Site icon Vistara News

Gujarat Election | ಮೋರ್ಬಿ ಸೇತುವೆ ಕುಸಿತ ಭ್ರಷ್ಟಾಚಾರದ ವ್ಯಾಪಕತೆಗೆ ಸಾಕ್ಷಿ: ದಿಲ್ಲಿ ಸಿಎಂ ಕೇಜ್ರಿವಾಲ್ ಆರೋಪ

Arvind Kejriwal

What Next After Arvind Kejriwal Skips 3rd Probe Agency Summons? Here Is Explained

ಅಹಮದಾಬಾದ್: 135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ಕುಸಿತವು (Morbi Bridge Collapse) ಭ್ರಷ್ಟಾಚಾರದ ವ್ಯಾಪಕತೆಯನ್ನು ತೋರಿಸುತ್ತದೆ ಎಂದು ಆಪ್ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Aravind Kejriwal) ಅವರು ಬಿಜೆಪಿ ವಿರುದ್ಧ ಕಡು ಟೀಕೆ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಬೇಸತ್ತಿರುವ ಜನರು, ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ (Gujarat Election) ಆಪ್‌ಗೆ ವೋಟ್ ಮಾಡಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮೋರ್ಬಿ ಸೇತುವೆ ಕುಸಿತ ಪ್ರಕರಣ ಕುರಿತು ನೀಡಲಾಗಿರುವ ದೂರಿನಲ್ಲಿ ನಿಜವಾದ ಆರೋಪಿಗಳನ್ನು ಸೇರಿಸಿಲ್ಲ. ಮನಸ್ಸಿಗೆ ಬಂದವರ ಹೆಸರನ್ನು ಸೇರಿಸಿದ್ದಾರೆ. ನಿಜವಾದ ತಪ್ಪಿತಸ್ಥರನ್ನು ರಕ್ಷಣೆ ಮಾಡಲಾಗುತ್ತಿದೆ. ಗಡಿಯಾರಗಳನ್ನು ತಯಾರಿಸುವ ಕಂಪನಿಗೆ ಬ್ರಿಡ್ಜ್ ಜೀರ್ಣೋದ್ಧಾರದ ಕೆಲಸವನ್ನು ನೀಡಲಾಗಿತ್ತು. ಆ ಕಂಪನಿಯ ಮಾಲೀಕ ತಲೆಮರೆಸಿಕೊಂಡಿದ್ದಾನೆ. ಕಂಪನಿಯ ಮಾಲೀಕನ ಹೆಸರನ್ನು ಏಕೆ ದೂರಿನಲ್ಲಿ ಸೇರಿಸಿಲ್ಲ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಗುಜರಾತ್‌ನ ಮೋರ್ಬಿಯಲ್ಲಿ ಸಂಭವಿಸಿದ ಸೇತುವೆ ದುರಂತದಲ್ಲಿ 45ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 135 ಜನರು ಪ್ರಾಣ ಕಳೆದುಕೊಂಡಿದ್ದರು. ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5ರಂದು ಎರಡು ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8ರಂದು ಚುನಾವಣೆ ಫಲಿತಾಂಶವು ಪ್ರಕಟವಾಗಲಿದೆ.

ಇದನ್ನೂ ಓದಿ | Morbi Bridge Collapse | ಮೋರ್ಬಿ ಸೇತುವೆ ಕುಸಿತ, ಒರೆವಾ ಕಂಪನಿಯ ಅಧಿಕಾರಿಗಳು ಸೇರಿ 9 ಮಂದಿ ಬಂಧನ

Exit mobile version