Site icon Vistara News

Henley Passport Index | ಪಾಕಿಸ್ತಾನದ ಪಾಸ್‌ಪೋರ್ಟ್‌ಗೆ ಬೆಲೆಯೇ ಇಲ್ಲ! ಜಪಾನ್ ಪಾಸ್‌ಪೋರ್ಟ್ ಫುಲ್ ಸ್ಟ್ರಾಂಗ್

ನವದೆಹಲಿ: ವಿದೇಶಗಳಿಗೆ ಹಾರಬೇಕೆಂದರೆ ಪಾಸ್‌ಪೋರ್ಟ್‌ ಕಡ್ಡಾಯ. ವೀಸಾ ಕೂಡ ಬೇಕಾದರೂ ಕೆಲವು ದೇಶಗಳಿಗೆ ಪಾಸ್‌ಪೋರ್ಟ್‌ ಮಾತ್ರ ಸಾಕಾಗುತ್ತದೆ. ಯಾವ ದೇಶದ ಪಾಸ್‌ಪೋರ್ಟ್‌ ಇದ್ದರೆ ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ತೆರಳಬಹುದು ಎನ್ನುವುದನ್ನು ಆಧರಿಸಿ ʼಹೆನ್ಲೆ ಪಾಸ್‌ಪೋರ್ಟ್‌ ಇಂಡೆಕ್ಸ್‌ʼ (Henley Passport Index) ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ, ಪಾಕಿಸ್ತಾನದ ಪಾಸ್‌ಪೋರ್ಟ್‌ಗೆ ಕನಿಷ್ಠ ಮೌಲ್ಯವಿದೆ!

ಇದನ್ನೂ ಓದಿ: Indian Passport | ಪಾಸ್​ಪೋರ್ಟ್​​ನಲ್ಲಿ ಪೂರ್ಣ ಹೆಸರು ಇಲ್ಲದ ಭಾರತೀಯರಿಗೆ ಈ ದೇಶಕ್ಕೆ ಪ್ರಯಾಣಿಸಲು ಇಲ್ಲ ಅವಕಾಶ

ಹೆನ್ಲೆ ಪಟ್ಟಿಯ ಪ್ರಕಾರ ಜಪಾನ್‌ ದೇಶದ ಪಾಸ್‌ಪೋರ್ಟ್‌ ಅತ್ಯಂತ ಶಕ್ತಿಯುತ ಪಾಸ್‌ಪೋರ್ಟ್‌ ಆಗಿದೆ. ಈ ಪಾಸ್‌ಪೋರ್ಟ್‌ ಹೊಂದಿರುವವರು 193 ರಾಷ್ಟ್ರಗಳಿಗೆ ವೀಸಾ ಇಲ್ಲದೆಯೇ ಪ್ರಯಾಣಿಸಬಹುದು. ಎರಡನೇ ಸ್ಥಾನದಲ್ಲಿರುವ ಸಿಂಗಾಪುರ ಮತ್ತು ದಕ್ಷಿಣ ಕೋರಿಯಾದ ಪಾಸ್‌ಪೋರ್ಟ್‌ ಇದ್ದರೆ 192 ರಾಷ್ಟ್ರಗಳಿಗೆ ವೀಸಾ ಇಲ್ಲದೆ ತೆರಳಬಹುದು. ಪಟ್ಟಿಯ ಮೂರನೇ ಸ್ಥಾನವನ್ನು ಜರ್ಮನಿ ಮತ್ತು ಸ್ಪೇನ್‌ ಹಂಚಿಕೊಂಡಿದೆ. ಈ ಪಾಸ್‌ಪೋರ್ಟ್‌ ಇದ್ದರೆ 190 ರಾಷ್ಟ್ರಗಳಿಗೆ ವೀಸಾವಿಲ್ಲದೆ ತೆರಳಬಹುದು.


ಪಟ್ಟಿಯಲ್ಲಿ ಮೊದಲ 22 ರಾಷ್ಟ್ರಗಳಲ್ಲಿ(ಏಳನೇ ಸ್ಥಾನ) ಅಮೆರಿಕ ಒಂದಾಗಿದೆ. ವೀಸಾವಿಲ್ಲದಿದ್ದರೂ ಅಮೆರಿಕದ ಪಾಸ್‌ಪೋರ್ಟ್‌ ಇದ್ದರೆ 186 ದೇಶಗಳಿಗದೆ ಪ್ರಯಾಣ ಮಾಡಬಹುದು. ರಷ್ಯಾದ ಪಾಸ್‌ಪೋರ್ಟ್‌ ಇದ್ದರೆ 118 ದೇಶಗಳಿಗೆ, ಚೀನಾದ ಪಾಸ್‌ಪೋರ್ಟ್‌ ಇದ್ದರೆ 80 ರಾಷ್ಟ್ರಗಳಿಗೆ ವೀಸಾವಿಲ್ಲದೆ ಪ್ರಯಾಣಿಸಬಹುದು. ಪಟ್ಟಿಯಲ್ಲಿ ಭಾರತ 85 ನೇ ಸ್ಥಾನದಲ್ಲಿದೆ. ನಮ್ಮ ದೇಶದ ಪಾಸ್‌ಪೋರ್ಟ್‌ಗೆ 59 ರಾಷ್ಟ್ರಗಳಿಗೆ ವೀಸಾವಿಲ್ಲದೆ ಕರೆದೊಯ್ಯುವ ಶಕ್ತಿಯಿದೆ.

ಇದನ್ನೂ ಓದಿ: Ashay Kumar | ನಾನು ಭಾರತೀಯ, ಶೀಘ್ರವೇ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವೆ, ಕೊನೆಗೂ ನಟ ಅಕ್ಷಯ್‌ ಕುಮಾರ್ ಸ್ಪಷ್ಟನೆ

ಈ ಪಟ್ಟಿಯ ಕೊನೆಯಲ್ಲಿ ಅಂದರೆ 109 ಸ್ಥಾನದಲ್ಲಿರುವುದು ಅಫ್ಘಾನಿಸ್ತಾನ. ಈ ಪಾಸ್‌ಪೋರ್ಟ್‌ ಇದ್ದರೆ ಕೇವಲ 27 ರಾಷ್ಟ್ರಗಳಿಗೆ ಪ್ರಯಾಣಿಸಬಹುದು. ಕೊನೆಯಿಂದ ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನದ ಪಾಸ್‌ಪೋರ್ಟ್‌ ಇದ್ದರೆ ಕೇವಲ 32 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಬಹುದು.

ಪಾಸ್‌ಪೋರ್ಟ್‌ ಇದ್ದರೆ ಎಷ್ಟು ದೇಶಗಳಿಗೆ ವೀಸಾವಿಲ್ಲದೆ ಪ್ರಯಾಣಿಸಬಹುದು ಎನ್ನುವುದನ್ನು ಆಧರಿಸಿ ತಯಾರಿಸಿರುವ ಪಟ್ಟಿ ಇದಾಗಿದೆ. ಆದರೆ ಯಾವ ದೇಶದ ಪಾಸ್‌ಪೋರ್ಟ್‌ ಹೆಚ್ಚು ಬಳಕೆಯಲ್ಲಿದೆ ಎನ್ನುವುದರ ಪಟ್ಟಿ ಬೇರೆಯಿದೆ. ಸದ್ಯ ಜಪಾನ್‌ನಲ್ಲಿ ಕೇವಲ 2.4 ಕೋಟಿ ಸಕ್ರಿಯ ಪಾಸ್‌ಪೋರ್ಟ್‌ಗಳಿವೆ. ಇದು ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆಯಿದೆ.

Exit mobile version