Site icon Vistara News

Heatwave: ಒಂಬತ್ತು ರಾಜ್ಯಗಳಲ್ಲಿ ಬಿಸಿಗಾಳಿ ಎಚ್ಚರಿಕೆ; 45°C ತಲುಪಿದ ತಾಪಮಾನ, ಬಿಸಿಲಿಗೆ ಹೀಗೆ ಮಾಡಿ

Heatwave

ನವ ದೆಹಲಿ: ಒಂಬತ್ತು ರಾಜ್ಯಗಳಲ್ಲಿ ಬಿಸಿಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪಶ್ಚಿಮ ಬಂಗಾಳ, ಬಿಹಾರ ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಿನ ತಾಪಮಾನದ ಆರೆಂಜ್‌ ಅಲರ್ಟ್‌, ಸಿಕ್ಕಿಂ, ಜಾರ್ಖಂಡ್, ಒಡಿಶಾ ಮತ್ತು ಉತ್ತರ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ನೀಡಿದೆ.

ಈ ಸಲದ ಬೇಸಿಗೆ ಸಾಮಾನ್ಯಕ್ಕಿಂತ ಹೆಚ್ಚು ಉಷ್ಣತೆಯಿಂದ ಕೂಡಿದೆ. ಮುಂದಿನ ವಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಪಶ್ಚಿಮ ಮಾರುತದ ಪ್ರಭಾವದಿಂದ ಗುಡುಗು ಸಹಿತ ಮಳೆಯಾಗುವುದರಿಂದ ಭಾರತದ ಕೆಲವು ಭಾಗಗಳು ಸ್ವಲ್ಪ ತಂಪಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

ಪಂಜಾಬ್ ಮತ್ತು ಹರಿಯಾಣದಲ್ಲಿ ಸೋಮವಾರ ಶಾಖದ ತರಂಗಗಳು ಬೀಸಿವೆ. ಮಂಗಳವಾರ ಇದೇ ಪರಿಸ್ಥಿತಿ ನಿರೀಕ್ಷಿಸಲಾಗಿದೆ. ಆರೆಂಟ್‌ ಅಲರ್ಟ್‌ ಹೆಚ್ಚಿನ ತಾಪಮಾನವನ್ನು ಸೂಚಿಸುತ್ತದೆ. ಇಲ್ಲಿ ದೀರ್ಘಕಾಲದವರೆಗೆ ಸೂರ್ಯನಿಗೆ ಒಡ್ಡಿಕೊಳ್ಳುವ ಅಥವಾ ಹೊರಗೆ ಹೆಚ್ಚಿನ ಕೆಲಸ ಮಾಡುವ ಜನರಲ್ಲಿ ಶಾಖದ ದುಷ್ಪರಿಣಾಮ ಆಗುವ ಸಾಧ್ಯತೆಯಿದೆ. ಮಹಾರಾಷ್ಟ್ರ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಹಲವಾರು ಗಂಟೆಗಳ ಕಾಲ ಬಸಿಲಿನಲ್ಲಿ ಕುಳಿತು 13 ಜನರು ಸಾವನ್ನಪ್ಪಿದ ಘಟನೆ ನಡೆದಿದೆ.

ಬಿಸಿಲಿಗೆ ಹೋಗುವ ಮುನ್ನ ಎಚ್ಚರಿಕೆ ವಹಿಸಿ

ತೀವ್ರವಾದ ಬಿಸಿಲಿನ ಸಮಯದಲ್ಲಿ ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ಕಾಯಿಲೆಗಳಿರುವವರು ಸೇರಿದಂತೆ ದುರ್ಬಲ ಜನರು ಹೊರಹೋಗಬಾರದು. ಸಾಕಷ್ಟು ನೀರು ಕುಡಿಯುವುದು, ORS ಸೇವನೆ, ಅಥವಾ ಅದೇ ರೀತಿಯ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಸೇವಿಸಿ ದೇಹದ ನೀರಿನಂಶ ಹಾಗೂ ತಾಪಮಾನ ಕಾಪಾಡಿಕೊಳ್ಳಲು IMD ಶಿಫಾರಸು ಮಾಡಿದೆ.

Exit mobile version