Site icon Vistara News

Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

Helicopter Crash

ರಾಯ್‌ಗಢ: ಶಿವಸೇನೆ ನಾಯಕಿ(Shivsene Leader) ಪ್ರಯಾಣಕ್ಕೆಂದು ನಿಗದಿಯಾಗಿದ್ದ ಹೆಲಿಕಾಪ್ಟರ್‌(helicopter Crash)ವೊಂದು ಮಹಾರಾಷ್ಟ್ರ(Maharashtra)ದಲ್ಲಿ ಲ್ಯಾಂಡಿಂಗ್‌ ವೇಳೆ ಪತನಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸದೇ ಭಾರೀ ಅನಾಹುತವೊಂದು ತಪ್ಪಿದೆ. ಶಿವಸೇನೆ ನಾಯಕಿ ಸುಷ್ಮಾ ಆಂದಾರೆ (Sushma Andhare) ಪ್ರಯಾಣಿಸಬೇಕಾಗಿದ್ದ ಈ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ (Landing) ವೇಳೆ ಗಿರಕಿ ಹೊಡೆದು ನೆಲಕ್ಕಪ್ಪಳಿಸಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿದೆ.

ರಾಯ್‌ಗಢದ ಮಹಾದ್‌ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಯಾವುದೋ ಒಂದು ಬಯಲು ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ ಹೆಲಿಕಾಪ್ಟರ್‌ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿತ್ತು. ಗಾಳಿಯಲ್ಲಿ ತೂಗಾಡುವಂತೆ ಕಾಣುತ್ತಿದ್ದ ಹೆಲಿಕಾಪ್ಟರ್‌ ಇದ್ದಕ್ಕಿದ್ದಂತೆ ನೆಲಕ್ಕೆ ಅಪ್ಪಳಿಸುತ್ತಿದೆ. ತಕ್ಷಣ ಆಸ್ಥಳದಲ್ಲಿ ಹೊಗೆ ಧೂಳು ತುಂಬಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಹೆಲಿಕಾಪ್ಟರ್‌ನಲ್ಲಿ ಪೈಲಟ್‌ ಹೇಗೂ ಅದರಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆಲಿಕಾಪ್ಟರ್‌ ಸಂಪೂರ್ಣವಾಗಿ ಜಖಂ ಆಗಿದೆ.ಪೊಲೀಸರು ಮತ್ತು ರಕ್ಷಣಾ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದೆ. ಇನ್ನು ತಾವು ಪ್ರಯಾಣಿಸಬೇಕಾಗಿದ್ದ ಹೆಲಿಕಾಪ್ಟರ್‌ ಪತನವಾಗಿರುವ ಬಗ್ಗೆ ಸುಷ್ಮಾ ಆತಂಕ ವ್ಯಕ್ತಪಡಿಸಿದ್ದಾರೆ. ಬಳಿಕ ತಮ್ಮ ಕಾರಿನಲ್ಲೇ ಪ್ರಚಾರ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ:United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

ಕಳೆದ ವರ್ಷ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಹೆಲಿಕಾಪ್ಟರ್‌ ದುರಂತದಿಂದ ಗ್ರೇಟ್‌ ಎಸ್ಕೇಪ್‌ ಆಗಿದ್ದರು. ಅವರು ಜಕ್ಕೂರಿನಿಂದ ಮುಳಬಾಗಿಲಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ರಣಹದ್ದು ಒಂದು ಹೆಲಿಕಾಪ್ಟರ್‌ನ ವಿಂಡ್‌ ಶೀಲ್ಡ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತು. ವಿಂಡ್‌ ಶೀಲ್ಡ್‌ ಸಂಪೂರ್ಣ ಒಡೆದು ಅಪಾಯದ ಸ್ಥಿತಿ ತಲುಪಿತು. ಕೂಡಲೇ ಎಚ್‌ಎಎಲ್‌ ಹೆಲಿಕಾಪ್ಟರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಈ ಮೂಲಕ ಭಾರಿ ಅಪಾಯದಿಂದ ಡಿ.ಕೆ. ಶಿವಕುಮಾರ್‌ ಪಾರಾಗಿದ್ದರು.  ಡಿಕೆ ಶಿವಕುಮಾರ್‌ ಅವರನ್ನು ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಸಂದರ್ಶನ ನಡೆಸುವಾಗ ಈ ಅವಘಡ ಸಂಭವಿಸಿತ್ತು. ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿತ್ತು. ರಣಹದ್ದು ಬಡಿದ ತಕ್ಷಣ ಹೆಲಿಕಾಪ್ಟರ್‌ ಗಾಜು ಪುಡಿಪುಡಿಯಾಗಿದ್ದು, ಒಂದು ಕ್ಷಣ ಡಿಕೆ ಶಿವಕುಮಾರ್‌ ಹಾಗೂ ವರದಿಗಾರನ ಮುಖದಲ್ಲಿ ಆತಂಕ ಆವರಿಸಿತ್ತು. ಜೊತೆಗಿದ್ದ ಛಾಯಾಗ್ರಾಹಕನಿಗೆ ಗಾಜಿನ ಚೂರು ಚುಚ್ಚಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದವು.

Exit mobile version