Site icon Vistara News

Video Viral: ಬಿಪರ್‌ಜಾಯ್ ಚಂಡಮಾರುತದಲ್ಲಿ 4 ದಿನದ ಕೂಸು ರಕ್ಷಿಸಿದ ಮಹಿಳಾ ಪೊಲೀಸ್!

4 day baby rescued by police

ನವದೆಹಲಿ: ಗುಜರಾತ್‌ನ (Gujarat) ಕರಾವಳಿಯಲ್ಲಿ ಬಿಪರ್‌ಜಾಯ್ (Cyclone Biparjoy) ಚಂಡಮಾರುತ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಸಹಸ್ರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾರೀ ಪ್ರಮಾಣದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ, ಕಾರ್ಯಾಚರಣೆ ವೇಳೆಯ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಮಹಿಳಾ ಪೊಲೀಸ್ (Police Officer) ಅಧಿಕಾರಿಯೊಬ್ಬರು ನಾಲ್ಕು ದಿನಗಳ ಕೂಸನ್ನು (4 Day baby) ತಮ್ಮ ತೋಳುಗಳಲ್ಲಿ ಸ್ಥಳಾಂತರಿಸುವ ವಿಡಿಯೋ ಫುಲ್ ವೈರಲ್ (Video Viral) ಆಗಿದೆ. ದ್ವಾರಕಾ ಜಿಲ್ಲೆಯ ಭನ್ವಾಡ್ ಗ್ರಾಮದ ಕುಟುಂಬವನ್ನು ಸ್ಥಳಾಂತರಿಸಲಾಯಿತು. ಈ ವೇಳೆ, ಈ ಕೂಸಿನ ವಿಡಿಯೋ ಆನ್‌ಲೈನ್‌ಲ್ಲಿ ಭಾರೀ ಗಮನ ಸೆಳೆದಿದೆ.

ವೈರಲ್ ಆಗಿರುವ ವಿಡಿಯೋ

40 ಸೆಕೆಂಡುಗಳ ವೀಡಿಯೊವನ್ನು ಗುಜರಾತ್ ಸಚಿವ ಮುಲುಭಾಯ್ ಬೇರಾ ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. “ಭನ್ವಾಡ್ ಸ್ಥಳೀಯ ಆಡಳಿತವು ಸೇವೆಯ ಮೂಲಕ ಭದ್ರತೆಯನ್ನು ಖಚಿತಪಡಿಸಿದೆ. ನಾಲ್ಕು ದಿನಗಳ ಹಿಂದೆ ಬರ್ದಾ ಡುಂಗರ್‌ನಲ್ಲಿ ಜನ್ಮ ನೀಡಿದ ತಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಬಿಪರ್‌ಜಾಯ್ ಚಂಡಮಾರುತದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕೂಸನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಗುಜರಾತಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್‌ವನ್ನು ಗುಜರಾತ್ ಪೊಲೀಸ್ ಮಹಾ ನಿರ್ದೇಶಕರ ಅಧಿಕೃತ ಖಾತೆಯೂ ಕೂಡ ಷೇರ್ ಮಾಡಿದ್ದು, ಅವರು ಸುರಕ್ಷಿತ ಕೈಗಳಲ್ಲಿದ್ದಾರೆಂದು ಶೀರ್ಷಿಕೆ ನೀಡಿದ್ದಾರೆ.

ಬಿಪರ್‌ಜಾಯ್ ಚಂಡಮಾರುತವು ಗುಜರಾತ್‌ನ ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಭೂಮಿಗೆ ಅಪ್ಪಳಿಸಿದೆ. ಗುಜರಾತ್‌ನಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿ ಶುರುವಾಗಿದೆ. ಜೀವ ಮತ್ತು ಆಸ್ತಿಪಾಸ್ತಿಗೆ ಅಪಾಯವನ್ನು ನಿರೀಕ್ಷಿಸಿದ ಅಧಿಕಾರಿಗಳು ಚಂಡಮಾರುತ ಬರುವ ಮುನ್ನವೇ ಅಪಾಯದಲ್ಲಿರುವ ತಗ್ಗು ಪ್ರದೇಶಗಳಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಿದ್ದರು. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನೂ ಓದಿ: Cyclone Biparjoy: ಬಿಪರ್‌ಜಾಯ್‌ ಅಬ್ಬರ; ಪ್ರವಾಹದಲ್ಲಿ ಸಿಲುಕಿದ ಮೇಕೆ ರಕ್ಷಿಸಲು ಹೋಗಿ ತಂದೆ-ಮಗ ಸಾವು

ಬಿಪರ್‌ಜಾಯ್ ಚಂಡಮಾರುತವಾಗಿ ದುರ್ಬಲಗೊಂಡಿದೆ ಮತ್ತು ಸಂಜೆಯ ವೇಳೆಗೆ ದುರ್ಬಲವಾಗುವ ಸಾಧ್ಯತೆಗಳಿವೆ ಎಂದು ಅಹಮದಾಬಾದ್ ಹವಾಮಾನ ಸಂಸ್ಥೆಯ ನಿರ್ದೇಶಕಿ ಮನೋರಮಾ ಮೊಹಂತಿ ಅವರು ತಿಳಿಸಿದ್ದಾರೆ. ಸುಮಾರು 10 ದಿನಗಳ ಕಾಲ ಅರೆಬಿಯನ್ ಸಮುದ್ರದಲ್ಲಿ ಸುಳಿದಾಡಿದ ಚಂಡಮಾರತವು ಈಗ ದುರ್ಬಲಗೊಂಡು ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಿಗೆ ಅಪ್ಪಳಿಸಿದೆ.

ಇನ್ನಷ್ಟು ಕುತೂಹಲಕರ ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version