Site icon Vistara News

GST Council Meet : ನಕಲಿ ಬಿಲ್​ ತಡೆಗೆ ಬಯೋಮೆಟ್ರಿಕ್​ ವ್ಯವಸ್ಥೆ; ಜಿಎಸ್​ಟಿ ಕೌನ್ಸಿಲ್​ ಸಭೆಯಲ್ಲಿ ಹಲವು ನಿರ್ಧಾರಗಳು ಪ್ರಕಟ

GST Council Meet

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಶನಿವಾರ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆ (GST Council Meet) ನಡೆಯಿತು. ಪ್ರಮುಖವಾಗಿ ದೇಶಾದ್ಯಂತ ನಡೆಯುತ್ತಿರುವ ನಕಲಿ ಬಿಲ್​ಗಳ ಹಾವಳಿಯನ್ನು ತಡೆಯಲು ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣ ಮಾನದಂಡವನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಈ ಸಭೆಯಲ್ಲಿ ಘೋಷಿಸಲಾಯಿತು. 53ನೇ ಜಿಎಸ್​ಟಿ ಕೌನ್ಸಿಲ್ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ ಸಚಿವೆ ಸೀತಾರಾಮನ್ ಇದೂ ಸೇರಿದಂತೆ ಪ್ರಮುಖ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು. ಅದೇ ರೀತಿ ರೈಲ್ವೆಯ ಹಲವಾರು ಸೇವೆಗಳಿಗೆ ಜಿಎಸ್​​ಟಿ ವಿನಾಯಿತಿ ನೀಡಲಾಗಿದೆ.

ಬಿಲ್​ಗಳ ನಕಲಿ ತಪ್ಪಿಸಲು ಅಖಿಲ ಭಾರತ ಮಟ್ಟದಲ್ಲಿ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ಜಾರಿ ತರಲಾಗುವುದು. ನಕಲಿ ಇನ್​ವಾಯ್ಸ್​ಗಳ ಮೂಲಕ ಮಾಡಿರುವ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್​ಗಳನ್ನು ಪತ್ತೆ ಹಚ್ಚಲು ಇದು ಸರ್ಕಾರಕ್ಕೆ ಸಹಾಯ ಮಾಡುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವರಿಸಿದರು.

ನಾವು ಗುಜರಾತ್ ಮತ್ತು ಪುದುಚೇರಿಯಲ್ಲಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದೇವೆ. ಆದ್ದರಿಂದ ನಕಲಿ ಇನ್​ವಾಯ್ಸ್​ಗಳ ಮೂಲಕ ಮಾಡಿದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್​ಗಳನ್ನು ಪತ್ತೆ ಹಚ್ಚಲು ಬಯೊಮೆಟ್ರಿಕ್ ವ್ಯವಸ್ಥೆ ಸಹಾಯ ಮಾಡಿದೆ. ಅರ್ಜಿದಾರರ ಆಧಾರ್ ದೃಢೀಕರಣವನ್ನು ಪಡೆದರೆ ನಕಲಿ ಇನ್​ವಾಯ್ಸ್​ಗಳ ಮೂಲಕ ಪಡೆಯು ಕ್ಲೇಮ್​ಗಳನ್ನು ತಪ್ಪಿಸಬಹುದು. ಆದ್ದರಿಂದ ದೇಶಿಯವಾಗಿ ಅರ್ಜಿದಾರರ ನೋಂದಣಿಯ ಬಯೋಮೆಟ್ರಿಕ್ ಆಧಾರಿತ ಆಧಾರ್ ದೃಢೀಕರಣವನ್ನು ಹಂತ ಹಂತವಾಗಿ ಜಾರಿಗೊಳಿಸಲು ಜಿಎಸ್ಟಿ ಕೌನ್ಸಿಲ್ ಶಿಫಾರಸು ಮಾಡಿದೆ ಎಂದು ಅವರು ಹೇಳಿದ್ದಾರೆ.

53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವುಗಳೆಲ್ಲವೂ ವ್ಯಾಪಾರಿಗಳು, ಎಂಎಸ್ಎಂಇಗಳು, ಮತ್ತು ತೆರಿಗೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಸೀತಾರಾಮನ್ ಹೇಳಿದರು. ತೆರಿಗೆ ತೆರಿಗೆದಾರರಿಗೆ ಪರಿಹಾರ ನೀಡುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹಣಕಾಸು ಸಚಿವರು ಪುನರುಚ್ಚರಿಸಿದರು.

ಜಿಎಸ್​ಟಿ ಕೌನ್ಸಿಲ್​ ಸಭೆಯ ಕುರಿತು ನಿರ್ಮಲಾ ಸೀತಾರಾಮನ್ ಹೇಳಿದ್ದೇನು?

ಎಲ್ಲಾ ಸೋಲಾರ್​ ಕುಕ್ಕರ್​ಗಳ ಮೇಲೆ 12 ಶೇಕಡಾ ಜಿಎಸ್​ಟಿ ವಿಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಕುಕ್ಕರ್​ಗಳು ಏಕ ಅಥವಾ ದ್ವಿ ಶಕ್ತಿಯ ಮೂಲದ ಮೂಲಕ ಕೆಲಸ ಮಾಡಿದರೂ ಅದೇ 12% ಜಿಎಸ್ ಟಿ ಅನ್ವಯವಾಗುತ್ತದೆ.

ಇದನ್ನೂ ಓದಿ: NEET UG Row : ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆ ಸುಧಾರಣೆಗೆ ಇಸ್ರೋ ಮಾಜಿ ಮುಖ್ಯಸ್ಥರು ಸೇರಿದಂತೆ 7 ಮಂದಿಯ ಸಮಿತಿ ರಚನೆ

ಸಾಮಾನ್ಯ ಜನರಿಗೆ ಭಾರತೀಯ ರೈಲ್ವೆ ಒದಗಿಸುವ ಸೇವೆಗಳು, ಪ್ಲಾಟ್​ಫಾರ್ಮ್​ ಟಿಕೆಟ್​ಗಳ ಮಾರಾಟ, ವಿಶ್ರಾಂತಿ ಕೊಠಡಿಗಳ ಸೌಲಭ್ಯ, ಕಾಯುವಿಕೆಯ ಕೋಣೆಗಳು, ಕ್ಲಾಕ್​ರೂಮ್​ ಸೇವೆಗಳು, ಬ್ಯಾಟರಿ ಚಾಲಿತ ಕಾರಿನ ಸೇವೆಗಳನ್ನು ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗಿದೆ.

ಶಿಕ್ಷಣ ಸಂಸ್ಥೆಗಳ ಹೊರಗಿನ ವಿದ್ಯಾರ್ಥಿಗಳಿಗಾಗಿ ಇರುವ ಹಾಸ್ಟೆಲ್ ಗಳಿಗೂ ಜಿಎಸ್​ಟಿ ವಿನಾಯಿತಿ ನೀಡಲಾಗಿದೆ.

ಉಕ್ಕು, ಕಬ್ಬಿಣ, ಅಲ್ಯೂಮಿನಿಯಂ ಸೇರಿದಂತೆ ಎಲ್ಲಾ ಹಾಲಿನ ಕ್ಯಾನ್ ಗಳ ಮೇಲೆ 12% ಏಕರೂಪದ ದರವನ್ನು ನಿಗದಿಪಡಿಸಲು ಕೌನ್ಸಿಲ್ ಶಿಫಾರಸು ಮಾಡಿದೆ.

ಎಲ್ಲಾ ಕಾರ್ಟನ್ ಪೆಟ್ಟಿಗೆಗಳು ಮತ್ತು ತುಕ್ಕು ಹಿಡಿಯದ ಮತ್ತು ತುಕ್ಕು ಹಿಡಿಯದ ಕಾಗದ ಅಥವಾ ಕಾಗದದ ಬೋರ್ಡ್ ಮೇಲೂ ಏಕರೂಪದ ಜಿಎಸ್ಟಿ ದರವನ್ನು 12% ನಿಗದಿಪಡಿಸಲಾಗಿದೆ.

ಇದಕ್ಕೂ ಮುನ್ನ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರೊಂದಿಗೆ (ಶಾಸಕಾಂಗದೊಂದಿಗೆ) ಬಜೆಟ್ ಪೂರ್ವ ಸಮಾಲೋಚನೆ ನಡೆಸಿದರು.

Exit mobile version