraud tax evasion

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದ್ದು,, 2023 ರ ಡಿಸೆಂಬರ್​ನಲ್ಲಿ ಒಟ್ಟು ಗಳಿಕೆ ಗಳಿಕೆ ಕಳೆದ ವರ್ಷಕ್ಕಿಂತ ಶೇಕಡಾ 10.3 ರಷ್ಟು ಏರಿಕೆಯಾಗಿದೆ. ಒಟ್ಟು ಸಂಗ್ರಹ 1,64,882 ಕೋಟಿ ರೂಪಾಯಿ ತಲುಪಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಏಪ್ರಿಲ್-ಡಿಸೆಂಬರ್ 2023 ರ ಅವಧಿಯಲ್ಲಿ, ಒಟ್ಟು ಜಿಎಸ್ಟಿ ಸಂಗ್ರಹವು ಶೇಕಡಾ 12 ರಷ್ಟು ಬೆಳವಣಿಗೆಯನ್ನು ಕಂಡಿದೆ. 14.97 ಲಕ್ಷ ಕೋಟಿ ರೂ.ಗೆ ತಲುಪಿದೆ/ ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್-ಡಿಸೆಂಬರ್ 2022) ಸಂಗ್ರಹಿಸಿದ 13.40 ಲಕ್ಷ ಕೋಟಿ ರೂ.ಗಳಿಗೆ ಹೋಲಿಕೆ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್ಟಿ ಸಂಗ್ರಹವು 1.66 ಲಕ್ಷ ಕೋಟಿ ರೂಪಾಯಿಗಳಾಗಿತ್ತು. 2023 ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ದಾಖಲಾದ ಸರಾಸರಿ 1.49 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 12 ರಷ್ಟು ಹೆಚ್ಚಳ ಕಂಡು ಬಂದಿದೆ.

2023 ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,64,882 ಕೋಟಿ ರೂಪಾಯಿ. ಇದರಲ್ಲಿ ಕೆಂದ್ರ ಜಿಎಸ್​ಟಿ 30,443 ಕೋಟಿ ರೂಪಾಯಿ ಹಾಗೂ ರಾಜ್ಯ ಜಿಎಸ್ಜಿ 37,935 ಕೋಟಿ ರೂಪಾಯಿ. ಐಜಿಎಸ್​ಟಿ (ಸಂಯೋಜಿತ ಜಿಎಸ್​ಟಿ) 84,255 ಕೋಟಿ ರೂಪಾಯಿಯಾಗಿದೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 41,534 ಕೋಟಿ ರೂ.ಗಳು ಮತ್ತು 12,249 ಕೋಟಿ ರೂಪಾಯಿ ಸೆಸ್​ ಕೂಡ ಸೇರಿದೆ.

ಹಾಲಿ ಹಣಕಾಸು ವರ್ಷದಲ್ಲಿ ಏಳು ತಿಂಗಳು ಜಿಎಸ್​ಟಿ ಸಂಗ್ರಹವು 1.60 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಸರ್ಕಾರವು ಸಿಜಿಎಸ್​ಟಿಗೆ 40,057 ಕೋಟಿ ರೂ.ಗಳನ್ನು ಮತ್ತು ಎಸ್​ಜಿಎಸ್​​ಟಿಗೆ 33,652 ಕೋಟಿ ರೂ.ಗಳನ್ನು ಐಜಿಎಸ್​ಟಿಗೆ ವಿತರಣೆ ಮಾಡಿದೆ. ನಿಯಮಿತ ಹಂಚಿಕೆ ನಂತರ 2023 ರ ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್​ಟಿಗೆ 70,501 ಕೋಟಿ ರೂ ಮತ್ತು ಎಸ್​ಜಿಎಸ್​​​ಟಿಗೆ 71,587 ಕೋಟಿ ರೂಪಾಯಿಗಳಾಗಿದೆ.

ಆದಾಯ ಹೆಚ್ಚಳ

ಡಿಸೆಂಬರ್ 2023 ರ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹವಾದ ಜಿಎಸ್​ಟಿ ಆದಾಯಕ್ಕಿಂತ ಶೇಕಡಾ 10.3 ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 13 ರಷ್ಟು ಅಧಿಕವಾಗಿದೆ.

ಇದನ್ನೂ ಓದಿ : LPG Price: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆ ಕಡಿತ

ಕೆಪಿಎಂಜಿಯ ರಾಷ್ಟ್ರೀಯ ಮುಖ್ಯಸ್ಥ (ಪರೋಕ್ಷ ತೆರಿಗೆ) ಅಭಿಷೇಕ್ ಜೈನ್ ಮಾಹಿತಿ ನೀಡಿದ, “ಸಂಗ್ರಹವು ಕಳೆದ ತಿಂಗಳು ಕಂಡುಬಂದಿದ್ದಕ್ಕಿಂತ ಸ್ವಲ್ಪ ಕಡಿಮೆಯಿದ್ದರೂ, 1.6 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ದಾಖಲೆ ಮಾಡಿದೆ. ಜಾಗತಿಕ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ. ಹಣಕಾಸು ವರ್ಷ 17-18 ಮತ್ತು 18-19 ಬಾಕಿಗಳ ವಿಲೇವಾರಿಗೆ ಅನುಕೂಲಕರ ಎಂದು ಹೇಳಿದ್ದಾರೆ.

Exit mobile version