Site icon Vistara News

Gujarat election results | ಗುಜರಾತ್‌ ಮತಗಳ ಬಲದಿಂದ ರಾಷ್ಟ್ರೀಯ ಪಕ್ಷವಾಗುತ್ತಿದೆ ಆಮ್‌ ಆದ್ಮಿ ಪಾರ್ಟಿ

Delhi MCD Election Result AAP Crosses Winning Mark 126

ನವ ದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಆಮ್‌ ಆದ್ಮಿ ಪಾರ್ಟಿ, ಗುಜರಾತ್‌ ರಾಜ್ಯದ ಜನತೆಯ ಮತಗಳಿಂದಲೇ ʻರಾಷ್ಟ್ರೀಯ ಪಕ್ಷʼ ಎನಿಸಿಕೊಳ್ಳುವ ಸಾಧ್ಯತೆ ಸೃಷ್ಟಿಯಾಗಿದೆ.

ಈ ಬಗ್ಗೆ ಆಪ್‌ ಮುಖಂಡ, ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟ್ವೀಟ್‌ ಮಾಡಿದ್ದಾರೆ. ʼʼಗುಜರಾತ್‌ನ ಜನತೆಯ ಮತಗಳ ಬಲದಿಂದ ಆಪ್‌ ರಾಷ್ಟ್ರೀಯ ಪಕ್ಷವೆನಿಸಲಿದೆ. ಮೊತ್ತ ಮೊದಲ ಬಾರಿಗೆ ಶಿಕ್ಷಣ ಹಾಗೂ ಆರೋಗ್ಯದ ಆಧಾರದ ಮೇಲೆ ನಡೆಸಿದ ರಾಜಕಾರಣವನ್ನು ದೇಶದ ಜನತೆ ಒಪ್ಪಿಕೊಂಡಿದ್ದಾರೆ.ʼʼ ಎಂದವರು ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ನಲ್ಲಿ ಭಾರಿ ಜಯಭೇರಿ ಬಾರಿಸುವತ್ತ ಸಾಗಿರುವ ಬಿಜೆಪಿ ಹಾಗೂ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್‌ಗಳ ನಡುವೆ ಆಪ್‌ ಬಹಳ ಹಿಂದಿದ್ದರೂ, ರಾಷ್ಟ್ರೀಯ ಪಕ್ಷವಾಗಲು ಅಗತ್ಯವಾದ ಮತ ಪ್ರಮಾಣವನ್ನು ಪಡೆಯುವುದು ನಿಶ್ಚಿತವೆನಿಸಿದೆ.

ರಾಷ್ಟ್ರೀಯ ಪಕ್ಷವೆನಿಸಲು ಇರಬೇಕಾದ ಮಾನದಂಡ ಹೀಗಿದೆ- ಪಕ್ಷ ಯಾವುದೇ ನಾಲ್ಕು ರಾಜ್ಯಗಳಲ್ಲಿ ರಾಜ್ಯ ಪಕ್ಷವೆಂದು ಗುರುತಿಸಿಕೊಂಡಿರಬೇಕು. ರಾಜ್ಯ ಪಕ್ಷ ಎನಿಸಿಕೊಳ್ಳಬೇಕಿದ್ದರೆ ಆಯಾ ರಾಜ್ಯದಲ್ಲಿ ಎರಡು ಕ್ಷೇತ್ರಗಳನ್ನು ಹಾಗೂ 6% ಮತಗಳನ್ನು ಪಡೆದಿರಬೇಕು.‌

ಇದನ್ನೂ ಓದಿ | Gujarat Election results | ಬಿಜೆಪಿ 150 ಸ್ಥಾನ ಗಳಿಸಿದರೆ ಗುಜರಾತ್‌ನಲ್ಲಿ ಸೃಷ್ಟಿಯಾಗಲಿದೆ ಹೊಸ ಇತಿಹಾಸ

ಬಿಜೆಪಿ ಪ್ರಾಬಲ್ಯದ ಗುಜರಾತಿನಲ್ಲಿ ತನ್ನ ನೆಲೆಯನ್ನು ಭದ್ರವಾಗಿ ಊರಲು ಆಪ್‌ ಕಟಿಬದ್ಧವಾಗಿದೆ. ಆಪ್‌ ಇಲ್ಲಿ ಎರಡಂಕಿ ಸ್ಥಾನಗಳನ್ನು ಪಡೆಯುವುದು ಕಷ್ಟವೇ. ಆದರೆ ಇಲ್ಲಿ ಎರಡು ಸ್ಥಾನಗಳನ್ನು ಪಡೆದರೂ ಅದು ರಾಷ್ಟ್ರೀಯ ಪಕ್ಷವೆನಿಸಲಿದೆ. ಬಿಜೆಪಿಯನ್ನು ಎದುರಿಸಿ ರಾಷ್ಟ್ರೀಯ ನೆಲೆಯಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳುವ ಉದ್ದೇಶದಿಂದಲೇ ಆಪ್‌ ರಾಜ್ಯದ ಎಲ್ಲಾ 182 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತ್ತು.

ದೆಹಲಿ ಹಾಗೂ ಪಂಜಾಬ್‌ಗಳಲ್ಲಿ ಈಗಾಗಲೇ ಸರ್ಕಾರಗಳನ್ನು ಆಪ್‌ ಸ್ಥಾಪಿಸಿದೆ. ಗೋವಾ ಸೇರಿದಂತೆ, ಮೂರು ರಾಜ್ಯಗಳಲ್ಲಿ ʼರಾಜ್ಯ ಪಕ್ಷʼ ಎಂದು ಗುರುತಿಸಿಕೊಂಡಿದೆ. ರಾಜ್ಯ ಪಕ್ಷ ಎನಿಸಿಕೊಳ್ಳಬೇಕಿದ್ದರೆ ಆಯಾ ರಾಜ್ಯದಲ್ಲಿ ಎರಡು ಕ್ಷೇತ್ರಗಳನ್ನು ಹಾಗೂ 6% ಮತಗಳನ್ನು ಪಡೆದಿರಬೇಕು. ಹೀಗೆ ನಾಲ್ಕು ರಾಜ್ಯಗಳಲ್ಲಿ ಗುರುತಿಸಿಕೊಂಡಿದ್ದರೆ ಅದನ್ನು ರಾಷ್ಟ್ರೀಯ ಪಕ್ಷ ಎನ್ನಲಾಗುತ್ತದೆ. ದೆಹಲಿ, ಪಂಜಾಬ್‌, ಗೋವಾ ಮತ್ತೀಗ ಗುಜರಾತ್‌ ಸೇರಿ ಆಪ್‌ ಅನ್ನು ರಾಷ್ಟ್ರೀಯ ಪಕ್ಷವೆನಿಸಲಿದೆ.

ಇದನ್ನೂ ಓದಿ | Election Result 2022 | ಗುಜರಾತ್‌ನಲ್ಲಿ ಐತಿಹಾಸಿಕ ಜಯದತ್ತ ಬಿಜೆಪಿ ದಾಪುಗಾಲು, ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ

Exit mobile version