Site icon Vistara News

GST Council Meeting: ರೈತರಿಗೆ ಶುಭಸುದ್ದಿ; ಸಿರಿಧಾನ್ಯ ಹಿಟ್ಟು, ಕಾಕಂಬಿ ಜಿಎಸ್‌ಟಿ 5%ಕ್ಕೆ ಇಳಿಕೆ

Nirmala Sitharaman

Union Budget 2024: Centre may revise tax exemption in Old Tax Regime, says report

ನವದೆಹಲಿ: ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ಹಾಗೂ ರೈತರಿಗೆ ಕ್ಷಿಪ್ರವಾಗಿ ಕಬ್ಬಿನ ಬಾಕಿ ಬಿಡುಗಡೆ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಸಿರಿಧಾನ್ಯಗಳ ಹಿಟ್ಟಿನ ಜಿಎಸ್‌ಟಿ ಹಾಗೂ ಕಬ್ಬಿನ ಕಾಕಂಬಿ (Molasses) ಮೇಲಿನ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಸಮಿತಿ ಸಭೆ (GST Council Meeting) ತೀರ್ಮಾನಿಸಿದೆ.

ಕೇಂದ್ರ ಸರ್ಕಾರವು 2023ಅನ್ನು ಸಿರಿಧಾನ್ಯಗಳ ವರ್ಷ ಎಂದು ಆಚರಿಸುತ್ತಿದೆ. ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲೂ ಸಿರಿಧಾನ್ಯಗಳ ಆಹಾರದ ಮೂಲಕ ಗಮನ ಸೆಳೆದಿತ್ತು. ಹಾಗೆಯೇ, ಹಲವು ಸಿರಿಧಾನ್ಯಗಳ ಬಳಕೆ, ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದರ ಬೆನ್ನಲ್ಲೇ,‌ ರಾಗಿ ಸೇರಿ ಶೇ.70ರಷ್ಟು ಸಿರಿಧಾನ್ಯಗಳಿಂದ ಕೂಡಿದ ಹಿಟ್ಟಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರವು ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. ಇದರಿಂದ ಜನ ಸಿರಿಧಾನ್ಯಗಳ ಹಿಟ್ಟು ಹೆಚ್ಚು ಬಳಸುವ ಮೂಲಕ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಲಿ ಎಂಬುದು ಕೇಂದ್ರದ ಉದ್ದೇಶವಾಗಿದೆ. ಸಿರಿಧಾನ್ಯಗಳ ಹೆಚ್ಚು ಬಳಕೆಯಾದಷ್ಟು ಉತ್ಪಾದನೆ ಹೆಚ್ಚುತ್ತದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ.

ಕಾಕಂಬಿ ಮೇಲಿನ ಜಿಎಸ್‌ಟಿ ಇಳಿಕೆ

ಕಬ್ಬಿನಿಂದ ಉತ್ಪಾದಿಸುವ ಕಾಕಂಬಿ ಮೇಲಿನ ಜಿಎಸ್‌ಟಿಯನ್ನೂ ಸಮಿತಿಯು ಶೇ.28ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. ಕಬ್ಬಿನ ಕಾಕಂಬಿಯನ್ನು ಮದ್ಯ (ಆಲ್ಕೋಹಾಲ್)‌ ಉತ್ಪಾದನೆಗೆ ಬಳಸಲಾಗುತ್ತದೆ. ಇದರ ಜಿಎಸ್‌ಟಿ ಇಳಿಕೆ ಮಾಡಿರುವುದು ಕಬ್ಬು ಬೆಳೆಗಾರರಿಗೆ ಲಾಭದಾಯಕ ಎಂದು ಸಭೆಯ ಬಳಿಕ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ. ಹಾಗೆಯೇ, ಜಿಎಸ್‌ಟಿ ಇಳಿಕೆಯಿಂದ ಕಬ್ಬಿನ ಬಾಕಿ ಮೊತ್ತವನ್ನು ಕ್ಷಿಪ್ರವಾಗಿ ಬಿಡುಗಡೆ ಮಾಡುವುದು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: GST Collection: ಸೆಪ್ಟೆಂಬರ್ ತಿಂಗಳಲ್ಲಿ 1.63 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಶೇ.10ರಷ್ಟು ಹೆಚ್ಚಳ!

ಜಿಎಸ್‌ಟಿಯಿಂದ ಎಕ್ಸ್‌ಟ್ರಾ ನ್ಯೂಟ್ರಲ್‌ ಆಲ್ಕೋಹಾಲ್‌ಗೆ ವಿನಾಯಿತಿ

ಜಿಎಸ್‌ಟಿ ವ್ಯಾಪ್ತಿಯಿಂದ ಎಕ್ಸ್‌ಟ್ರಾ ನ್ಯೂಟ್ರಲ್‌ ಆಲ್ಕೋಹಾಲ್‌ (ENA)ಗೆ ವಿನಾಯಿತಿ ನೀಡಿರುವುದು ಕೂಡ ಜಿಎಸ್‌ಟಿ ಸಮಿತಿ ಸಭೆಯ ಪ್ರಮುಖ ತೀರ್ಮಾನವಾಗಿದೆ. “ಮಾನವ ಬಳಕೆಯ (Human Consumption) ಇಎನ್‌ಎಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಆಯಾ ರಾಜ್ಯಗಳು ತೆರಿಗೆ ವಿಧಿಸುವ ಅಥವಾ ವಿಧಿಸದಿರುವ ಆಯ್ಕೆಯನ್ನು ನೀಡಲಾಗಿದೆ” ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಎಕ್ಸ್‌ಟ್ರಾ ನ್ಯೂಟ್ರಲ್‌ ಆಲ್ಕೋಹಾಲ್‌ ಬಣ್ಣ ಹಾಗೂ ರುಚಿರಹಿತವಾಗಿರುತ್ತದೆ.

Exit mobile version