Site icon Vistara News

Helicopter crashed: ನೆಲಕ್ಕಪ್ಪಳಿಸಿದ ಖಾಸಗಿ ಹೆಲಿಕಾಪ್ಟರ್‌; ನಾಲ್ವರ ಸ್ಥಿತಿ ಗಂಭೀರ-ವಿಡಿಯೋ ಇದೆ

Helicopter Crashed

ಪುಣೆ: ಖಾಸಗಿ ಹೆಲಿಕಾಪ್ಟರ್‌ವೊಂದು ಪುಣೆಯಲ್ಲಿ ಪತನ(Helicopter crashed)ಗೊಂಡಿದೆ. ಪುಣೆಯ ಪೌಡ್ ಗ್ರಾಮದ ಬಳಿ ಶನಿವಾರ ಈ ದುರ್ಘಟನೆ ನಡೆದಿದ್ದು, ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಗಾಯ(Four injured)ಗೊಂಡಿದ್ದಾರೆ. ಹೈದರಾಬಾದ್‌(Hyderabad)ನಿಂದ ನಾಲ್ಕು ಜನರನ್ನ ಹೊತ್ತು ಚಾಪರ್(Chopper) ಮುಂಬೈನ ಜುಹುಗೆ ತೆರಳುತ್ತಿತ್ತು. ಒಳಗಿದ್ದ ನಾಲ್ವರಲ್ಲಿ ಮೂವರ ಸ್ಥಿತಿ ಸ್ಥಿರವಾಗಿದೆ ಮತ್ತು ಅವರಲ್ಲಿ ಒಬ್ಬ ಕ್ಯಾಪ್ಟನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

AW 139 ಮಾದರಿಯ ಹೆಲಿಕಾಪ್ಟರ್‌ನಲ್ಲಿ ಆನಂದ್ ಕ್ಯಾಪ್ಟನ್, ಡೀರ್ ಭಾಟಿಯಾ, ಅಮರ್‌ದೀಪ್ ಸಿಂಗ್ ಮತ್ತು ಎಸ್‌ಪಿ ರಾಮ್ ಇದ್ದರು. ಆನಂದ್ ಕ್ಯಾಪ್ಟನ್ ಅವರನ್ನು ಹತ್ತಿರದ ವೈದ್ಯಕೀಯ ಸೌಲಭ್ಯದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಥೈಲೆಂಡ್‌ನಲ್ಲಿ ವಿಮಾನ ಪತನ

ಥೈಲೆಂಡ್​ನಲ್ಲಿ ನಿನ್ನೆ ಸಣ್ಣ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದರು. ರಾಜಧಾನಿ ಬ್ಯಾಂಕಾಂಕ್​ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದ ಬಳಿಕ ಪತನಗೊಂಡಿದೆ. ಥಾಯ್ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ. ವಿಮಾನದಲ್ಲಿ 7 ಪ್ರಯಾಣಿಕರಿದ್ದರು, ಇಬ್ಬರು ಪೈಲಟ್​ಗಳು ಇದ್ದರು, ವಿಮಾನದಲ್ಲಿದ್ದವರ ಗುರುತು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ವಿಮಾನದಲ್ಲಿದ್ದವರಲ್ಲಿ ಹ್ಯಾಂಕಾಂಗ್​ ಐವರು, ಚೀನೀ ಪ್ರವಾಸಿಗರು ಹಾಗೂ ಸಿಬ್ಬಂದಿ ಇದ್ದರು.

ಇನ್ನು ಎರಡು ವಾರಗಳ ಹಿಂದೆ ನೇಪಾಳ(Nepal)ದ ನುವಾಕೋಟ್ ಜಿಲ್ಲೆಯ ಶಿವಪುರಿ ಪ್ರದೇಶದಲ್ಲಿಏರ್ ಡೈನಾಸ್ಟಿ ಹೆಲಿಕಾಪ್ಟರ್ ಪತನಗೊಂಡಿದೆ. ಘಟನೆಯಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಹೆಲಿಕಾಪ್ಟರ್ ಕಠ್ಮಂಡುವಿನಿಂದ ಹೊರಟು ಸೈಫ್ರುಬೆನ್ಸಿಗೆ ತೆರಳುತ್ತಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೆಲಿಕಾಪ್ಟರ್ ಅನ್ನು ಹಿರಿಯ ಕ್ಯಾಪ್ಟನ್ ಅರುಣ್ ಮಲ್ಲಾ ಅವರು ಚಲಾಯಿಸಿದ್ದು, ಟೇಕ್ ಆಫ್ ಆದ ಕೇವಲ ಮೂರು ನಿಮಿಷಗಳ ನಂತರ ಹೆಲಿಕಾಪ್ಟರ್‌ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿತ್ತು ಎನ್ನಲಾಗಿದೆ. ಹೆಲಿಕಾಪ್ಟರ್ ಟೇಕಾಫ್ ಆಗುವಾಗ ಅದರಲ್ಲಿ ನಾಲ್ವರು ಚೀನಾದ ಪ್ರಜೆಗಳು ಮತ್ತು ಪೈಲಟ್ ಸೇರಿದಂತೆ ಒಟ್ಟು ಐದು ಮಂದಿ ಇದ್ದರು. ಚೀನಾದ ಪ್ರಜೆಗಳು ರಾಸುವಾಗೆ ತೆರಳುತ್ತಿದ್ದರು. ಈ ವೇಳೆ ಕಠ್ಮಂಡುವಿನ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸಂಪರ್ಕ ಕಳೆದುಕೊಂಡು ನೆಲಕ್ಕಪ್ಪಳಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Helicopter crashed: ನೇಪಾಳದಲ್ಲಿ ಹೆಲಿಕಾಪ್ಟರ್‌ ಪತನ; ನಾಲ್ವರ ದುರ್ಮರಣ

Exit mobile version