Site icon Vistara News

Video Viral: ಭಾರೀ ಮಳೆಗೆ ದಿಲ್ಲಿ ರಸ್ತೆಗಳಾದವು ಕೆರೆಗಳು! ಮಳೆ ವಿಡಿಯೋ‌ಗಳು ಫುಲ್ ವೈರಲ್

Delhi Rain

ನವದೆಹಲಿ: ದಿಲ್ಲಿಯಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ(Delhi Rain). ದೇಶದ ರಾಜಧಾನಿ ಮಳೆಗೆ ತತ್ತರಿಸಿದ್ದು, ಎಲ್ಲೆಂದರಲ್ಲಿ ಮಳೆ ನೀರು ತುಂಬಿಕೊಂಡು ರಸ್ತೆಗಳು (Roads) ಕೆರೆಗಳಂತಾಗಿವೆ! ಒಂದೆಡೆ ಮಳೆಯ ಹರ್ಷವಾದರೆ ಮತ್ತೊಂದೆಡೆ ಮಳೆಯಿಂದಾಗುತ್ತಿರುವ ತೊಂದರೆಯನ್ನು ಜನರು ಅನುಭವಿಸುತ್ತಿದ್ದಾರೆ. ಈ ಮಧ್ಯೆ, ಟ್ವಿಟರ್‌ನಲ್ಲಿ ದಿಲ್ಲಿ ಮಳೆಯ ವೈರಲ್ ವಿಡಿಯೋಗಳು (Video Viral) ಸಖತ್ ಹರಿದಾಡುತ್ತಿವೆ. ನಾನಾ ತರಹದ ವಿಡಿಯೋಗಳ ದಿಲ್ಲಿ ಮಳೆಯ ವಿವಿಧ ಮುಖಗಳನ್ನು ತೆರೆದಿಟ್ಟಿವೆ.

ಟ್ವಿಟರ್‌ ಬಳಕೆದಾರರೊಬ್ಬರು ಸ್ವಿಮ್ಮಿಂಗ್ ಪೂರ್ ಟಬ್‌ನಲ್ಲಿ ಕುಳಿತುಕೊಂಡ ರಸ್ತೆಯಲ್ಲಿ ಮೊಳಕಾಲುಮಟ ನಿಂತಿರುವ ನೀರಿನಲ್ಲಿ ಹುಟ್ಟು ಹಾಕುತ್ತಿರುವ ವಿಡಿಯೋವೊಂದನ್ನು ಷೇರ್ ಮಾಡಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿಯು, ವಿಡಿಯೋದಲ್ಲಿ ಕಾಣುವ ಪ್ರದೇಶವು ದಿಲ್ಲಿಯ ಪ್ರತಾಪ್ ಗಂಜ್ ಎಂದು ಹೇಳುತ್ತಾನೆ. ಅಲ್ಲದೇ, ಮಳೆಯ ಅವಾಂತರಕ್ಕೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಾರಣ ಎಂದು ದೂರುತ್ತಾನೆ.

ದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಕೆಸರು ತುಂಬಿದ ನೀರು ದಾರಿಯನ್ನು ಸಂಪೂರ್ಣವಾಗಿ ಆವರಿಸಿದ್ದರಿಂದ ದಾರಿ ಹೋಕರು ತುಂಬ ಎಚ್ಚರಿಕೆಯಿಂದ ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋವೊಂದು ಕೂಡ ಭಾರೀ ವೈರಲ್ ಆಗಿದೆ. ಹಾಗೆಯೇ, ದಿಲ್ಲಿಯ ಲಕ್ಷ್ಮೀ ನಗರದ ಎಂದು ಹೇಳಿಕೊಳ್ಳುವ ವಿಡಿಯೊವೊಂದರಲ್ಲಿ ನೀರು ಅಂಗಡಿಗಳಿಗೆ ನುಗ್ಗಿದ್ದು, ಮಳೆ ನೀರಿನಲ್ಲಿ ವಾಹನಗಳು ಚಲಿಸುತ್ತಿರುವುದನ್ನು ಕಾಣಬಹುದಾಗಿದೆ.

ಈ ಸುದ್ದಿಯನ್ನೂ ಓದಿ: Delhi Rain | ಭಾರಿ ಮಳೆಗೆ ದಿಲ್ಲಿಯಲ್ಲಿ 13 ಸಾವು, ಶಾಲೆಗೆ ರಜೆ, ಮನೆಯಿಂದಲೇ ಕೆಲಸ ಮಾಡಲು ಸೂಚನೆ

ಗಣ್ಯಾತಿಗಣ್ಯ ಪ್ರದೇಶ ಎಂದು ಕರೆಯಿಸಿಕೊಳ್ಳಲಾಗುವ ಸೌತ್ ಅವಿನ್ಯೂ ವಿಐಪಿ ಝೋನ್ ವಿಭಾಗದಲ್ಲಿ ಮಳೆ ಆವಾಂತರವಿದೆ. ರಸ್ತೆ ಪೂರ್ತಿ ನೀರು ಆವರಿಸಿದ್ದು, ಜನರು ಆ ನೀರಿನಲ್ಲಿ ಆಟ ಆಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ದಿಲ್ಲಿಯಲ್ಲಿ ಭಾನುವಾರದವರೆಗೆ 153 ಮಿಮೀ ಮಳೆಯಾಗಿದೆ. ಇದು 1982ರ ಬಳಿಕ ದಾಖಲಾದ ಅತಿ ಹೆಚ್ಚು ಮಳೆಯಾಗಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version