Site icon Vistara News

Haryana Violence : ಹರಿಯಾಣ ಕೋಮುಗಲಭೆಗೆ ಪಾಕಿಸ್ತಾನ ಲಿಂಕ್​​?

Haryana Clash

ನುಹ್ (ಹರಿಯಾಣ): ನುಹ್ ಜಿಲ್ಲೆಯಲ್ಲಿ ಭುಗಿಲೆದ್ದ ಕೋಮುಗಲಭೆ ಮತ್ತು ಗುರುಗ್ರಾಮ್ ಸೇರಿದಂತೆ ಇತರ ಪ್ರದೇಶಗಳಿಗೆ ಹರಡಿದ ಘರ್ಷಣೆಗಳಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ಇರಬಹುದು ಎಂಬ ಅನುಮಾನದ ಮೇರೆಗೆ ಹರಿಯಾಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಪ್ರಮುಖ ವಿವರಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪಾಕಿಸ್ತಾನದೊಂದಿಗಿನ ಸಂಭಾವ್ಯ ಸಂಪರ್ಕವನ್ನು ದೃಢಪಡಿಸಿದ್ದಾರೆ.
ಘರ್ಷಣೆ ನಡೆದ ನುಹ್ ಮತ್ತು ಮೇವಾತ್ ಪ್ರದೇಶವು ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಎಂದು ಹರಿಯಾಣ ಪೊಲೀಸ್ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಮಮತಾ ಸಿಂಗ್ ಎನ್​ಡಿಟಿವಿಗೆ ತಿಳಿಸಿದ್ದಾರೆ.

ವಿಶೇಷ ತನಿಖಾ ತಂಡವು ಪಾಕಿಸ್ತಾನದ ನೆರವಿನ ಕೋನವನ್ನು ಪರಿಶೀಲಿಸುತ್ತಿದೆ. ತನಿಖೆ ಇನ್ನೂ ಮುಂದುವರಿದಿದೆ. ಈ ಸಮಯದಲ್ಲಿ ನಾವು ಈ ವಿಷಯದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನ ಮೂಲದ ಯೂಟ್ಯೂಬ್​ಗಳಲ್ಲಿ ಘರ್ಷಣೆ ಕುರಿತ ವಿಡಿಯೊಗಳು ಹಾಗೂ ಪ್ರಚೋದನೆಗಳು ನಡೆದಿರುವ ಹಿನ್ನೆಲೆಯಲ್ಲಿ ಕೇಳಿರುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ 106 ಎಫ್ಐಆರ್​ಗಳನ್ನು ದಾಖಲಿಸಲಾಗಿದೆ. 216 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 24 ಎಫ್ಐಆರ್​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗಿರು ಪೋಸ್ಟ್​​ಗಳ ವಿರುದ್ಧವಾಗಿವೆ. ಈ ಕೇಸ್​​ಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಿಂಸಾಚಾರ ಪೀಡಿತ ನುಹ್ ಜಿಲ್ಲೆಯಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ಮೂರನೇ ದಿನಕ್ಕೆ ಮುಂದುವರಿದಿತ್ತು. ರಾಜ್ಯ ಅಧಿಕಾರಿಗಳು ಡಜನ್​ಗಟ್ಟಲೆ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ, ಅವುಗಳಲ್ಲಿ ಕೆಲವು ಇತ್ತೀಚಿನ ಘರ್ಷಣೆಗಳಲ್ಲಿ ಭಾಗಿಯಾಗಿರುವವರ ಒಡೆತನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Nuh Violence: ಹರಿಯಾಣದಲ್ಲಿ ಮತ್ತೆ ಬುಲ್ಡೋಜರ್‌ ಸದ್ದು; ಹಿಂಸೆಯಲ್ಲಿ ಭಾಗಿಯಾದವರ 45 ಅಂಗಡಿಗಳ ಧ್ವಂಸ

ಹಿಂದೂಗಳ ಮೆರವಣಿಗೆ ಒಂದು ದೇವಾಲಯದಿಂದ ಮತ್ತೊಂದು ದೇವಾಲಯಕ್ಕೆ ತೆರಳುತ್ತಿದ್ದಾಗ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಗುಪ್ತಚರ ವೈಫಲ್ಯದ ಬಗ್ಗೆ ಪ್ರತಿಪಕ್ಷಗಳ ಆರೋಪಗಳನ್ನು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ತಳ್ಳಿಹಾಕಿದ್ದಾರೆ.

ನುಹ್ ವೈದ್ಯಕೀಯ ಕಾಲೇಜಿನ ಬಳಿ ಕನಿಷ್ಠ ಶೇಕಡಾ 70ರಷ್ಟು ಅಂಗಡಿಗಳು ಹಿಂದೂಗಳಿಗೆ ಸೇರಿವೆ. ಅವರು ಅನೇಕ ವರ್ಷಗಳಿಂದ ಇಲ್ಲಿದ್ದಾರೆ ಎಂದು ಅಂಗಡಿಯವರು ಹೇಳಿದ್ದಾರೆ. ನಲ್ಹಾರ್ ವೈದ್ಯಕೀಯ ಕಾಲೇಜಿನ ಸುತ್ತಲಿನ 2.6 ಎಕರೆ ಭೂಮಿ ಸೇರಿದಂತೆ 12 ವಿವಿಧ ಸ್ಥಳಗಳಲ್ಲಿ ಅಕ್ರಮ ನಿರ್ಮಾಣಗಳನ್ನು ಜಿಲ್ಲಾಡಳಿತ ಶನಿವಾರ ನೆಲಸಮಗೊಳಿಸಿದೆ.

ಅಕ್ರಮ ನಿರ್ಮಾಣಗಳು. ನೆಲಸಮಗೊಂಡ ಕಟ್ಟಡಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಬ್ರಜ್ ಮಂಡಲ್ ಧಾರ್ಮಿಕ ಯಾತ್ರೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಕೆಲವು ಅಕ್ರಮ ಕಟ್ಟಡಗಳ ಮಾಲೀಕರು ಸಹ ಭಾಗಿಯಾಗಿದ್ದರು. ನೆಲಸಮಗೊಳಿಸುವ ಕಾರ್ಯಾಚರಣೆ ಮುಂದುವರಿಯುತ್ತದೆ” ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವನಿ ಕುಮಾರ್ ಹೇಳಿದ್ದಾರೆ.

ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿರುವ ಜನರ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ. ಅವರಲ್ಲಿ ಕೆಲವರು ಹಿಂಸಾಚಾರದಲ್ಲಿ ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.

Exit mobile version