ದ್ವಾರಕಾದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಮಿಂಚು ಹರಿಸಿದ ಮೋದಿ; ಇಲ್ಲಿದೆ ಫೋಟೊ ಗ್ಯಾಲರಿ
Ramesh B
ಗಾಂಧಿನಗರ: ಗುಜರಾತ್‌ನ ದ್ವಾರಕಾದಲ್ಲಿ ಇಂದು (ಫೆಬ್ರವರಿ 25) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ದೇಶದ ಅತೀ ಉದ್ದದ ಕೇಬಲ್ ಸೇತುವೆಯನ್ನು ಉದ್ಘಾಟಿಸಿದರು. ‘ಸುದರ್ಶನ ಸೇತು’ (Sudarshan Setu) ಎಂದು ಕರೆಯಲ್ಪಡುವ ಇದು ಓಖಾ ಮತ್ತು ಬೇತ್ ದ್ವಾರಕಾ (Okha and Beyt Dwarka) ದ್ವೀಪವನ್ನು ಸಂಪರ್ಕಿಸುತ್ತದೆ. 2017ರ ಅಕ್ಟೋಬರ್‌ನಲ್ಲಿ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ. ಈ ಸೇತುವೆಯ ಅದ್ಭುತ ಚಿತ್ರಗಳು ಇಲ್ಲಿವೆ. ಇದೇ ವೇಳೆ ಮೋದಿ ಅವರು ದ್ವಾರಕಾದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಗಮನ ಸೆಳೆದರು.
ದ್ವಾರಕಾದಲ್ಲಿರುವ ʼಸುದರ್ಶನ ಸೇತುʼವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ.ʼಸುದರ್ಶನ ಸೇತುʼವಿನ ಉದ್ದ ಸುಮಾರು 2 ಕಿ.ಮೀ. ಸುಮಾರು 979 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.ʼಸುದರ್ಶನ ಸೇತುʼ ಓಖಾ ಮತ್ತು ಬೇತ್ ದ್ವಾರಕಾ ದ್ವೀಪವನ್ನು ಸಂಪರ್ಕಿಸುತ್ತದೆ.ಸೇತುವೆಯ ಎರಡೂ ಬದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳನ್ನು ಅಳವಡಿಸಲಾಗಿದೆ.ಸಿಗ್ನೇಚರ್ ಬ್ರಿಡ್ಜ್ ಎಂದು ಕರೆಯುತ್ತಿದ್ದ ಸೇತುವೆಗೆ ಬಳಿಕ ʼಸುದರ್ಶನ ಸೇತುʼ ಎಂದು ಮರುನಾಮಕರಣ ಮಾಡಲಾಗಿತ್ತು.ಬೆಳಕಿನಲ್ಲಿ ಝಗಮಗಿಸಿದ ʼಸುದರ್ಶನ ಸೇತುʼ.ಕೃಷ್ಣ ನಗರಿ ದ್ವಾರಕಾದಲ್ಲಿ ಸ್ಕೂಬಾ ಡೈವಿಂಗ್ ನಡೆಸಿದ ಮೋದಿ. ದ್ವಾರಕಾದಲ್ಲಿ ಸ್ಕೂಬಾ ಡೈವಿಂಗ್ ಮೂಲಕ ಮಿಂಚಿದ ಮೋದಿ.