ಬೆಳಗಾವಿ: ಮಹಾರಾಷ್ಟ್ರದ ಪುಣೆ ಹೊರವಲಯದಲ್ಲಿ ಹೆಲಿಕಾಪ್ಟರ್ (Helicopter crashed) ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಪೈಲೆಟ್, ಓರ್ವ ಇಂಜಿನಿಯರ್ ಸೇರಿ ಮೂವರು ದುರ್ಮರಣ ಹೊಂದಿದ್ದಾರೆ. ಪುಣೆಯ ಆಕ್ಸ್‌ಫರ್ಡ್ ಗಾಲ್ಫ್ ಕೋರ್ಸ್ ಹೆಲಿಪ್ಯಾಡ್‌ನಿಂದ ಟೇಕಾಫ್ ಆಗಿದ್ದ ಹೆಲಿಕಾಪ್ಟರ್. ಮುಂಬೈಯ ಜುಹುನ್‌ಗೆ ಪ್ರಯಾಣ ಬೆಳೆಸುತ್ತಿತ್ತು ಎಂಬ ಮಾಹಿತಿ ಇದೆ.
ಪುಣೆಯ ಬವ್‌ದಾನ್ ಗುಡ್ಡಗಾಡು ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನವಾಗಿದೆ. ದೆಹಲಿಯ ಮೂಲದ ಖಾಸಗಿ ಸಂಸ್ಥೆಗೆ ಸೇರಿದ ವಿಮಾನ ಇದಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಪುಣೆ ಮಹಾನಗರ ಪೊಲೀಸರು, ಅಗ್ನಿಶಾಮಕ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೈಲೆಟ್‌ಗಳಾದ ಪರಂಜಿತ್ ಸಿಂಗ್, ಜಿ.ಕೆ ಪಿಳ್ಳೈ, ಇಂಜಿನಿಯರ್ ಪ್ರೀತಂ ಭರದ್ವಾಜ್ ಮೃತರು ಎಂದು ತಿಳಿದು ಬಂದಿದೆ.