ಅಹಮದಾಬಾದ್: ಈ ಸಲ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಚಾರಿತ್ರಿಕ ವಿಜಯ ಗಳಿಸಿಲ್ಲ. ಅನೇಕ ದಾಖಲೆಗಳನ್ನು ಪುಡಿಗಟ್ಟಿದೆ. (Gujarat Election Results ) ಹೊಸ ದಾಖಲೆಗಳನ್ನು ಬರೆದಿದೆ. ಮುಖ್ಯವಾಗಿ 182 ಕ್ಷೇತ್ರಗಳ ಪೈಕಿ 156 ಕ್ಷೇತ್ರಗಳಲ್ಲಿ ವಿಜಯ ಮಾಲೆ ಧರಿಸಿದೆ.
2 ಲಕ್ಷ ಮತಗಳ ಅಂತರದಲ್ಲಿ ಗೆಲುವು
ಗುಜರಾತ್‌ನ ಘಾಟ್ಲೋಡಿಯಾ ಮತ್ತು ಚೌರಾಸಿ ಕ್ಷೇತ್ರದಲ್ಲಿ ಬಿಜೆಪಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸತತ ಎರಡನೇ ಸಲ ಘಾಟ್ಲೋಡಿಯಾ (1.92 ಲಕ್ಷ) ಮತಗಳಿಂದ ಸಮೀಪದ ಅಭ್ಯರ್ಥಿಯನ್ನು ಸೋಲಿಸಿದ್ದರು. ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು 1-1.5 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದರು. ವಾಟವಾ, ಒಲ್ಪಾಡ್, ಸೂರತ್ ಪಶ್ಚಿಮ, ಮಂಜಲ್ಪುರ್ ಕ್ಷೇತ್ರದಲ್ಲಿ ಇಂಥ ಗೆಲುವು ಸಿಕ್ಕಿದೆ. 15 ಕ್ಷೇತ್ರಗಳಲ್ಲಿ ವಿಜಯದ ಅಂತರ 70 ಸಾವಿರ ಮತಗಳಿಂದ ಒಂದು ಲಕ್ಷ ಮತಗಳ ತನಕ ಇತ್ತು. ಮಣಿನಗರ, ಕಾಮ್ರೇಜ್, ಪರ್ಡಿ, ನರೋದಾ, ನಾರಾಣ್‌ಪುರ, ಭಾವ್‌ನಗರ್ ಗ್ರಾಮೀಣ, ರಾವೊಪುರ, ಗಾಂಡೇವಿ, ಬಾರ್ಡೋಲಿ, ಅಕೋಟಾ, ಸಬರಮತಿ ಮೊದಲಾದ ಕ್ಷೇತ್ರಗಳಲ್ಲಿ ಇಂಥ ಗೆಲುವು ಲಭಿಸಿತ್ತು.
ಅಂಕಿಗಳಲ್ಲಿ ಗುಜರಾತ್ ಚುನಾವಣೆ ಸ್ವಾರಸ್ಯ :
೧. ಬಿಜೆಪಿ ಗೆದ್ದಿರುವ ಒಟ್ಟು 156 ವಿಧಾನಸಭಾ ಕ್ಷೇತ್ರಗಳ ಪೈಕಿ 102 ಕ್ಷೇತ್ರಗಳಲ್ಲಿ ಪಕ್ಷವು 50%ಕ್ಕಿಂತ ಹೆಚ್ಚು ಮತ ಗಳಿಸಿತ್ತು.
2. ಆಮ್ ಆದ್ಮಿ ಪಕ್ಷವು ಡೇಡಿಯಾಪಾಡಾ ಕ್ಷೇತ್ರದಲ್ಲಿ 50%ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ.
3. ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ 50%ಕ್ಕಿಂತ ಹೆಚ್ಚು ಮತ ಗಳಿಸಿದೆ. (ಪಾಟನ್ ಮತ್ತು ವಾಂಸದಾ)
4. ಘಾಟಲೋಡಿಯಾ, ಏಲಿಸ್ ಬ್ರಿಜ್ ಮತ್ತು ಮಜುರಾ ಕ್ಷೇತ್ರದಲ್ಲಿ ಬಿಜೆಪಿ 80%ಕ್ಕೂ ಹೆಚ್ಚು ಮತಗಳನ್ನು ಗಳಿಸಿದೆ.
5. ಬಿಜೆಪಿಯ ಭೂಪೇಂದ್ರ ಭಾಯಿ ರಜನಿಕಾಂತ್ ಪಟೇಲ್ ಅವರು ಘಾಟ್ಲೋಡಿಯಾ ಕ್ಷೇತ್ರದಲ್ಲಿ 82.95% ಮತಗಳನ್ನು ಗಳಿಸಿದ್ದಾರೆ.
6. ಬಿಜೆಪಿ 11 ಕ್ಷೇತ್ರಗಳಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿದೆ.
7. ಬಾಜಪ 1,000 ಮತಗಳ ಅಂತರದಲ್ಲಿ ಗೆದ್ದ ಕ್ಷೇತ್ರ ೧. ಕಾಂಗ್ರೆಸ್ ೧
8. ಬಿಜೆಪಿ ಯಾವೊಬ್ಬ ಅಭ್ಯರ್ಥಿಯೂ ಠೇವಣಿ ಕಳೆದುಕೊಂಡಿಲ್ಲ.
9. ಈ ಹಿಂದೆ ಕಾಂಗ್ರೆಸ್ 1985ರಲ್ಲಿ 149 ಕ್ಷೇತ್ರಗಳಲ್ಲಿ ಜಯ ದಾಖಲಿಸಿತ್ತು. ಈ ದಾಖಲೆಯನ್ನು ಅಳಿಸಿರುವ ಬಿಜೆಪಿ 156 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.
10. ಬಿಜೆಪಿ 1.6 ಕೋಟಿ ಮತಗಳಲ್ಲಿ ಬಿಜೆಪಿ 52.5% ಮತಗಳನ್ನು ಗಳಿಸಿದೆ. 1990ರಿಂದೀಚೆಗೆ ರಾಜ್ಯದ ಇತಿಹಾಸದಲ್ಲಿಯೇ ಇದು ದಾಖಲೆಯ ಮತ ಹಂಚಿಕೆ.
11. ಠೇವಣಿ ಕಳೆದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿಗಳ ಸಂಖ್ಯೆ 41
12. ಠೇವಣಿ ಕಳೆದುಕೊಂಡಿರುವ ಆಮ್ ಆದ್ಮಿ ಅಭ್ಯರ್ಥಿಗಳ ಸಂಖ್ಯೆ 126
13. ಆಮ್ ಆದ್ಮಿ 35 ಕ್ಷೇತ್ರಗಳಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.
14. ಆಮ್ ಆದ್ಮಿ ಗೆದ್ದಿರುವ ಐದು ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳು 2017ರಲ್ಲಿ ಬಿಜೆಪಿ, 2 ಕ್ಷೇತ್ರಗಳು ಕಾಂಗ್ರೆಸ್ ಹಾಗೂ 1 ಕ್ಷೇತ್ರ ಬಿಟಿಪಿ ಗೆದ್ದಿದ್ದ ಕ್ಷೇತ್ರಗಳಾಗಿತ್ತು.
15. ಮತ ಹಂಚಿಕೆ ವಿವರ: ಬಿಜೆಪಿ : 52.52%, ಕಾಂಗ್ರೆಸ್ : 27.3%, ಆಮ್ ಆದ್ಮಿ 12.91%