Site icon Vistara News

Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಕನ್ನಡ ಶಾಸನಗಳು! ಅಲ್ಲಿ ಹಿಂದೂ ದೇವಾಲಯವಿತ್ತು!

Gyanvapi Case Kannada Inscriptions at Gyanvapi Masjid

ವಾರಾಣಸಿ: ಜ್ಞಾನವಾಪಿ ಮಸೀದಿಯು (Gyanvapi case) ಪೂರ್ವ ಅಲ್ಲಿ ಬೃಹತ್ ಹಿಂದೂ ದೇವಾಲಯವಿತ್ತು (Hindu Temple)ಎಂದು ಭಾರತೀಯ ಪುರಾತತ್ವ ಸಮೀಕ್ಷೆಯು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ (ASI Report) ಎಂದು ಹಿಂದೂ ಸಮುದಾಯವನ್ನು ಪ್ರತಿನಿಧಿಸುವ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು ಗುರುವಾರ ಹೇಳಿದ್ದಾರೆ. ಅಲ್ಲದೇ, ಮಸೀದಿಯಲ್ಲಿ ಹಿಂದೂ ದೇವಾಲಯದ 34 ಶಾಸನಗಳು (34 inscriptions) ಕಂಡುಬಂದಿವೆ ಮತ್ತು ಈ ಶಾಸನಗಳು ದೇವನಾಗರಿ(Devanagari), ಗ್ರಂಥ, ತೆಲುಗು (Telagu) ಮತ್ತು ಕನ್ನಡದಲ್ಲಿವೆ(Kannada). ಜನಾರ್ದನ, ರುದ್ರ ಮತ್ತು ಉಮೇಶ್ವರ ದೇವತೆಗಳ ಹೆಸರುಗಳು ಶಾಸನಗಳಲ್ಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈಗ ಅಸ್ತಿತ್ವದಲ್ಲಿರುವ ಕಟ್ಟಡವನ್ನು ನಿರ್ಮಿಸುವ ಮೊದಲು ಒಂದು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು ಎಂದು ಎಎಸ್ಐ ಹೇಳಿದೆ. ಇದು ಎಎಸ್ಐನ ನಿರ್ಣಾಯಕ ಸಂಶೋಧನೆಯಾಗಿದೆ ಎಂದು ಮಾಧ್ಯಮಗಳಿಗೆ ವಕೀಲ ವಿಷ್ಣು ಶಂಕರ್ ಹೇಳಿದ್ದಾರೆ.

ವರದಿಯನ್ನು ಓದಿದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು, ‘ಮಹಾ ಮುಕ್ತಿ ಮಂಟಪದಂತಹ ಪದಗಳನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ… ಹಿಂದಿನ ದೇವಾಲಯದ ಕಂಬಗಳನ್ನು ನೆಲಮಾಳಿಗೆಯನ್ನು ಮಾಡುವಾಗ ಮರುಬಳಕೆ ಮಾಡಲಾಗಿದೆ ಎಂದು ಹೇಳಿದರು.

ಜ್ಞಾನವಾಪಿ ಮಸೀದಿಯ ಸಮೀಕ್ಷೆ ವರದಿಯು ಮಸೀದಿಯ ಅಡಿಯಲ್ಲಿ ದೇವಾಲಯ ಇತ್ತು ಎಂಬುದು ಸಾಬೀತುಪಡಿಸಿದೆ. ಇದು ವಿವಿಧ ಭಾಷೆಗಳಲ್ಲಿ 34 ಶಾಸನಗಳನ್ನು ಹೊಂದಿದೆ ಎಂದು ಹಿಂದೂ ಅರ್ಜಿದಾರರ ವಕೀಲರು ಸಮೀಕ್ಷೆಯ ವರದಿಯ ಹಾರ್ಡ್ ಕಾಪಿಯನ್ನು ಸ್ವೀಕರಿಸಿದ ನಂತರ ಇಂದು ಮಾಧ್ಯಮಗಳಿಗೆ ತಿಳಿಸಿದರು.

ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿರೂಪ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಲು ವರದಿಯನ್ನು ತಕ್ಷಣವೇ ಸಾರ್ವಜನಿಕಗೊಳಿಸಲು ಅಥವಾ ಸಾಫ್ಟ್ ಕಾಪಿಗಳನ್ನು ವಿತರಿಸಲು ನಿರಾಕರಿಸಿದ್ದರು.

ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ನಂತರ ದೇಶದಲ್ಲಿ ಉದ್ಭವಿಸಿದ ಹಲವಾರು ಮಂದಿರ-ಮಸೀದಿ ವಿವಾದಗಳಲ್ಲಿ ಜ್ಞಾನವಾಪಿ ಕೂಡ ಒಂದು. ಎಎಸ್‌ಐ ವರದಿಯನ್ನು ಒಂದು ತಿಂಗಳ ಹಿಂದೆ ಮುಚ್ಚಿದ ಕವರ್‌ನಲ್ಲಿ ಸಲ್ಲಿಸಲಾಗಿತ್ತು. ಅಯೋಧ್ಯೆ ದೇವಾಲಯದ ಉದ್ಘಾಟನೆಯ ಬಳಿಕ ಈಗ ವರದಿಯನ್ನು ಬಹಿರಂಗ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲಿ ಮಂದಿರ: ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್‌ ಅಸ್ತು, ಮುಸ್ಲಿಮರ 5 ಅರ್ಜಿ ವಜಾ

Exit mobile version